ಬೆಳಗಾವಿ: ಇಸ್ಕಾನ್ ವತಿಯಿಂದ ಇದೇ 21 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಬೋಗಾರ್ವೇಸ್ದಿಂದ ಜಗನ್ನಾಥ ರಥಯಾತ್ರೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ರಥಯಾತ್ರೆ ಅಂಗವಾಗಿ 21 ಹಾಗೂ 22 ರಂದು ಇಸ್ಕಾನ್ ದೇವಸ್ಥಾನ ಆವರಣದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಲಕ್ಷಾಂತರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬೆಳಗಾವಿಯ ಇಸ್ಕಾನ್ನ ಅಧ್ಯಕ್ಷ ಭಕ್ತಿ ರಸಮಿತ್ರ ಸ್ವಾಮೀಜಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

`ರಥಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದ್ದು, ದೊಡ್ಡ ಸಂಖ್ಯೆಯಲ್ಲಿ ಎತ್ತಿನ ಬಂಡಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. 50 ಸಾವಿರ ಪ್ರಸಾದದ ಪ್ಯಾಕೇಟ್ಗಳನ್ನು ವಿತರಿಸಲಾಗುವುದು~ ಎಂದು ಅವರು ಹೇಳಿದರು.

`ಲೋಕನಾಥ ಸ್ವಾಮೀಜಿ, ಚಂದ್ರಮೌಳಿ ಸ್ವಾಮೀಜಿ, ಭಕ್ತಿ ವಿಕಾಸ ಸ್ವಾಮೀಜಿ, ಭಕ್ತಿ ವಿನೋದ ಸ್ವಾಮೀಜಿ, ರಾಮ ಗೋವಿಂದ ಸ್ವಾಮೀಜಿ ಸೇರಿದಂತೆ ಹಲವರು ರಥಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಸಾವಿರಾರು ಜನರು ರಥಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ~ ಎಂದು ಅವರು ತಿಳಿಸಿದರು.

`ದೇಶದಲ್ಲಿ ಆರ್ಥಿಕ ಪ್ರಗತಿಯಾಗುತ್ತಿದೆ. ಅದರ ಜೊತೆಗೆ ಆಧ್ಯಾತ್ಮದ ವಿಕಾಸವೂ ಆಗಬೇಕು. ಇಲ್ಲದಿದ್ದರೆ ಸಮಾಜ ಅಸಮತೋಲನವಾಗುತ್ತದೆ. ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು ಇಂದಿನ ಅವಶ್ಯಕತೆಯಾಗಿದೆ~ ಎಂದು ಅವರು ಹೇಳಿದರು.

ರಥಯಾತ್ರೆ ಸಮಿತಿ ಅಧ್ಯಕ್ಷ ಎಂ.ಎಲ್. ಅಗರವಾಲ್, ಅನಂತ ಲಾಡ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.