ಮಂಗಳವಾರ, ಮೇ 18, 2021
30 °C

ಜಗನ್ ಆಪ್ತ ಕೋರ್ಟ್‌ಗೆ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್: ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಆಪ್ತ ಮತ್ತು ಅವರ ಸಂಸ್ಥೆಗಳ ಲೆಕ್ಕಪತ್ರಗಳ ಪರಿಶೋಧಕ ವಿಜಯ್ ಸಾಯಿ ರೆಡ್ಡಿ ಇಲ್ಲಿನ ಸಿಬಿಐ ನ್ಯಾಯಾಲಯಕ್ಕೆ ಸೋಮವಾರ ಶರಣಾಗಿದ್ದಾರೆ.ಅಕ್ರಮ ಆಸ್ತಿ ಪ್ರಕರಣ ಕುರಿತಂತೆ ವಿಜಯ್ ಸಾಯಿ ರೆಡ್ಡಿಗೆ ನೀಡಲಾಗಿದ್ದ ಜಾಮೀನನ್ನು ಆಂಧ್ರ ಪ್ರದೇಶ ಹೈಕೋರ್ಟ್ ಎರಡು ದಿನಗಳ ಹಿಂದೆ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ಶರಣಾಗಿದ್ದಾರೆ.

ಸಿಬಿಐ ನ್ಯಾಯಾಲಯವು ವಿಜಯ್ ಸಾಯಿ ರೆಡ್ಡಿ ಅವರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಅಸ್ಸಾಂ: ಸರ್ಕಾರದ್ದೇ ವಾಹಿನಿ ಪ್ರಾರಂಭ?ಗುವಾಹಟಿ (ಪಿಟಿಐ): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅನುಸರಿಸಲು ಮುಂದಾಗಿರುವ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ `ತಮ್ಮ ಸರ್ಕಾರದಿಂದ ಟಿವಿ ವಾಹಿನಿಯನ್ನು ಪ್ರಾರಂಭಿಸುವ ಯೋಜನೆ ಇದೆ~ ಎಂದು ಸೋಮವಾರ ಹೇಳಿದ್ದಾರೆ.ವಿದ್ಯುನ್ಮಾನ ಮಾಧ್ಯಮಗಳು ಮಿತಿಮೀರಿ ವರ್ತಿಸುತ್ತಿದ್ದು, ಅವುಗಳು ಮಾಡುವ ವರದಿ ನಿಷ್ಪಕ್ಷಪಾತವಾಗಿಲ್ಲ. ಹೀಗಾಗಿ ಸರ್ಕಾರದ ಕಾರ್ಯವಿಧಾನಗಳ ಬಗ್ಗೆ ಅಧಿಕೃತ ಮಾಹಿತಿ ನೀಡುವ ವಾಹಿನಿಯಿದ್ದರೆ ಸುದ್ದಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಹಾಯವಾಗಬಲ್ಲುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.ಕಾನ್ಪುರದಲ್ಲಿ 200 ಅಂಗಡಿ ಭಸ್ಮಕಾನ್ಪುರ (ಐಎಎನ್‌ಎಸ್): ಉತ್ತರ ಪ್ರದೇಶದ ಪ್ರಮುಖ ನಗರ ಕಾನ್ಪುರದ ಜನದಟ್ಟಣೆಯ ಪ್ರದೇಶದಲ್ಲಿ ಸೋಮವಾರ ಬೆಂಕಿ ತಗುಲಿ ಸುಮಾರು 200ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ನಗರದ ಬಾಕರ್‌ಗಂಜ್ ಪ್ರದೇಶದಲ್ಲಿ ಈ ಬೆಂಕಿ ಆಕಸ್ಮಿಕ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಟಿಕ್ಕು ಹತ್ಯೆ ಪ್ರಕರಣ: ಆರೋಪಿಗೆ ಸಹಕರಿಸಿದ ವ್ಯಕ್ತಿ ಬಂಧನ

ಮುಂಬೈ (ಪಿಟಿಐ): ದೆಹಲಿ ಮೂಲದ ಉದ್ಯಮಿ ಅರುಣ್‌ಕುಮಾರ ಟಿಕ್ಕು ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಪಲಾಂಡೆಗೆ ಸಹಾಯ ಮಾಡಿದ ಆರೋಪದ ಮೇಲೆ ಷೇರು ದಲ್ಲಾಳಿ ಗೌತಮ್ ವೋರಾನನ್ನು ಬಂಧಿಸಲಾಗಿದೆ.ಉದ್ಯಮಿ ಅರುಣ್‌ಕುಮಾರ (62) ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪಲಾಂಡೆಯನ್ನು ಏಪ್ರಿಲ್ 10ರಂದು ಪೊಲೀಸರು ಬಂಧಿಸಿದ್ದರು. ಆದರೆ, ಅದೇ ದಿನ ಸಂಜೆ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡ ಪಲಾಂಡೆಗೆ ಅಡಗಿಕೊಳ್ಳಲು ವೋರಾ ಸಹಕರಿಸಿದ್ದ.

 

ಏ.11 ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಥಾಯ್ಲೆಂಡ್‌ಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪಲಾಂಡ್‌ನನ್ನು ಮತ್ತೆ ಬಂಧಿಸಲಾಗಿತ್ತು.

ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಳ್ಳಲು ಸಹಕರಿಸಿದ್ದಕ್ಕೆ ವೋರಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.