ಬುಧವಾರ, ಜನವರಿ 29, 2020
29 °C

ಜಗನ್ ಸಂಬಂಧಿ ಜೈಲಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್‌ಎಸ್): ಎಮಾರ್ ಟೌನ್‌ಶಿಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್.ಜಗನ್‌ಮೋಹನ ರೆಡ್ಡಿ ಅವರ ಸಂಬಂಧಿ ಸುನಿಲ್ ರೆಡ್ಡಿ ಅವರನ್ನು ವಿಶೇಷ ನ್ಯಾಯಾಲಯ ಬುಧವಾರ ಫೆ.1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮಂಗಳವಾರ ರಾತ್ರಿ ಸುನಿಲ್ ಅವರನ್ನು ಬಂಧಿಸಲಾಗಿತ್ತು. ಅಪರಾಧ ಸಂಚಿಗೆ ಸಂಬಂಧಿಸಿದಂತೆ ಅವರು ಹಾಗೂ ಇನ್ನೊಬ್ಬ ಆರೋಪಿ ಕೊನೇರು ರೆಡ್ಡಿ ಅವರನ್ನು 15 ದಿನಗಳ ಕಾಲ ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ತನಿಖಾ ತಂಡ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಇದೇ ವೇಳೆ ಪ್ರತಿ ಅರ್ಜಿ ಸಲ್ಲಿಸಲು ಸುನಿಲ್ ವಕೀಲರು ಸಮಯಾವಕಾಶ ಕೋರಿದ್ದರಿಂದಾಗಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿ ಅವರನ್ನು ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

 

ಪ್ರತಿಕ್ರಿಯಿಸಿ (+)