ಮಂಗಳವಾರ, ಮೇ 24, 2022
25 °C

ಜಗಳೂರು ಅಭ್ಯರ್ಥಿ ಆಸ್ತಿ ಮೌಲ್ಯ 6 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು (ದಾವಣಗೆರೆ ಜಿಲ್ಲೆ):  ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರು ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಹೊಂದಿದ್ದಾರೆ. ಕ್ಷೇತ್ರದ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಚುನಾವಣಾಧಿಕಾರಿಗೆ ನೀಡಿರುವ ಪ್ರಮಾಣಪತ್ರದಲ್ಲಿ ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ.ನಗದು: ರಾಮಚಂದ್ರ ಅವರ ಬಳಿ  5.77 ರೂಪಾಯಿ ಲಕ್ಷ ನಗದು ಮತ್ತು ಅವರ ಪತ್ನಿ ಎಸ್.ಆರ್. ಇಂದಿರಾ ಅವರಲ್ಲಿ ರೂ 5 ಲಕ್ಷ ನಗದು ಇದೆ. ವಿವಿಧ ಬ್ಯಾಂಕ್‌ಗಳಲ್ಲಿ 4.134 ಲಕ್ಷ ರೂಪಾಯಿ ಠೇವಣಿ ಇದೆ. ಪತ್ನಿ ಹೆಸರಲ್ಲಿ 1148 ರೂ ಇದೆ. ರೂ 1,47,201 ಮೊತ್ತದ ಷೇರುಗಳು ಹಾಗೂ ಪತ್ನಿ ರೂ 5ಲಕ್ಷ ಜೀವ ವಿಮೆ ಹೊಂದಿದ್ದಾರೆ. ವಾಹನ: ರಾಮಚಂದ್ರ ಹೆಸರಿನಲ್ಲಿ   10ಲಕ್ಷ ರೂಪಾಯಿ ಮೌಲ್ಯದ ಸ್ಕಾರ್ಪಿಯೋ ವಾಹನ, ಪತ್ನಿ  5ಲಕ್ಷ ರೂಪಾಯಿ ಮೌಲ್ಯದ ಮಾರುತಿ ಸ್ವಿಫ್ಟ್ ಕಾರು ಹೊಂದಿದ್ದಾರೆ.ಆಭರಣ: 2500 ಗ್ರಾಂ ಚಿನ್ನ ಹಾಗೂ 12.5 ಕೆಜಿ ಬೆಳ್ಳಿ ಹಾಗೂ ಪತ್ನಿ ಹೆಸರಲ್ಲಿ 500 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ ಆಭರಣಗಳನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಜಮೀನು: ಕಡಬಗೆರೆ, ಅರಸಿಕೆರೆ ಹಾಗೂ ದೊಡ್ಡಬಾತಿ ಗ್ರಾಮದಲ್ಲಿ ರೂ 94 ಲಕ್ಷ ಮೌಲ್ಯದ 33.04 ಎಕರೆ ಜಮೀನು ಇದೆ. ನಿವೇಶನಗಳು: ಬೆಂಗಳೂರಿನಲ್ಲಿ 4000 ಚದರ ಅಡಿ ನಿವೇಶನ, ದಾವಣಗೆರೆಯಲ್ಲಿ 1600 ಚದರ ಅಡಿ ನಿವೇಶನಗಳ ಮೌಲ್ಯ ಸುಮಾರು 1.55 ಕೋಟಿ ರೂಪಾಯಿ.ಮನೆಗಳು: ದಾವಣಗೆರೆಯಲ್ಲಿ 1600 ಚದರ ಅಡಿ ವಿಸ್ತೀರ್ಣದ ಮೂರು, 2500 ಚ.ಅಡಿಯ ಒಂದು ಮನೆ ಹಾಗೂ 1200 ಚ.ಅಡಿ ವಿಸ್ತೀರ್ಣದ ಒಂದು ಮನೆ ಹೊಂದಿದ್ದಾರೆ. 

ಜಗಳೂರು ಪಟ್ಟಣದಲ್ಲಿ 1800 ಚ.ಅಡಿಯ ಮನೆ ಸೇರಿದಂತೆ ರೂ 1.99ಕೋಟಿ ಮೌಲ್ಯದ ಮನೆಗಳನ್ನು ಹೊಂದಿದ್ದಾರೆ.  ವಿವಿಧ ಬ್ಯಾಂಕ್‌ಗಳಲ್ಲಿ ರೂ 82.54 ಲಕ್ಷ ಸಾಲ ಇದೆ. ಅವರ ಪತ್ನಿ ಇಂದಿರಾ 2.17 ಲಕ್ಷ ಸಾಲ ಹೊಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.