ಬುಧವಾರ, ಜನವರಿ 29, 2020
28 °C

ಜಡವಾಗಿರುವ ಖಾದಿ ಮಂಡಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮಾಂತರ ಪ್ರದೇಶಗಳಲ್ಲಿರುವ ನಿರುದ್ಯೋಗಿಗಳಿಗೆ ಸಣ್ಣ ಕೈಗಾರಿಕೆ, ವ್ಯಾಪಾರ ಘಟಕ ಸ್ಥಾಪಿಸಲು ಖಾದಿ ಮತ್ತು ಗ್ರಾಮೋದ್ಯೋಗ ಮಂಡಲಿ ಹತ್ತು ವರ್ಷಗಳ ಹಿಂದೆ ಸಾಲ ನೀಡಿ ಪ್ರೋತ್ಸಾಹಿಸುತ್ತಿತ್ತು. ಆದರೆ ಈಗ ಅಂಥ ಯಾವ ಪ್ರೋತ್ಸಾಹ ಯೋಜನೆಗಳೂ ಇಲ್ಲ. ಈಗ ಖಾದಿ ಮಂಡಳಿ ಸಂಪೂರ್ಣ ಜಡವಾಗಿದೆ.ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಲ್ಲರಿಗೂ ಸರ್ಕಾರಿ, ಅರೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಕೈಗಾರಿಕೆ ಇಲಾಖೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ  ಅನುದಾನವನ್ನು ಕೊಟ್ಟು ನಿರುದ್ಯೋಗಿಗಳಿಗೆ ಮತ್ತು ಗ್ರಾಮೀಣ ಕೈಗಾರಿಕಾ ಚಟುವಟಿಕೆಗಳನ್ನು ಆರಂಭಿಸಲು ಪ್ರೋತ್ಸಾಹಿಸಿದರೆ ಹಳ್ಳಿಗಾಡಿನ ಯುವ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಕವಾಗುತ್ತದೆ. 

ಪ್ರತಿಕ್ರಿಯಿಸಿ (+)