ಜನಜಾಗೃತಿ ಜಾಥಾಕ್ಕೆ ಚಾಲನೆ

7
ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನ

ಜನಜಾಗೃತಿ ಜಾಥಾಕ್ಕೆ ಚಾಲನೆ

Published:
Updated:
ಜನಜಾಗೃತಿ ಜಾಥಾಕ್ಕೆ ಚಾಲನೆ

ಮೈಸೂರು: ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲೆಪ್‌ಮೆಂಟ್ (ವಿ-ಲೀಡ್) ವತಿಯಿಂದ ಪ್ರಜಾಪ್ರಭುತ್ವ ಸಬಲೀಕರಣ ಅಂಗವಾಗಿ ಬಸವೇಶ್ವರ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಜನಜಾಗೃತಿ ರಥ, ಬೀದಿ ನಾಟಕ ಹಾಗೂ ಭಿತ್ತಿಪತ್ರಗಳ ಹಂಚಿಕೆ ಅಭಿಯಾನಕ್ಕೆ ಪತ್ರಕರ್ತ ಕೃಷ್ಣವಟ್ಟಂ ಚಾಲನೆ ನೀಡಿದರು.`ನಾನು ನನ್ನ ಜೀವನದಲ್ಲಿ ಪಾರದರ್ಶಕವಾಗಿರುತ್ತೇನೆ, ನಾನು ಮಾಡುವ ಎಲ್ಲ ಕೆಲಸಗಳ ಬಗ್ಗೆ ಉತ್ತರದಾಯಿ ಆಗಿರುತ್ತೇನೆ ಹಾಗೂ ನನ್ನ ಜವಾಬ್ದಾರಿಗಳಲ್ಲಿ ಭಾಗವಹಿಸು ತ್ತೇನೆ', `ನಾನು ನನ್ನ ಮಗುವಿನ ಭವಿಷ್ಯಕ್ಕಾಗಿ ಮತ ಚಲಾಯಿಸಲು ಹೋಗು ತ್ತಿದ್ದೇನೆ' ಎಂಬ ಭಿತ್ತಿಪತ್ರ ಗಳನ್ನು ಸಾರ್ವಜನಿಕರಿಗೆ ವಿತರಿಸ ಲಾಯಿತು.ಮೈಸೂರಿನಿಂದ ಹೊರಟಿರುವ ಜಾಥಾ ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮೈಸೂರು ಗ್ರಾಮೀಣ, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರ ತಾಲ್ಲೂಕುಗಳಲ್ಲಿ ಸಂಚರಿಸಲಿದೆ.ಬಳಿಕ ಮಾತನಾಡಿದ ಕೃಷ್ಣವಟ್ಟಂ, `ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಭಾಗಕ್ಕಿಂತ ನಗರ ವಾಸಿಗಳಿಗೇ ಮತದಾನದ ಅರಿವು ಮೂಡಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಗ್ರಾಮೀಣರಲ್ಲಿ ಮತದಾನದ ಬಗ್ಗೆ ಅರಿವು ಇರಲಿಲ್ಲ. ಆದರೆ, ಇಂದು ಹಳ್ಳಿ ಜನರೇ ನಗರವಾಸಿಗಳಿಗೆ ಮತದಾನದ ಮಹತ್ವ ತಿಳಿಸುವಂತಾಗಿದೆ.ಹಿಂದೆ ಜಾತಿ ಆಧಾರಿತ ಮತದಾನವಿರಲಿಲ್ಲ. ಆದರೆ, ಇಂದು ನೂರಾರು ಜಾತಿಗಳು ಹುಟ್ಟಿಕೊಂಡಿದ್ದು, ಜಾತಿ ಆಧಾರದ ಮೇಲೆ ಚುನಾವಣೆ ನಡೆಯುತ್ತಿವೆ, ಹೀಗಾಗಬಾರದು' ಎಂದು ಹೇಳಿದರು.ವಿ-ಲೀಡ್ ಸಂಸ್ಥಾಪಕ ಅಧ್ಯಕ್ಷ ಡಾ.ಆರ್.ಬಾಲಸುಬ್ರಹ್ಮಣ್ಯಂ, ವಸಂತ ಕುಮಾರ್ ಮೈಸೂರುಮಠ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry