ಗುರುವಾರ , ಮಾರ್ಚ್ 4, 2021
20 °C

ಜನಪದ ತಾಳಕ್ಕೆ ಬುಡಕಟ್ಟು ಯುವಜನರ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಪದ ತಾಳಕ್ಕೆ ಬುಡಕಟ್ಟು ಯುವಜನರ ಹೆಜ್ಜೆ

ಬೆಂಗಳೂರು: ವಾದ್ಯಗಳು ಬೇರೆ ಬೇರೆಯಾಗಿದ್ದರೂ ಹೊಮ್ಮು­ತ್ತಿದ್ದ ತಾಳದ ನಾದಕ್ಕೆ ಹೆಜ್ಜೆಯಾದ ಬುಡಕಟ್ಟು ಯುವಜನ. ವಿವಿಧ ಜನಪದ ವಾದ್ಯಗಳು ಮೇಳೈಸಿ ಸೃಷ್ಟಿಸಿದ ಕಲಾಲೋಕ. ಹಸಿರೆಲೆ ತೊಟ್ಟು, ಕೈಯಲ್ಲಿ ಹೂಬಾಣ ಹಿಡಿದ ಯುವಕರು, ಬಣ್ಣ ಬಣ್ಣದ ದಿರಿಸು ತೊಟ್ಟು ಮೊಗದ ಅಂಚಿಗೆ ನಾಚಿಕೆ ತುಂಬಿ ಕುಣಿತಕ್ಕೆ ಹೆಜ್ಜೆಯಾದ ಯುವತಿಯರು.



ನೆಹರೂ ಯುವ ಕೇಂದ್ರ ಸಂಘಟನೆ ಮತ್ತು ಗೃಹ ಸಚಿವಾಲಯದ ವತಿಯಿಂದ ನಗ­ರದ ಯವನಿಕಾ ಸಭಾಂಗಣ­ದಲ್ಲಿ ಶನಿವಾರ ಆಯೋ­ಜಿಸಿದ್ದ ಏಳು ದಿನಗಳ ಬುಡಕಟ್ಟು ಯುವ ವಿನಿಮಯ ಶಿಬಿರದಲ್ಲಿ ಬುಡಕಟ್ಟು ಯುವಜನರ ನೃತ್ಯ ಸೃಷ್ಟಿಸಿದ ದೃಶ್ಯಗಳಿವು.

ಶಿಬಿರ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾ­ರೆಡ್ಡಿ, ‘ಬುಡಕಟ್ಟು ಜನರನ್ನು ಮುಖ್ಯವಾಹಿನಿಗೆ ತರುವ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ  ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.



ನೆಹರೂ ಯುವ ಕೇಂದ್ರ ಸಂಘಟನೆ, ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯದ ಪ್ರಧಾನ ನಿರ್ದೇಶಕ ಸಲೀಂ ಅಹಮ್ಮದ್‌, ರಾಜ್ಯ ಪೊಲೀಸ್ ಮಹಾ­ನಿರ್ದೇಶಕ ಲಾಲ್‌ ರೋಕುಮಾ ಪಚಾವೊ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಪ್ರಧಾನ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿ, ನಿರ್ದೇಶಕ ವಿಕಾಸ್‌ಕುಮಾರ್ ವಿಕಾಸ್, ಎನ್‌ವೈ­ಕೆಎಸ್‌ ಸದಸ್ಯ ಮಹಾಂತೇಶ್ ಹಟ್ಟಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.