ತರೀಕೆರೆ: ಜನಪದ ಮತ್ತು ಸಾಂಸ್ಕೃತಿಕ ಚಟುವಟಿಕೆ ಇರುವವರೆಗೆ ನೆಮ್ಮದಿ ಇರುತ್ತದೆ ಎಂದು ಶಿವಮೊಗ್ಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾಲೇಜು ವಿದ್ಯಾರ್ಥಿ ಪ್ರಮುಖ ಪ್ರದೀಪ್ ಹೇಳಿದರು.

ಇಲ್ಲಿನ ಎಸ್ಜೆಎಂ ಕಾಲೇಜಿನಲ್ಲಿ ಇತಿಹಾಸ ವಿಭಾಗ ಮತ್ತು ಮೈಸೂರಿನ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಪರಂಪರೆ ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಹೊರ ರಾಷ್ಟ್ರೀಯರಲ್ಲಿ ಭಾರತ ಎಂದರೆ ಭ್ರಷ್ಟಾಚಾರ, ಅನಕ್ಷರತೆ ಮತ್ತು ಬಡತನ ಎಂಬ ತಪ್ಪು ಕಲ್ಪನೆ ಇದೆ. ಆದರೆ ಭಾರತೀಯರು ಭಾರತ ಎಂದರೆ ಇತಿಹಾಸ, ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರ ಎಂದು ತೋರಿಸಿಕೊಟ್ಟಿದ್ದೇವೆ. ಆದರೆ ನಮ್ಮ ಇತಿಹಾಸಕ್ಕೆ ಲಿಖಿತ ರೂಪವಿಲ್ಲದೆ ಇರುವುದರಿಂದ ಅದನ್ನು ಹೇಳಿಕೊಳ್ಳಲು ಸಾದ್ಯವಾಗಿಲ್ಲ ಎಂದರು.

ಕಾಲೇಜು ಪ್ರಾಚಾರ್ಯ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಮಾತನಾಡಿ, ಆಧುನಿಕ ಬದುಕಿನ ತೀವ್ರಗತಿಯ ಒತ್ತಡದಲ್ಲಿ ಹಾಗೂ ಸಾಮಾಜಿಕ ಸ್ಥಿತ್ಯಂತರ ಮತ್ತು ಪಾಶ್ಚಿಮಾತ್ಯೀಕರಣ ಸಂದರ್ಭದಲ್ಲಿ ನಮ್ಮ ಯುವ ಪೀಳಿಗೆಗೆ ಇತಿಹಾಸ, ಪರಂಪರೆ, ಕಲೆ, ವಾಸ್ತುಶಿಲ್ಪ, ಸ್ಮಾರಕಗಳು, ಸುಂದರ ಪರಿಸರ ತಾಣಗಳು ಪಾರಂಪರಿಕ ಕ್ರೀಡೆಗಳು ಮತ್ತು ಸಾಂಪ್ರದಾಯಿಕ ಕಲೆಗಳ ಕುರಿತು ಅರಿವು, ಅಭಿಮಾನವನ್ನು ಮೂಡಿಸುವುದು ಸಮಾರಂಭದ ಉದ್ದೇಶ ಎಂದರು.

ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ. ಎಂ.ವಿ.ಭದ್ರಪ್ಪ ಉಪನ್ಯಾಸಕ ಪ್ರೊ.ಕೆ.ಎಸ್.ಮೇಲ್ಮಾಳಿಗಿ ಮತ್ತು ಪರಂಪರೆ ಕೂಟದ ಸದಸ್ಯ ವಿದ್ಯಾರ್ಥಿಗಳು ಸಮಾರಂಭದಲ್ಲಿ ಬಾಗವಹಿಸಿದ್ದರು. ಇತಿಹಾಸವನ್ನು ಬಿಂಬಿಸುವ ಸ್ಥಬ್ಧಚಿತ್ರಗಳೊಂದಿಗೆ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.