ಬೀದರ್್: ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ನಿಟ್ಟಿನಲ್ಲಿ ಹಾಗೂ ಜನರಿಗೆ ಇನ್ನಷ್ಟು ಹತ್ತಿರವಾಗಿಸಲು ಆಯ್ದ 15 ಗ್ರಾಮ ಪಂಚಾಯಿತಿಗಳನ್ನು ಸ್ಮಾರ್ಟ್್ ಪಂಚಾಯಿತಿಗಳಾಗಿ ರೂಪಿಸಲು ಬೀದರ್ ಜಿಲ್ಲಾ ಪಂಚಾಯಿತಿ ಚಿಂತನೆ ನಡೆಸಿದೆ.

ಗ್ರಾಮ ಪಂಚಾಯಿತಿಗಳ ನಡಾವಳಿಗಳನ್ನು ಆಯಾ ವ್ಯಾಪ್ತಿಯ ಗ್ರಾಮಗಳಲ್ಲಿ ಕೇಬಲ್್ ಮೂಲಕ ಪ್ರಸಾರ ಆಗುವಂತೆ ನೋಡಿಕೊಳ್ಳುವುದು ಮತ್ತು ಪಂಚಾಯಿತಿಯಲ್ಲಿ ಲಭ್ಯವಿರುವ ಕಂಪ್ಯೂಟರ್್, ಇಂಟರ್ನೆಟ್ ಬಳಸಿಕೊಂಡು ವಿಡಿಯೊ ಕಾನ್ಫರೆನ್ಸ್ ಸೌಲಭ್ಯ ಒದಗಿಸುವುದು ಸ್ಮಾರ್ಟ್ ಪಂಚಾಯಿತಿ ರೂಪಿಸುವ ಉದ್ದೇಶ.

‘ಇಂಥ ಕ್ರಮಗಳಿಂದ ಪಾರದರ್ಶಕತೆಗೆ ಒತ್ತು ನೀಡಿದಂತಾಗುತ್ತದೆ. ಜನರೂ ಗ್ರಾಮ ಪಂಚಾಯಿತಿಗಳ ನಡಾವಳಿಗಳನ್ನು ನೇರವಾಗಿ ವೀಕ್ಷಿಸುವುದು ಸಾಧ್ಯವಾಗಲಿದೆ. ವಿಡಿಯೊ ಕಾನ್ಫರೆನ್ಸ್ ಮೂಲಕ ಪಂಚಾಯಿತಿ ಕಾರ್ಯವೈಖರಿ ಗಮನಿಸುವುದು ಸಾಧ್ಯ ಎನ್ನುತ್ತಾರೆ’ ಜಿಲ್ಲಾ ಪಂಚಾಯಿತಿ ಸಿಇಒ ಉಜ್ವಲ್ ಕುಮಾರ್ ಘೋಷ್.

ವಿದ್ಯುತ್ ಲಭ್ಯತೆ, ವಿಡಿಯೊ ಕಾನ್ಫರೆನ್ಸ್ಗೆ ಬೇಕಾದ ಕಟ್ಟಡ ಸೌಲಭ್ಯದ ಅಂಶಗಳನ್ನು ಆಧರಿಸಿ ಈಗಾಗಲೇ 15 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಪ್ರಾಯೋಗಿಕ ಯೋಜನೆಯಡಿ ಈ ಚಿಂತನೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಇದರ ಯಶಸ್ಸು ಆಧರಿಸಿ ಇತರೆಡೆಯೂ ಜಾರಿಗೆ ತರಬಹುದು ಎನ್ನುತ್ತಾರೆ ಅವರು.

‘ಈಗಾಗಲೇ ಗ್ರಾಮ ಪಂಚಾಯಿತಿಗೆ ಒದಗಿಸಿರುವ ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ ಬಳಸಬಹುದು. ಕೆಲವೆಡೆ ಭಾರತ್ ನಿರ್ಮಾಣ ರಾಜೀವ್ಗಾಂಧಿ ಸೇವಾ ಕೇಂದ್ರದ ಕಟ್ಟಡ ನಿರ್ಮಾಣಗೊಂಡಿದ್ದು, ಈ ಕಟ್ಟಡವನ್ನು ವಿಡಿಯೊ ಕಾನ್ಫರೆನ್ಸ್ ಉದ್ದೇಶಗಳಿಗೆ ಬಳಸಬಹುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಲಭ್ಯ ಸಂಪನ್ಮೂಲವನ್ನೇ ಬಳಸಿಕೊಂಡು ಪ್ರಾಯೋಗಿಕ ಯೋಜನೆಯಡಿ ಸ್ಮಾರ್ಟ್ ಪಂಚಾಯಿತಿಗಳನ್ನು ರೂಪಿಸುವ ಚಿಂತನೆ ಇರುವ ಕಾರಣ ಜಿಲ್ಲಾ ಪಂಚಾಯಿತಿ ಅಥವಾ ಗ್ರಾಮ ಪಂಚಾಯತಿಗೂ ಹೆಚ್ಚಿನ ಆರ್ಥಿಕ ಹೊರೆ ಇರುವುದಿಲ್ಲ. ಆದರೆ ನಿರೀಕ್ಷೆಯಂತೆ ಜಾರಿಗೆ ಬಂದರೆ ಪಾರದರ್ಶಕತೆ, ಆಡಳಿತ ವ್ಯವಸ್ಥೆ ಚುರುಕು ಪಡೆಯಲು ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮ ಸಭೆಗಳು ಈಗ ಜನರ ನಡುವೆಯೇ ನಡೆಯುತ್ತವೆ. ಗ್ರಾಮ ಪಂಚಾಯಿತಿಗಳ ಸಾಮಾನ್ಯ ಸಭೆಗಳಲ್ಲಿ ನಡೆಯುವ ಚರ್ಚೆ, ನಡಾವಳಿಗಳನ್ನು ಲಭ್ಯ ಸೌಲಭ್ಯ ಬಳಸಿಕೊಂಡೇ ಸ್ಥಳೀಯವಾಗಿ ಪ್ರಸಾರ ಮಾಡುವುದು ಸಾಧ್ಯವಾದರೆ, ಜನರಿಗೂ ಅಲ್ಲಿ ಏನು ನಡೆಯುತ್ತಿದೆ ಎಂಬುದು ಅರಿವಿಗೆ ಬರಲಿದೆ ಎನ್ನುತ್ತಾರೆ.

ಜಿಲ್ಲಾ ಪಂಚಾಯಿತಿ ಮೂಲಗಳ ಪ್ರಕಾರ, ವಿಡಿಯೊ ಕಾನ್ಫರೆನ್ಸ್ಗೆ ಬೇಕಾಗಿರುವ ಅಗತ್ಯ ತಾಂತ್ರಿಕ ನೆರವನ್ನು ಎನ್ಐಸಿ (ನ್ಯಾಷನಲ್ ಇನ್ಫಾರ್ಮಾಟಿಕ್ಸ್ ಸೆಂಟರ್) ಅಭಿವೃದ್ಧಿ ಪಡಿಸಲಿದೆ. ಇದು ನಿರೀಕ್ಷೆಯಂತೆ ಜಾರಿಗೆ ಬಂದರೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿಯೇ ಕುಳಿತು ಪಂಚಾಯಿತಿಗಳ ಕಾರ್ಯವೈಖರಿ ಗಮನಿಸುವುದು, ನಿರ್ವಹಣೆ ಮಾಡುವುದು ಸಾಧ್ಯ. ಇದರಿಂದ ಸಮಯ ಉಳಿಯಲಿದೆ. ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳುವುದು ಸಾಧ್ಯ ಎಂದರು. ಅಲ್ಲದೆ ಪಂಚಾಯಿತಿ ಹಂತದಲ್ಲಿ ಪ್ರತಿ ಕೆಲಸಗಳಿಗೂ ಅಧಿಕಾರಿಗಳು, ಸದಸ್ಯರು ಕೇಂದ್ರ ಸ್ಥಾನಕ್ಕೆ ಬರುವುದು ತಪ್ಪಲಿದೆ.

ಈ ಹಿನ್ನೆಲೆಯಲ್ಲಿ ಆರಂಭಿಕ ಹಂತದಲ್ಲಿಯೇ ಈ ಸೌಲಭ್ಯ ತಾಲ್ಲೂಕು ಪಂಚಾಯಿತಿಗಳನ್ನು ವಿಡಿಯೊ ಕಾನ್ಫರೆನ್ಸ್ ಸಂಪರ್ಕ ಜಾಲಕ್ಕೆ ತರುವ ಚಿಂತನೆ ಇದೆ ಎಂದು ಹೇಳಿದರು.

ಒಂದು ತಿಂಗಳಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.