ನವದೆಹಲಿ (ಪಿಟಿಐ): ಹಾಕಿ ಇಂಡಿಯಾ ಲೀಗ್ನ (ಎಚ್ಐಎಲ್) ಎರಡನೇ ಆವೃತ್ತಿಯು 2014ರ ಜನವರಿ 23 ರಿಂದ ಫೆಬ್ರುವರಿ 23ರ ವರೆಗೆ ನಡೆಯಲಿದೆ.

ಫ್ರಾಂಚೈಸ್ಗಳ ಸಂಖ್ಯೆಯನ್ನು ಆರಕ್ಕೆ ಏರಿಸಲಿಕ್ಕಾಗಿ ಹೊಸ ತಂಡವೊಂದನ್ನು ಸೇರ್ಪಡೆ ಮಾಡಲಾಗುವುದು ಎಂದು ಹಾಕಿ ಇಂಡಿಯಾ ಶುಕ್ರವಾರ ಪ್ರಕಟಿಸಿದೆ.

`ಮೊದಲ ಋತುವಿನಲ್ಲಿ ಅಭೂತಪೂರ್ವ ಯಶಸ್ಸು ದೊರೆತ ಬಳಿಕ, ಎರಡನೇಯ ಋತುವಿನಲ್ಲೂ ಪ್ರೇಕ್ಷಕರು ಅದ್ಭುತ ಆಟದ ನಿರೀಕ್ಷೆಯಲ್ಲಿದ್ದಾರೆ. ಆರು ತಂಡಗಳ ನಡುವೆ ತೀವ್ರ ಹಣಾಹಣಿ ನಿರೀಕ್ಷಿಸಲಾಗಿದೆ' ಎಂದು ಹೀರೊ ಹಾಕಿ ಇಂಡಿಯಾದ ಮುಖ್ಯಸ್ಥ ನರೇಂದ್ರ ಬಾತ್ರಾ ತಿಳಿಸಿದ್ದಾರೆ.
ಮೊದಲ ಋತುವಿನಲ್ಲಿ ದೇಶದ ಪ್ರಮುಖ ಎಪ್ಪತ್ತು ಆಟಗಾರರು ಹಾಗೂ ಐವತ್ತು ವಿದೇಶಿ ಆಟಗಾರರು ಐದು ತಂಡಗಳಲ್ಲಿ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.