ಸೋಮವಾರ, ಮೇ 17, 2021
23 °C

ಜಪಾನ್: ಚಂಡಮಾರುತಕ್ಕೆ 20 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಎಪಿ): ಜಪಾನಿನ ಉತ್ತರ ಕರಾವಳಿ ಭಾಗದಲ್ಲಿ ಹಾದು ಹೋದ `ಟಲಾಸ್~ ಚಂಡಮಾರುತದಿಂದಾಗಿ ಸುರಿದ ಭಾರಿ ಮಳೆ ಹಾಗೂ ಭೂ ಕುಸಿತದಿಂದಾಗಿ 20ಜನರು ಮೃತಪಟ್ಟಿದ್ದಾರೆ. 43 ನಾಗರಿಕರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಪಶ್ಚಿಮ ಮತ್ತು ಕೇಂದ್ರ ಜಪಾನಿನ 4.6 ಲಕ್ಷ ನಿವಾಸಿಗಳಿಗೆ ಸರ್ಕಾರ ಸೂಚಿಸಿದೆ ಎಂದು ಕ್ಯೊಡೊ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಋತುವಿನಲ್ಲಿ ಅಪ್ಪಳಿಸಿದ 12ನೇ ಚಂಡಮಾರುತವಾದ ಟಲಾಸ್ ಜಪಾನಿನ ಉತ್ತರ ಭಾಗದ ಸಮುದ್ರದಲ್ಲಿ ಹಾದು ಹೋಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಚಂಡಮಾರುತವು ಶನಿವಾರ ರಾತ್ರಿ ದಕ್ಷಿಣ ಜಪಾನಿನಲ್ಲಿರುವ ಶಿಕೋಕು ದ್ವೀಪ ಮತ್ತು ಮುಖ್ಯ ದ್ವೀಪದ ಕೇಂದ್ರ ಭಾಗದ ಮೂಲಕ ಹಾದು ಹೋಗಿತ್ತು.ಚಂಡಮಾರುತವು ನಿಧಾನವಾಗಿ ಚಲಿಸುತ್ತಿರುವು ದರಿಂದ ತೀವ್ರ ಗಾಳಿ ಮಳೆ ಇನ್ನೂ ಮುಂದುವರಿಯ ಸಾಧ್ಯತೆ ಇದ್ದು, ಪ್ರವಾಹ, ಭೂಕುಸಿತ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.