ಶುಕ್ರವಾರ, ಮೇ 27, 2022
23 °C

ಜಮೀನು ಕಬಳಿಕೆ ಪ್ರಕರಣ: ಡಿಎಂಕೆ ಮಾಜಿ ಸಚಿವ ಆರ್ಮುಗಮ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

ಚೆನ್ನೈ (ಪಿಟಿಐ) : ಜಮೀನು ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಪಕ್ಷದ ಮಾಜಿ ಸಚಿವ ವೀರಪಾಂಡಿ ಎಸ್. ಅರ್ಮುಗಮ್ ಅವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇಲಂ ಜಿಲ್ಲೆಯ ಡಿಎಂಕೆ ಪಕ್ಷದ ಪ್ರಬಲ ರಾಜಕಾರಣಿಯಾಗಿರುವ ಅರ್ಮುಗಮ್ ಅವರನ್ನು ಅವರ ನಿವಾಸದ ಬಳಿ ಮಧ್ಯಾಹ್ನ ಬಂಧಿಸಲಾಯಿತು ಎಂದು ಪೋಲಿಸರು ಹೇಳಿದ್ದಾರೆ.ಮಾಜಿ ಕೃಷಿ ಸಚಿವರಾಗಿರುವ ಇವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಸೇಲಂಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 17ರಂದು ತನಿಖಾ ತಂಡದ ಅಧಿಕಾರಿಗಳು ಚೆನ್ನೈ ಮತ್ತು ಸೇಲಂ ನಲ್ಲಿರುವ ಅರುಮುಗಮ್ ಮತ್ತು ಅವರ ಸಂಬಂಧಿಕರ ಮನೆ ಹಾಗೂ ಕಚೇರಿ ಸೇರಿದಂತೆ ಸುಮಾರು 16 ಕಡೆ ದಾಳಿ ನಡೆಸಿ, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.