ಮೀರ್ಪುರ (ಪಿಟಿಐ): ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಭಾನುವಾರ ನಡೆಯುವ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಸರಣಿಯ ಸೂಪರ್ 10 ಹಂತದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಸವಾಲು ಎದುರಿಸಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ನ ಮೂರು ಪ್ರಕಾರಗಳಲ್ಲೂ ಶ್ರೇಷ್ಠ ಪ್ರದರ್ಶನ ತೋರುತ್ತಿರುವ ಜಾರ್ಜ್ ಬೇಲಿ ನೇತೃತ್ವದ ಆಸೀಸ್ ವಿಶ್ವಾಸದ ಖನಿ ಎನಿಸಿದೆ. ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಆ್ಯರನ್ ಫಿಂಚ್ ಅಮೋಘ ಫಾರ್ಮ್ನಲ್ಲಿದ್ದು ತಂಡಕ್ಕೆ ಉತ್ತಮ ಆರಂಭ ನೀಡಬಲ್ಲರು.

ಮಧ್ಯಮ ಕ್ರಮಾಂಕದಲ್ಲಿ ನಾಯಕ ಬೇಲಿ, ವಾಟ್ಸನ್ ಮತ್ತು ಮ್ಯಾಕ್ಸ್ವೆಲ್ ವೇಗವಾಗಿ ರನ್ ಕಲೆಹಾಕುವ ಸಾಮರ್ಥ್ಯ ಹೊಂದಿದ್ದಾರೆ. ವೇಗಿ ಮಿಷೆಲ್ ಜಾನ್ಸನ್ ಟೂರ್ನಿಯಿಂದ ಹೊರಗುಳಿದಿದ್ದು, ಮಂಡಿ ನೋವಿನಿಂದ ಬಳಲುತ್ತಿರುವ ಆಲ್ರೌಂಡರ್ ಜೇಮ್ಸ್ ಫಾಕ್ನರ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಸ್ಟಾರ್ಕ್, ಕ್ರಿಸ್ಟಿಯಾನ್ ಮತ್ತು ಕೌಲ್ಟರ್ ನೀಲ್ ಪ್ರಭಾವಿ ಬೌಲಿಂಗ್ ದಾಳಿ ನಡೆಸುವ ತಾಕತ್ತು ಹೊಂದಿದ್ದು, ಪಾಕ್ ತಂಡವನ್ನು ಬೇಗನೇ ಕಟ್ಟಿಹಾಕುವುದರಲ್ಲಿ ಅನುಮಾನವಿಲ್ಲ.

ಇನ್ನೊಂದೆಡೆ ಶುಕ್ರವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿರುವ ಪಾಕಿಸ್ತಾನ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.ಒಂದು ವೇಳೆ ಪಾಕ್, ಈ ಪಂದ್ಯವನ್ನು ಕೈ ಚೆಲ್ಲಿದ್ದೇ ಆದರೆ ಮುಂದಿನ ಹಂತಕ್ಕೆ ಪ್ರವೇಶಿಸುವ ಆಸೆ ಬಹುತೇಕ ಕಮರಿ ಹೋಗಲಿದೆ. ಭಾರತ ವಿರುದ್ಧ, ಪಾಕ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ವೈಫಲ್ಯ ಅನುಭವಿಸಿತ್ತು.

ನಾಯಕ ಹಫೀಜ್, ಆಫ್ರಿದಿ ಹಾಗೂ ಅಕ್ಮಲ್ ಸಹೋದರರು ತಮ್ಮ ನೈಜ ಆಟ ಪ್ರದರ್ಶಿಸಬೇಕಿದ್ದು, ಬೌಲರ್ಗಳು ತಮ್ಮ ಮೇಲಿನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇ ಆದಲ್ಲಿ ಈ ತಂಡಕ್ಕೆ ಗೆಲುವು ದಕ್ಕಿಸಿಕೊಳ್ಳುವ ಅವಕಾಶವಿದೆ.ಆಸೀಸ್ ಹಾಗೂ ಪಾಕ್ ಚುಟುಕು ಕ್ರಿಕೆಟ್ನಲ್ಲಿ ಈವರೆಗೂ 11 ಬಾರಿ ಮುಖಾಮುಖಿಯಾಗಿದ್ದು, ಪಾಕ್ 6 ಮತ್ತು ಆಸೀಸ್ 4 ಬಾರಿ ಜಯ ಸಾಧಿಸಿವೆ. ಒಂದು ಪಂದ್ಯ ಟೈ ಆಗಿದ್ದು, ಸೂಪರ್ ಓವರ್ ಅವಕಾಶದಲ್ಲಿ ಪಾಕ್ ಗೆಲುವು ದಾಖಲಿಸಿದೆ. ಹೀಗಾಗಿ ಉಭಯ ತಂಡಗಳ ನಡುವಣ ಇಂದಿನ ಪಂದ್ಯ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.
ಪಂದ್ಯದ ಆರಂಭ: ಮಧ್ಯಾಹ್ನ 3 ಗಂಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.