ಗುರುವಾರ , ಏಪ್ರಿಲ್ 15, 2021
31 °C

ಜಲಪಾತ ವೀಕ್ಷಿಸಲು ಜೋಗದ ಗುಂಡಿಗಿಳಿದ ಅಂಗವಿಕಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್ (ಶಿವಮೊಗ್ಗ ಜಿಲ್ಲೆ):    `ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ~ ಎಂಬುದು ಕವಿವಾಣಿ. ಇದನ್ನು ಸಾಬೀತುಪಡಿಸಿದ್ದಾರೆ ತುಮಕೂರು ಜಿಲ್ಲೆ ಶಿರಾ ಪಟ್ಟಣದ ಅಂಗವಿಕಲ ಯುವಕ ಮಂಜುನಾಥ್.ವಿಶ್ವಪ್ರಸಿದ್ಧ ಜೋಗ ಜಲಪಾತದ ಸೌಂದರ್ಯ ವೀಕ್ಷಿಸಲು  20 ವರ್ಷ ಪ್ರಾಯದ  ಮಂಜುನಾಥ್‌ಗೆ ಅಂಗವೈಕಲ್ಯ ಅಡ್ಡಿಯಾಗಿಲ್ಲ. ಮಂಜುನಾಥ್ ಹುಟ್ಟುವಾಗಲೇ ಎರಡೂ ಕಾಲುಗಳು ಬಲ ಕಳೆದುಕೊಂಡಿದ್ದು, ಪೋಲಿಯೊ ಪೀಡಿತವಾಗಿವೆ. ಮಂಜುನಾಥ್ ಜೋಗದ ಸೌಂದರ್ಯ ವೀಕ್ಷಿಸಲು ಬುಧವಾರ 1,450 ಮೆಟ್ಟಿಲುಗಳನ್ನು ತಮ್ಮ ಎರಡು ಕೈಗಳ ಆಧಾರದ ಮೇಲೆಯೇ ಇಳಿದು-ಹತ್ತಿದ್ದಾರೆ!. ಅದೂ ಏಕಾಂಗಿಯಾಗಿ ಯಾರ ನೆರವೂ ಇಲ್ಲದೇ!!.ಮಂಜುನಾಥ್ ಮೆಟ್ಟಿಲು ಇಳಿಯುತ್ತಿದ್ದ ದೃಶ್ಯ ನೋಡಿ ಪ್ರವಾಸಿಗರು, ಇಳಿಯಬೇಡಿ, ತೊಂದರೆ ಆಗುತ್ತದೆ ಎಂದು ಎಚ್ಚರಿಸಿದರೂ, ಮಂಜುನಾಥ್ ತಮ್ಮ ಬಹುದಿನದ ಬಯಕೆ ಈಡೇರಿಸುವ ಹುಮ್ಮಸ್ಸಿನಲ್ಲಿದ್ದರು. ಸುರಿಯುವ ಧಾರಾಕಾರ ಮಳೆಯ ನಡುವೆಯೇ 1,450 ಮೆಟ್ಟಿಲುಗಳನ್ನು ಹತ್ತಿ-ಇಳಿದು, ಇತರ ಪ್ರವಾಸಿಗರಂತೆ ಜೋಗದ ಸೌಂದರ್ಯ ಕಣ್ತುಂಬಿಕೊಂಡರು. ಸಂಭ್ರಮಸಿದರು.`ನನಗೆ ಜೀವನದಲ್ಲಿ ಜೋಗದ ಗುಂಡಿಯನ್ನು ಒಮ್ಮೆ ನೋಡಲೇಬೇಕೆಂಬುದು ಹೆಬ್ಬಯಕೆಯಾಗಿತ್ತು. ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ನನ್ನ ಆಸೆ ಈಡೇರಿಸಕೊಳ್ಳಲು ಅಂಗವೈಕಲ್ಯ ನನಗೆ ಅಡ್ಡಿಯಾಗಲಿಲ್ಲ ಎಂದು ಮಂಜುನಾಥ್ `ಪ್ರಜಾವಾಣಿ~ಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.