ಶ್ರೀರಂಗಪಟ್ಟಣ: ಟೌನ್ ವ್ಯಾಪ್ತಿಯ ಗಂಜಾಂನಲ್ಲಿ ಜಾಂಡಿಸ್ ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ.

15 ದಿನಗಳ ಹಿಂದೆ ಒಂದು ಬೀದಿಯಲ್ಲಿ ಕಾಣಿಸಿಕೊಂಡ ಈ ರೋಗ ಬಾಧೆ ಈಗ ಇಡೀ ಗಂಜಾಂಗೆ ವ್ಯಾಪಿಸಿದೆ. ಸ್ಥಳೀಯ ನಾಟಿ ವೈದ್ಯ ರಮೇಶ್ ಅವರ ಬಳಿ ಪ್ರತಿ ದಿನ ಹತ್ತಾರು ಮಂದಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಹಾಗೆ ಬಂದವರಿಗೆ ರಮೇಶ್ ಉಚಿತವಾಗಿ ಗಿಡಮೂಲಿಕೆ ಔಷಧ ಕೊಡುತ್ತಿದ್ದಾರೆ. ವಯಸ್ಕರಿಗೆ ಅಷ್ಟೇ ಅಲ್ಲದೆ, ಮಕ್ಕಳಿಗೂ ಈ ರೋಗ ಹರಡುತ್ತಿದೆ. ಅಶುದ್ಧ ನೀರನ್ನು ಕುಡಿಯುವುದರಿಂದ ಜಾಂಡಿಸ್ ಬರುತ್ತದೆ. ಜಾಂಡಿಸ್ ಅಂಟಿದ ರೋಗಿಯ ದೇಹದಲ್ಲಿ ಬಿಲೊರಿಬಿನ್ ಅಂಶ ಹೆಚ್ಚಾಗಿ ಹಿಮೊಗ್ಲೋಬಿನ್ ಕಡಿಮೆಯಾಗುತ್ತದೆ. ಇಡೀ ದೇಹ ಹಳದಿಗೆ ತಿರುಗುತ್ತದೆ. ಸಕಾಲಕ್ಕೆ ಚಿಕಿತ್ಸೆ ಪಡೆಯದಿದ್ದರೆ ಪಿತ್ತ ಜನಕಾಂಗಕ್ಕೆ ತೊಂದರೆಯಾಗುತ್ತದೆ ಎಂದು ಕಳೆದ 20 ವರ್ಷಗಳಿಂದ ಜಾಂಡಿಸ್ಗೆ ಔಷಧ ನೀಡುತ್ತಿರುವ ರಮೇಶ್ ಹೇಳುತ್ತಾರೆ.

ಗಂಜಾಂಗೆ ದೊಡ್ಡ ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ನೀರನ್ನು ಶುದ್ಧೀಕರಿಸದೆ ಕೊಡುತ್ತಿರುವುದರಿಂದ ಜಾಂಡಿಸ್ ಹರಡುತ್ತಿದೆ. ಸ್ಥಳೀಯ ಪುರಸಭೆ ನಿಗಾ ವಹಿಸದೆ ನಿರ್ಲಕ್ಷ್ಯ ತಾಳಿದೆ ಎಂದು ಪ್ರತಾಪ್, ವೇದವತಿ, ಪಾಪಣ್ಣಿ ಇತರರು ದೂರುತ್ತಾರೆ.

`ಗಂಜಾಂಗೆ ಶೇ.100ರಷ್ಟು ಶುದ್ಧೀಕರಿಸಿದ ಕುಡಿಯುವ ನೀರು ಕೊಡುತ್ತಿದ್ದೇವೆ. ಆದರೆ ಮನೆಯಲ್ಲಿ ನೀರು ಸಂಗ್ರಹಿಸುವ ತೊಟ್ಟಿ, ಪಾತ್ರೆಗಳನ್ನು ಶುಚಿಗೊಳಿಸದ ಕಾರಣ ಜಾಂಡಿಸ್ ಹರಡುತ್ತಿರಬಹುದು~ ಎಂದು ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಶಂಕೆ ವ್ಯಕ್ತಪಡಿಸುತ್ತಾರೆ.

ಗಂಜಾಂನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಜಾಂಡಿಸ್ ಹರಡಿದ್ದರೂ ಆರೋಗ್ಯ ಇಲಾಖೆ ಗಮನ ಹರಿಸಿಲ್ಲ ಎಂದು ದಸಂಸ ತಾಲ್ಲೂಕು ಸಂಚಾಲಕ ಗಂಜಾಂ ರವಿಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಂಜಾಂನಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಜಾಂಡಿಸ್ ಬಂದಿದೆ. ರೋಗಿಗಳು ಶ್ರೀರಂಗಪಟ್ಟಣ, ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಹೋಮಿಯೋಪತಿ ಚಿಕಿತ್ಸೆ ಪಡೆದಿದ್ದಾರೆ. ಆದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ. ಆರೋಗ್ಯ ಇಲಾಖೆ ಇದ್ದೂ ಇಲ್ಲದಂತಿದೆ ಎಂದು ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.