ಹೊಳೆನರಸೀಪುರ: ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ನಿರ್ಮಾಣಕ್ಕೆ ಹೇಮಾವತಿ ನದಿ ದಡದಲ್ಲಿ ₨ 2.84 ಕೋಟಿ ವೆಚ್ಚದಲ್ಲಿ ಜಾಕ್ವೆಲ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.

ಅರಕಲಗೂಡು ರಸ್ತೆಯ ಪೆಟ್ರೋಲ್ ಬಂಕ್ ಸಮೀಪ ಜಾಕ್ವೆಲ್ ನಿರ್ಮಿಸಲು ನಿಗದಿ ಮಾಡಿರುವ ಸ್ಥಳವನ್ನು ಸೋಮವಾರ ಪರಿಶೀಲಿಸಿದ ಶಾಸಕರು ಈ ಜಾಕ್ವೆಲ್ ನಿರ್ಮಾಣವಾದಲ್ಲಿ ಮುಂದಿನ 25 ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.

ಕೇಂದ್ರ ಸರ್ಕಾರದ ಕರ್ನಾಟಕ ಮುನ್ಸಿಪಲ್ ರಿಸೋರ್ಸ್ ಫಂಡ್ (ಕೆ.ಎಂ.ಆರ್.ಪಿ) ವತಿಯಿಂದ ಹಣ ಒದಗಿಸಲಾಗಿದ್ದು, ಕಾಮಗಾರಿ 13 ತಿಂಗಳಲ್ಲಿ ಪೂರ್ಣಗೊಳ್ಳುವುದು ಎಂದು ತಿಳಿಸಿದರು. ಎಂಜಿನಿಯರ್ ಹೇಮಂತ್ಕುಮಾರ್, ಈ ಕಾಮಗಾರಿಯ ಗುತ್ತಿಗೆದಾರ ನಾರಾಯಣರೆಡ್ಡಿ, ಪುರಸಭೆ ಎಂಜಿನಿಯರ್ ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.