ಗುರುವಾರ , ಜೂನ್ 24, 2021
24 °C

ಜಾಗತಿಕ ಕುಬೇರರ ಪಟ್ಟಿಯಲ್ಲಿ ಭಾರತೀಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ವಿಶ್ವದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರ ಸಂಖ್ಯೆ ಶೇ 4ರಷ್ಟಿದ್ದು, ಅವರಲ್ಲಿ ಅಂಬಾನಿ ಸೋದರರು, ಅಜೀಂ ಪ್ರೇಮ್‌ಜಿ, ಎನ್. ಆರ್. ನಾರಾಯಣಮೂರ್ತಿ ಮತ್ತಿತರರು ಇದ್ದಾರೆ.ಫೋಬ್ಸ್ ನಿಯತಕಾಲಿಕೆಯು ಪಟ್ಟಿ ಮಾಡಿರುವ ವಿಶ್ವದ ಅತ್ಯಂತ ಶ್ರೀಮಂತರ ಸಾಲಿನಲ್ಲಿ ಈ ವರ್ಷ 1,226 ಮಂದಿ ಸೇರ್ಪಡೆಯಾಗಿದ್ದಾರೆ.ಈ ಜಾಗತಿಕ ಕುಬೇರರ ಪಟ್ಟಿಯಲ್ಲಿ, ಮೆಕ್ಸಿಕೊದ ದೂರಸಂಪರ್ಕ ದೊರೆ ಕಾರ್ಲೋಸ್ ಸ್ಲಿಮ್ (72) ಮೊದಲ ಸ್ಥಾನದಲ್ಲಿ ಇದ್ದಾರೆ.ಸ್ಲಿಮ್ ಅವರು ಸತತ ಮೂರನೇ ವರ್ಷವೂ ಈ ಸ್ಥಾನ ಉಳಿಸಿಕೊಂಡಿದ್ದಾರೆ.  ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ದ್ವಿತೀಯ ಸ್ಥಾನದಲ್ಲಿ ಮತ್ತು ಅಮೆರಿಕದ ಬಂಡವಾಳ ಹೂಡಿಕೆದಾರ ವಾರನ್ ಬಫೆಟ್ 3ನೇ ಸ್ಥಾನದಲ್ಲಿ ಇದ್ದಾರೆ.ಜಾಗತಿಕ ಮಟ್ಟದ ಆಗರ್ಭ ಸಿರಿವಂತರ ಸಂಖ್ಯೆಯು ಈ ಬಾರಿ ದಾಖಲೆ ಪ್ರಮಾಣದಲ್ಲಿ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಕುಬೇರರ ಸಂಖ್ಯೆ ಶೇ 1 ರಷ್ಟು ಹೆಚ್ಚಳಗೊಂಡಿದೆ.25 ವರ್ಷಗಳ ಹಿಂದೆ ವಿಶ್ವದ ಮುಂಚೂಣಿ ಸಿರಿವಂತರ ಸಂಖ್ಯೆ ಕೇವಲ 140 ಇತ್ತು. ಈಗ ಅದು 1226ಕ್ಕೆ ಏರಿಕೆಯಾಗಿದೆ.ಭಾರತೀಯರ ಪಾಲು: ಜಾಗತಿಕ ಕುಬೇರರ ಪಟ್ಟಿಯಲ್ಲಿ ಭಾರತದ 48 ಮಂದಿ ಸಿರಿವಂತರು ಸ್ಥಾನಪಡೆದಿದ್ದಾರೆ. ಜತೆಗೆ ಇಂಡೋನೇಷ್ಯಾ, ಐರ್ಲೆಂಡ್, ಥಾಯ್ಲೆಂಡ್, ಬ್ರಿಟನ್ ಮತ್ತು ಅಮೆರಿಕದಲ್ಲಿ ನೆಲೆಸಿರುವ 9 ಮಂದಿ ಭಾರತೀಯ ಸಂಜಾತರೂ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದರಿಂದ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿನ ಭಾರತೀಯರ ಸಂಖ್ಯೆ 57ಕ್ಕೆ ಏರಿದೆ.ಭಾರತದ 48 ಕುಬೇರರ ಒಟ್ಟು ಸಂಪತ್ತಿನ ಮೌಲ್ಯವು ್ಙ 9,75,000 ಕೋಟಿಗಳಷ್ಟಿದೆ.

ಭಾರತದ ಸಿರಿವಂತರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ (54) 1,11,500 ಕೋಟಿಗಳಷ್ಟು ಸಂಪತ್ತು ಹೊಂದಿ ಮೊದಲ ಸ್ಥಾನದಲ್ಲಿ ಇ್ದ್ದದರೆ, ಜಾಗತಿಕ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿ ಇದ್ದಾರೆ. ಕಳೆದ ವರ್ಷ ್ಙ 23,500 ಕೋಟಿಗಳಷ್ಟು ಸಂಪತ್ತು ಕಳೆದುಕೊಂಡಿದ್ದರೂ, ವಿಶ್ವದ ಅತಿ ಶ್ರೀಮಂತ ಭಾರತೀಯ ಎನ್ನುವ ಅವರ ಸ್ಥಾನಮಾನಕ್ಕೆ ಯಾವುದೇ ಧಕ್ಕೆಯಾಗಿಲ್ಲ.ಮುಖೇಶ್ ಒಡೆತನದ ತೈಲ ಮತ್ತು ನೈಸರ್ಗಿಕ ಅನಿಲ ವಹಿವಾಟು ನಿರ್ವಹಿಸುವ ವಾಣಿಜ್ಯ ಒಕ್ಕೂಟ ಮತ್ತು ತೈಲ ಸಚಿವಾಲಯದ ಮಧ್ಯೆ, ಕಾವೇರಿ - ಗೋದಾವರಿ ನದಿಪಾತ್ರದಲ್ಲಿನ `ಡಿ6~ ನಿಕ್ಷೇಪಕ್ಕೆ ಸಂಬಂಧಿಸಿದಂತೆ ನಡೆದ ಸಂಘರ್ಷದ ಪರಿಣಾಮವಾಗಿ ಕಳೆದ ವರ್ಷ ರಿಲಯನ್ಸ್ ಇಂಡಸ್ಟ್ರೀಸ್‌ನ ಷೇರು ಮಾರುಕಟ್ಟೆಯ  ಮೌಲ್ಯ ಕುಸಿತ ಕಂಡಿತ್ತು.

 

      

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.