ಬುಧವಾರ, ಜೂನ್ 23, 2021
29 °C

ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕೆಲವು ದಶಕಗಳ ಹಿಂದೆ ಊಹಿಸಲೂ ಸಾಧ್ಯವಾಗದಿದ್ದಂತಹ ಘಟನೆಗಳು ಆಧುನಿಕ ಜಗತ್ತಿನಲ್ಲಿ ಸಂಭವಿಸುತ್ತಿವೆ. ವಾತಾವರಣದಲ್ಲೂ ಏರುಪೇರಾಗುತ್ತಿದೆ. ಜಾಗತಿಕ ತಾಪಮಾನವೂ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ನಿವೃತ್ತ ಪ್ರಾಚಾರ್ಯ ಜಿ.ಎಂ. ವೀರಭದ್ರಯ್ಯ ಅಬಿಪ್ರಾಯಪಟ್ಟರು.ಸ್ಥಳೀಯ ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ದಾನಿಗಳ ಸ್ಮರಣೆ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.`ಬಳ್ಳಾರಿ ಅಭಿವೃದ್ಧಿ ಆಗಿದೆ~ ಎಂದು ಅನೇಕ ಮುಖಂಡರು ಹೇಳುತ್ತಿದ್ದಾರೆ. ಕೇವಲ ಗಗನಚುಂಬಿ ಕಟ್ಟಡಗಳು ತಲೆ ಎತ್ತಿ, ಚತುಷ್ಪಥ ರಸ್ತೆಗಳು ನಿರ್ಮಾಣವಾಗಿರುವುದನ್ನೇ ಅಭಿವೃದ್ಧಿ ಎಂದು ತಿಳಿಯಲಾಗಿದೆ. ಆದರೆ, ಮಾನವ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿ ಎಂದ ಅವರು, ಯಾರೋ ಕೆಲವರು ಹೆಲಿಕಾಪ್ಟರ್‌ಗಳಲ್ಲಿ ಓಡಾಡುತ್ತಿದ್ದರೆ, ಸಾವಿರಾರು ಜನ ಕನಿಷ್ಠ ಶೌಚಾಲಯ ಸೌಲಭ್ಯವೂ ಇಲ್ಲದೆ, ಬಹಿರಂಗವಾಗಿಯೇ ಶೌಚಕ್ಕೆ ತೆರಳುತ್ತಿರುವುದು ಅಭಿವೃದ್ಧಿಹೀನತೆಯ ದ್ಯೋತಕವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಜೆ.ಎಸ್. ನೇಪಾಕ್ಷಪ್ಪ, ವೀರಣ್ಣ ಜಿನಗಾ, ವಿ.ಎಂ. ರಾಜಶೇಖರಯ್ಯ, ಹಂಪನಗೌಡ, ಬಿ.ನಾಗಭೂಷಣಗೌಡ, ಎಚ್.ಎಂ. ಕೊಟ್ರಯ್ಯ, ವಿಕ್ರಮ್ ಹಿರೇಮಠ ಪಾಲ್ಗೊಂಡಿದ್ದರು.ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ‌್ಯಾಂಕ್ ಗಳಿಸಿದ ಶ್ರೀಲತಾ ದೇಸಾಯಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಸುಶೀಲಾ ಶಿರೂರ ಕಾರ್ಯಕ್ರಮ ನಿರೂಪಿಸಿದರು. ಜಾನೇಕುಂಟೆ ಸಣ್ಣಬಸವರಾಜ್ ಸ್ವಾಗತಿಸಿದರು. ಸುರೇಶಬಾಬು ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.