ಅಂಕೋಲಾ:  ಜಾಗತೀಕರಣ ಪ್ರಕ್ರಿಯೆಯು ನಮ್ಮ ಕೃಷಿ, ಉದ್ಯಮ, ವಿದ್ಯೆ ಮತ್ತು ಜೀವನ ವಿಧಾನದ ಮೇಲೆ ಏಕಮುಖಿಯಾದ ಅತಿಕ್ರಮಣ ನಡೆಸುತ್ತಿರುವುದರಿಂದ ಸಮೃದ್ಧಮಯವಾದ ಭಾರತೀಯ ಬಹುಮುಖಿ ಸಂಸ್ಕೃತಿಯು ಅಪಾಯಕ್ಕೆ ಒಳಗಾಗಿದೆ ಎಂದು ಕರ್ನಾಟಕ ರಾಜ್ಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನ ಗೋಧೂಳಿ ಪ್ರಕಾಶನ, ಹೊನ್ನಾವರದ ಜಾನಪದ ವಿಶ್ವ ಪ್ರತಿಷ್ಠಾನ, ಸ್ಥಳೀಯ ಕರ್ನಾಟಕ ಸಂಘದ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಇಲ್ಲಿಯ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಜಾನಪದ ದೀಪಾರಾಧನೆ ಮತ್ತು ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಏಕಸಂಸ್ಕೃತಿಯ ಅಧಿಪತ್ಯಕ್ಕಿಂತ ಅನೇಕ ಸಂಸ್ಕೃತಿಗಳು ಉಸಿರಾಡುವಂತಹ ಅವಕಾಶವನ್ನು ಸೃಷ್ಟಿಸಲು ಜನಪದ ಸಾಹಿತ್ಯ, ಸಂಸ್ಕೃತಿಯನ್ನು ಬಳಸಿಕೊಳ್ಳುವ ಮೂಲಕ ಜಾಗತೀಕರಣದ ಸವಾಲುಗಳನ್ನು ಎದುರಿಸಬೇಕು ಎಂದರು.

ಜಾನಪದವು ಆಧುನಿಕತೆಯ ವೈರಿಯಲ್ಲ, ಸ್ವಾಭಿಮಾನಿ ಮತ್ತು ಸ್ವಾವಲಂಬಿ ಬದುಕಿನ ಸಂಕೇತವಾದ ಜನಪದ ಸಾಹಿತ್ಯ ಸಂಸ್ಕೃತಿಗಳನ್ನು ರಕ್ಷಿಸುವ ಉದ್ದೇಶದಿಂದ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ದಿ. ವಿ.ಎಸ್. ಆಚಾರ್ಯ ಅವರು ಜನಪದ ಅಧ್ಯಯನಕ್ಕೆ ಸ್ವತಂತ್ರ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದಾರೆ ಎಂದು ಉಲ್ಲೇಖಿಸಿದ ಅವರು, ಈಗಾಗಲೇ ವಿಶ್ವವಿದ್ಯಾಲಯಕ್ಕೆ 173 ಎಕರೆ ಜಮೀನನ್ನು ಹಾವೇರಿ ಜಿಲ್ಲೆ ಶಿಗ್ಗಾಂವಿ ಬಳಿಯ ಗೊಟಗೋಡಿ ಬಳಿ ನೀಡಲು ಸರ್ಕಾರ ಮುಂದಾಗಿದೆ.

6 ನಿಕಾಯಗಳು, 16 ವಿಭಾಗಗಳನ್ನು ತೆರೆಯುವ ಉದ್ದೇಶವಿದ್ದು, ಅಲಕ್ಷಿತ ಸಮುದಾಯಗಳ ಅಧ್ಯಯನಕ್ಕೆ ವಿ.ವಿ. ಆದ್ಯತೆ ನೀಡಲಿದೆ ಎಂದರು.

ಜಾನಪದ ವಿಶ್ವ ಪ್ರತಿಷ್ಠಾನದ ಸಂಚಾಲಕ ಎನ್.ಆರ್. ನಾಯಕ ರಚಿಸಿದ ನಾಡವರ ಸಾಂಸ್ಕೃತಿಕ ಅಧ್ಯಯನ ಮತ್ತು ಹಾಲಕ್ಕಿಗಳ ಸಂಸ್ಕೃತಿ ಕೃತಿಗಳನ್ನು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಎಸ್.ಆರ್. ನಾಯಕ ಲೋಕಾರ್ಪಣೆಗೊಳಿಸಿದರು.

ಮೂಡಲಿ ಬೆಳಕು, ನಂಬಿಕೆ ಮತ್ತು ನಿಷೇಧಗಳು, ಎನ್.ಆರ್. ನಾಯಕರ ಕಾವ್ಯಾನುಸಂಧಾನ ಕೃತಿಗಳನ್ನು ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ ಬಿಡುಗಡೆಗೊಳಿಸಿದರು. ಡಾ.ಜಯಪ್ರಕಾಶ ಶೆಟ್ಟಿ, ಉಪನ್ಯಾಸಕ ಎಸ್.ವಿ. ವಸ್ತ್ರದ, ಡಾ.ನಿಜಲಿಂಗಪ್ಪ ಮಟ್ಟಿಹಾಳ, ದಿವ್ಯಪ್ರಕಾಶ ಮತ್ತು ಶಾಂತಾರಾಮ ನಾಯಕ ಕೃತಿಗಳನ್ನು ಪರಿಚಯಿಸಿದರು.

ಡಾ. ಶಿವಾನಂದ ನಾಯಕ ಸ್ವಾಗತಿಸಿದರು. ಗೋಧೂಳಿ ಪ್ರಕಾಶನದ ಸಂಚಾಲಕ ಎಚ್.ಎಮ್. ಬೋರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಂತಕ ವಿ.ಜೆ. ನಾಯಕ ಆಶಯ ನುಡಿಗಳನ್ನಾಡಿದರು. ಜಗದೀಶ ನಾಯಕ, ಜೆ. ಪ್ರೇಮಾನಂದ ನಿರೂಪಿಸಿದರು. ವೆಂಕಟ್ರಮಣ ನಾಯಕ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.