ಬೆಂಗಳೂರು: `ನಾನು ಚಿಕ್ಕವನಿದ್ದಾಗ ನನ್ನ ತಾಯಿಗೆ ಗರ್ಭಸ್ರಾವವಾಗಿ ರಕ್ತದ ಅವಶ್ಯಕತೆ ಇತ್ತು. ಆಗ ಸಂಪರ್ಕ ಸಾಧನಗಳ ಕೊರತೆ ಇದ್ದ ಕಾರಣ ಬಸ್ಸಿನ ಮೂಲಕ ತಂದೆಯವರು ಬರೆದು ಕಳುಹಿಸಿದ್ದ ಚೀಟಿಯಿಂದ ವಿಷಯ ತಿಳಿದು ಕೂಡಲೇ ತಾಯಿಯವರ ಬಳಿಗೆ ಧಾವಿಸಿದೆ.

ಹಣಕ್ಕೂ ತೊಂದರೆ ಇತ್ತು. ಪರದಾಟದ ಬಳಿಕ ರೂ 250ಕ್ಕೆ ಒಂದು ಬಾಟಲಿ ರಕ್ತದ ವ್ಯವಸ್ಥೆ ಮಾಡಿದೆವು. ತಾಯಿ ಬದುಕುಳಿದರು. ಜನ್ಮ ಕೊಡುವ ಯಾವ ತಾಯಂದಿರಿಗೂ ಕಷ್ಟ ಬಾರದಿರಲೆಂದು ಅಂದೇ ರಕ್ತದಾನ ಮಾಡಲು ತೀರ್ಮಾನಿಸಿದ್ದೆ'.

ನಗರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ `ವಿಶ್ವ ರಕ್ತದಾನಿಗಳ ದಿನಾಚರಣೆ' ಕಾರ್ಯಕ್ರಮದಲ್ಲಿ 137 ಸಲ ರಕ್ತದಾನ ಮಾಡಿರುವ ಬೆಂಗಳೂರಿನ ಡಾ.ಕೆ.ನಾಗರಾಜರಾವ್ ಅವರು ತಮ್ಮ ಒಡಲಾಳದ ಮಾತನ್ನು ಗದ್ಗದಿತರಾಗಿ ನುಡಿದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು `ನನ್ನ ತಾಯಿಗೆ ಉಂಟಾಗಿದ್ದ ಸಮಸ್ಯೆಯೇ ನಾನು ರಕ್ತದಾನದಲ್ಲಿ ತೊಡಗಿಕೊಳ್ಳಲು ಪ್ರೇರಣೆ. ರಕ್ತದಾನ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲ. ಬದಲಿಗೆ ನಮ್ಮ ಚೈತನ್ಯ ಹೆಚ್ಚುತ್ತದೆ. ನನಗೀಗ ವಯಸ್ಸಾಗಿದೆ. ರಕ್ತದಾನಕ್ಕೆ ಸಿದ್ಧವಿದ್ದರೂ, ನಿಮಗೆ ವಯಸ್ಸಾಗಿದೆ. ನಿಮ್ಮ ರಕ್ತ ಬೇಡ ಎಂದು ಹೇಳುತ್ತಾರೆ. ನಾನು ಆರೋಗ್ಯದಿಂದ ಇದ್ದು, ಇನ್ನೂ ರಕ್ತ ನೀಡಬೇಕು ಎಂಬ ಹಂಬಲ ಇದೆ' ಎಂದು ಅನಿಸಿಕೆ ವ್ಯಕ್ತಪಡಿಸಿದರು.

44 ಬಾರಿ ರಕ್ತದಾನ ಮಾಡಿರುವ ಮಂಗಯಾರ್ ತಿಲಗಂ, `ಮಹಿಳೆಯರು ರಕ್ತದಾನ ಮಾಡುವುದರಿಂದ ನಿಶ್ಯಕ್ತರಾಗುತ್ತಾರೆ ಎಂಬ ಅಭಿಪ್ರಾಯ ತಪ್ಪು. ನಮ್ಮ ಮನೆಯಲ್ಲಿ ನನ್ನೊಂದಿಗೆ ಪತಿ, ಮಗ, ಮಗಳು ರಕ್ತದಾನ ಮಾಡುತ್ತಾರೆ. ಕುಟುಂಬಕ್ಕೆ ಏನೂ ತೊಂದರೆ ಆಗಿಲ್ಲ. ಪ್ರತಿಯೊಬ್ಬರೂ ರಕ್ತದಾನ ಮಾಡಬಹುದು' ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಹಿಂದೆ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿಯ ಕೊರತೆ ಇತ್ತು. ಆದರೆ ಇಂದು ಸ್ವಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಿರುವುದು ಶ್ಲಾಘನೀಯ. ಈ ಮೂಲಕ ಜಾತಿ, ಧರ್ಮ ಭೇದಗಳನ್ನು ಹೊಡೆದೋಡಿಸಿ, ವಿಶ್ವದ ಜನರಲ್ಲಿ ಐಕ್ಯತೆ ಮೂಡಿಸಲು ಕಾರಣವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಸಿ.ಎನ್.ಅಶ್ವಥನಾರಾಯಣ, ಶೇ 80 ಮಹಿಳೆಯರು ಅನಿಮಿಯದಿಂದ ಬಳಲುತ್ತಿದ್ದಾರೆ. ಸಮಸ್ಯೆ ನಿವಾರಣೆಗೆ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೆಚ್ಚು ಸಲ ರಕ್ತದಾನ ಮಾಡಿರುವ ಸಂತೋಷ್ಕುಮಾರ್ ಜೈನ್, ಡಿ.ಜೆ. ದಿನಕರ, ಸಿ.ಎನ್.ಶ್ರೀನಿವಾಸ್ ಹಾಗೂ ವಿವಿಧ ಕಡೆ ರಕ್ತದಾನ ಶಿಬಿರಗಳ ಮೂಲಕ ರಕ್ತ ಸಂಗ್ರಹಕ್ಕೆ ಸಹಕರಿಸಿರುವ ಸಂಕಲ್ಪ ಇಂಡಿಯಾ ಫೌಂಡೇಷನ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು, ಸಿಸ್ಕೋ, ಮಹಾಲಕ್ಷ್ಮೀ ಅಮ್ಮಣ್ಣಿ ಮಹಿಳಾ ಕಾಲೇಜು, ಮೌಂಟ್ ಕಾರ್ಮೆಲ್ ಮಹಿಳಾ ಕಾಲೇಜಿನ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಯೋಜನಾ ನಿರ್ದೇಶಕ ಮನೋಜ್ಕುಮಾರ್ ತ್ರಿಪಾಠಿ ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಯರಲ್ಲಿರುವ ರಕ್ತಹೀನತೆ ಸಮಸ್ಯೆ ನಿವಾರಿಸಲು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಬ್ಬಿಣದ ಅಂಶವಿರುವ ಮಾತ್ರೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ.ಖಾದರ್ ಘೋಷಿಸಿದರು.

ಪೋಲಿಯೊ ಸಮಸ್ಯೆ ನಿವಾರಣೆಗೆ ಶ್ರಮಿಸಿರುವಂತೆ, ರಕ್ತಹೀನತೆ ಸಮಸ್ಯೆ ನಿವಾರಣೆಗೂ ಇಲಾಖೆ ಶ್ರಮಿಸಲಿದೆ. ಯಾವ ಹಂತದಿಂದ, ಎಷ್ಟು ಪ್ರಮಾಣದಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನೀಡಬೇಕು ಎಂಬ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.