ಶನಿವಾರ, ಮೇ 21, 2022
20 °C

ಜಾತಿ ಜಂಗಮರಿಗೆ ಸದ್ಬುದ್ಧಿ ಬರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು ಗ್ರಾಮೀಣ ಭಾಗದಲ್ಲಿ ವಾಸಿಸುವ ಜಾತಿಯಲ್ಲಿ ಜಂಗಮ. ನಗರದಲ್ಲಿ ಇತ್ತೀಚೆಗೆ ನಡೆದ ಬುಡ್ಗ ಜಂಗಮ ನೌಕರರ ಸಂಘದಲ್ಲಿ ಡಾ. ಎಂ.ಎಂ. ಕಲಬುರ್ಗಿಯವರು ವೀರಶೈವ ಜಂಗಮರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆಂದು ಅನೇಕರು ಟೀಕೆ ಮಾಡಿದ್ದಾರೆ. ಆದರೆ ಈ ಟೀಕೆಗಳಲ್ಲಿ ಯಾವ ಹುರುಳಿಲ್ಲ.ನಾವು ಲಿಂಗಾಯತರಲ್ಲಿಯೇ ಶ್ರೇಷ್ಠರೆಂದು ಕರೆದುಕೊಳ್ಳುತ್ತೇವೆ. ಮೈಸೂರಿನಲ್ಲಿ ನಡೆದ ಜನಗಣತಿಯಲ್ಲಿ ಲಿಂಗಾಯತರನ್ನು ಶೂದ್ರರೆಂದು ಪರಿಗಣಿಸಬಾರದು ಎಂದೂ, ನಾವು `ಲಿಂಗೀ ಬ್ರಾಹ್ಮಣರು~ ಎಂದು ಹೇಳಿಕೊಂಡವರು ಈಗ ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿದವರು ಎಂದು ಹೇಳಿಕೊಳ್ಳುತ್ತಿರುವುದು ಏನನ್ನು ಧ್ವನಿಸುತ್ತದೆ?ಹೀಗಾಗಿಯೇ ಹಳ್ಳಿಯಲ್ಲಿ ಈಗ ಜಂಗಮರನ್ನು ಜನರು ಸಂಶಯದಿಂದ ನೋಡುವ ಪರಿಸ್ಥಿತಿ ಬಂದಿದೆ. ಶಹರದಲ್ಲಿಯ ಕೆಲವೇ ಕೆಲವು ಸುಶಿಕ್ಷಿತ ಜಂಗಮರು ಈ ಪರಿಶಿಷ್ಟ ಜಾತಿಯ ಲಾಭ ಪಡೆಯುತ್ತಿರುವುದು ಖಂಡನೀಯ. ಡಾ. ಕಲಬುರ್ಗಿಯವರ ವಿಚಾರ ಸರಿಯಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.