ರಟ್ಟೀಹಳ್ಳಿ: ಆ ಟಗರುಗಳು ಕೋಡು ಕೋಡುಗಳಿಗೆ ಡಿಕ್ಕಿ ಹೊಡೆಯುವಾಗ ನೋಡುಗರ ಹೃದಯ ಕೈಗೆ ಬಂದಿತ್ತು. ಒಮ್ಮೆಲೆ ಹೋ...ಎಂದು ಉದ್ಘರಿಸಿ ದರು. ಅವು ಏಟಿಗೆ ಎದಿರೇಟು ಕೊಡುತ್ತಿದ್ದವು. ಕೊಬ್ಬಿದ ಟಗರಿನ ಏಟಿಗೆ ಎದುರಾಳಿ ಟಗರು ಮೈದಾನದಿಂದ ಪೇರಿ ಕೀಳುತ್ತಿತ್ತು.

ಇದು ಟಗರುಗಳ ಕಾದಾಟ. ಇಲ್ಲಿನ ಸರ್ಕಾರಿ ಮಾದರಿ ಕನ್ನಡ ಶಾಲಾ ಮೈದಾನದಲ್ಲಿ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮ ವಾರ ಸಂಜೆ ನಡೆದ ಟಗರು ಕಾಳಗದಲ್ಲಿ ಈ ರೋಮಾಂಚನ ದೃಶ್ಯಗಳು ಕಂಡುಬಂದವು.

ಬಲಶಾಲಿ ಟಗರುಗಳು ಎದುರಾಗಿ ನಿಂತಾಗ ಜನತೆಯಲ್ಲಿ ಹರ್ಷೋದ್ಘಾರ ಮೊಳಗುತ್ತಿತ್ತು.. ರೋಷಾವೇಶದಿಂದ ಮುನ್ನುಗ್ಗುವ ಕುರಿಗಳು ತಲೆಗೆ- ತಲೆಯಿಕ್ಕಿ ಡಿಕ್ಕಿ ಹೊಡೆದಾಗ ಢಕ್..ಎನ್ನುವ ಸದ್ದು ಕೇಳಿಸುತ್ತಿತ್ತು..

ಒಂದೇ ಏಟಿಗೆ ನೆಲ ಕೆಲ ಟಗರುಗಳು ನೆಲ ಕಚ್ಚುತ್ತಿದ್ದವು. ಮೈದಾನದಿಂದ ಹೊರ ಹೋಗುತ್ತಿ ದಾಗ ವಿಜಯಶಾಲಿ ಯಾದ ಟಗರನ್ನು ಅಭಿನಂದಿಸಲು ಜನತೆ ಮೈದಾನದಲ್ಲಿ ಇಳಿಯುತ್ತಿದ್ದರು. ಜನರನ್ನು ನಿಯಂತ್ರಿ ಸಲು ಪೋಲಿಸರು ಹರಸಾಹಸ ಪಡ ಬೇಕಾಯಿತು. ಮೈದಾನದಲ್ಲಿ ಕುರಿ, ಟಗರುಗಳಿಗಿಂತ ಹೆಚ್ಚಾಗಿ ಜನರೇ ಕಂಡುಬಂದರು. ಟಗರು ಕಾದಾಟವನ್ನು ನೋಡಲು ಜನರ ತಳ್ಳಾಟ, ಕೂಗಾಗ ಹೆಚ್ಚಾಗಿತ್ತು. ಕೆಲವರಿಗೆ ನೋಡವ ಅವಕಾಶವೇ ಸಿಗಲಿಲ್ಲ.

ಜನ ಸಂದಣಿಯನ್ನು ನಿಯಂತ್ರಣ ಮಾಡಲು ಪೊಲೀಸರ ದಂಡೇ ಇದ್ದರು ಇಷ್ಟೊಂದು ಜನರನ್ನು ನಿಯಂತ್ರಣ ಮಾಡಲು ಹರಸಾಹಸ ಪಡಬೇಕಾಯಿತು. ಪ್ರತಿ ಪಂದ್ಯದಲ್ಲಿ ವಿಜಯ ಶಾಲಿ ಯಾದ ಕುರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಕೊಡ ಲಾಯಿತು. ರಟ್ಟೀಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಶಿಕಾರಿಪುರ, ದಾವಣಗೆರೆ, ಶಿವಮೊಗ್ಗ, ಹೊನ್ನಾಳಿ ಮುಂತಾದ ದೂರದ ಊರು ಗಳಿಂದ ಟಗರುಗಳನ್ನು ಕರೆತಂದಿದ್ದರು.

ಅನೇಕ ಟಗರುಗಳಿಗೆ ಬಣ್ಣ ಬಳಿಸಿ, ಬಲೂನ್, ಟೇಪುಗಳನ್ನು ಸುತ್ತಿ ಶೃಂಗಾರ ಮಾಡಿದ ದೃಶ್ಯ ಕಂಡು ಬಂದಿತು. ಕಾಳಗವನ್ನು ನೋಡಲು ಸಾವಿರಾರು ಜನರು ಸೇರಿದ್ದರು. ಜಾತ್ರಾ ಕಮಿಟಿಯ ಅಧ್ಯ ಕ್ಷರು. ಕಾರ್ಯದರ್ಶಿ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.