ಶುಕ್ರವಾರ, ಏಪ್ರಿಲ್ 16, 2021
21 °C

ಜಾನಪದ ಕಲೆಗಳು ಬೀದಿಗೆ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ರಾಜಕಾರಣಿಗಳು ಹಾಗೂ ಇತರ ಕೆಲವು ಪ್ರತಿಷ್ಠಿತ ವ್ಯಕ್ತಿಗಳು ಜಾನಪದ ಕಲಾವಿದರನ್ನು ಕರೆಯಿಸಿ ಕಾರ್ಯಕ್ರಮ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಜಾನಪದ ಕಲೆಗಳು ಬೀದಿಗೆ ಬೀಳುತ್ತಿವೆ~ ಎಂದು ಚಿಂತಕ ಪ್ರೊ.ಹಿ.ಶಿ. ರಾಮಚಂದ್ರಗೌಡ ತೀವ್ರ ವಿಷಾದ ವ್ಯಕ್ತಪಡಿಸಿದರು.ನಗರದ ಕಲಾಮಂದಿರದಲ್ಲಿ ದೇಸಿ ರಂಗ ಸಾಂಸ್ಕೃತಿಕ ಸಂಸ್ಥೆ ಬುಧವಾರ ಏರ್ಪಡಿಸಿದ್ದ ನೃತ್ಯೋತ್ಸವದ ಉದ್ಘಾ ಟನೆ ಹಾಗೂ ನೃತ್ಯ ತರಬೇತಿ ಸಮಾ ರೋಪದಲ್ಲಿ ಅವರು ಮಾತನಾಡಿದರು.`ಜಾನಪದ ಕಲೆ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು. ತಿಳಿದವರು, ವಿದ್ಯಾವಂತರು ಜಾನಪದ ಕಲೆಯತ್ತ ಮುಖ ಮಾಡಬೇಕು. ಕಲೆ, ಕಲಾವಿದರು ಭಿಕ್ಷುಕರ ಸ್ಥಿತಿಯಲ್ಲಿ ಇರಬಾರದು. ಕಲೆ ಭಿಕ್ಷುಕರ ಸ್ಥಿತಿಗೆ ತಲುಪಿದರೆ ದೇಶದ ಸಾಂಸ್ಕೃತಿಗೆ ದಾರಿದ್ರ್ಯ ಬಂದಿದೆ ಎಂದರ್ಥ. ಆದ್ದರಿಂದ ಜಾನಪದ ಕಲೆ ಯನ್ನು ಉಳಿಸಿ, ಬೆಳೆಸುವ ಕೆಲಸ ವಾಗಬೇಕು~ ಎಂದರು.ಶಿಬಿರದ ನಿರ್ದೇಶಕ ಕೃಷ್ಣ ಜನಮನ, ದಿನಮಣಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.