ಬುಧವಾರ, ಏಪ್ರಿಲ್ 14, 2021
24 °C

ಜಾಮೀನಿಗೆ ಲಂಚ ಕೋರ್ಟ್‌ಗೆ ಯುವ ವಕೀಲ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಕರ್ನಾಟಕದ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಷಾಮೀಲಾದ ಆರೋಪ ಎದುರಿಸುತ್ತಿರುವ ಒಬ್ಬ ಕಿರಿಯ ವಕೀಲ ಗುರುವಾರ ಭ್ರಷ್ಟಾಚಾರ ತಡೆ ಬ್ಯೂರೊ ನ್ಯಾಯಾಲಯಕ್ಕೆ ಶರಣಾದರು.

ಶರಣಾದ ವಕೀಲ ಆದಿತ್ಯ ಅವರನ್ನು ನ್ಯಾಯಾಲಯವು ಆ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜನಾರ್ದನ ರೆಡ್ಡಿ ಪರ ವಕೀಲರಾದ ಇ.ಉಮಾಮಹೇಶ್ವರ ರಾವ್ ಅವರೊಂದಿಗೆ ಈ ವಕೀಲ ಕೆಲಸ ಮಾಡುತ್ತಿದ್ದರು.

ಈ ಪ್ರಕರಣದ ಮತ್ತೊಬ್ಬ ಆರೋಪಿಯಾದ ರೌಡಿ ಶೀಟರ್ ಯಾದಗಿರಿ, ಪೊಲೀಸ್ ತನಿಖೆ ವೇಳೆ, ಆದಿತ್ಯ ಅವರಿಗೆ ರೂ 1 ಕೋಟಿ ನೀಡಿದ್ದಾಗಿ ತಿಳಿಸಿದ್ದ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.