ಹರಾರೆ (ಪಿಟಿಐ): ದಕ್ಷಿಣ ಆಫ್ರಿಕಾ ಹಾಗೂ ಆತಿಥೇಯ ಜಿಂಬಾಬ್ವೆ ತಂಡದವರು ಟ್ವೆಂಟಿ-20 ಕ್ರಿಕೆಟ್ ತ್ರಿಕೋನ ಸರಣಿಯ ಫೈನಲ್ನಲ್ಲಿ ಎದುರಾಗಲಿದ್ದಾರೆ.

ಈ ಸರಣಿಯಲ್ಲಿ ಪಾಲ್ಗೊಂಡಿರುವ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ಬಾಂಗ್ಲಾದೇಶ ತಲಾ ಎರಡು ಪಂದ್ಯಗಳನ್ನು ಗೆದ್ದು ತಮ್ಮ ಖಾತೆಯಲ್ಲಿ ಎಂಟು ಪಾಯಿಂಟುಗಳನ್ನು ಹೊಂದಿವೆ. ಆದರೆ ರನ್ ಸರಾಸರಿಯಲ್ಲಿ ದಕ್ಷಿಣ ಆಫ್ರಿಕಾ (+0.378) ಹಾಗೂ ಜಿಂಬಾಬ್ವೆ (-0.086) ಉತ್ತಮ ಸ್ಥಿತಿಯಲ್ಲಿವೆ. ಆದ್ದರಿಂದ ಫೈನಲ್ನಲ್ಲಿ ಆಡುವ ಅವಕಾಶ ಪಡೆದುಕೊಂಡಿವೆ. ಬಾಂಗ್ಲಾ ರನ್ ಸರಾಸರಿ -0.280 ಆಗಿದೆ. ಆದ್ದರಿಂದ ನಿರಾಸೆಯೊಂದಿಗೆ ಸರಣಿಯಿಂದ ನಿರ್ಗಮಿಸಿದೆ.

ಶನಿವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲುವುದು ಅಗತ್ಯವಾಗಿತ್ತು. ನಿರೀಕ್ಷೆ ಹುಸಿಯಾಗಲಿಲ್ಲ. ಹಾಶೀಮ್ ಆಮ್ಲಾ ನಾಯಕತ್ವದ ದಕ್ಷಿಣ ಆಫ್ರಿಕಾ ಇನ್ನೂ ಹದಿನಾಲ್ಕು ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗಳ ಅಂತರದಿಂದ ವಿಜಯ ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತನ್ನ ಪಾಲಿನ ಇಪ್ಪತ್ತು ಓವರುಗಳಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡು 124 ರನ್ ಮಾತ್ರ ಗಳಿಸಿತು. ಈ ಗುರಿ ದ. ಅಫ್ರಿಕಾಕ್ಕೆ ದೊಡ್ಡದಾಗಿ ಕಾಣಿಸಲೇ ಇಲ್ಲ.

ರಿಚರ್ಡ್ ಲೆವಿ (54; 30 ಎಸೆತ, 4 ಬೌಂಡರಿ, 4 ಸಿಕ್ಸರ್) ವಿಶ್ವಾಸಪೂರ್ಣ ಬ್ಯಾಟಿಂಗ್ ನೆರವಿನಿಂದ ಅದು ಬಹು ಬೇಗ ಗೆಲುವಿನ ದಡ ಸೇರಿತು. 17.4 ಓವರುಗಳಲ್ಲಿ 130 ರನ್ ಗಳಿಸಿದ ದಕ್ಷಿಣ ಆಫ್ರಿಕಾ ಕಳೆದುಕೊಂಡಿದ್ದು ಕೇವಲ 4 ವಿಕೆಟ್.

ಸಂಕ್ಷಿಪ್ತ ಸ್ಕೋರ್: ಜಿಂಬಾಬ್ವೆ: 20 ಓವರುಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 124 (ಹ್ಯಾಮಿಲ್ಟನ್ ಮಸಕಜಾ 36, ಸ್ಟುವರ್ಟ್ ಮತ್ಸಿಕೇನ್ಯರಿ 22, ಗ್ರೇಮ್ ಕ್ರೆಮರ್ ಔಟಾಗದೆ 36; ವೇಯ್ನ ಪಾರ್ನೆಲ್ 16ಕ್ಕೆ3); ದಕ್ಷಿಣ ಆಫ್ರಿಕಾ: 17.4 ಓವರುಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 130 (ರಿಚರ್ಡ್ ಲೆವಿ 54); ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್ಗಳ ಗೆಲುವು. ಪಂದ್ಯ ಶ್ರೇಷ್ಠ: ವೇಯ್ನ ಪಾರ್ನೆಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.