ನವದೆಹಲಿ(ಐಎಎನ್ಎಸ್): ಬಡವ-ಶ್ರೀಮಂತ ಭೇದವಿಲ್ಲದೆ ಈಗ ಬಹಳಷ್ಟು ಮಂದಿಯ ಕೈಯಲ್ಲಿ ಮೊಬೈಲ್ ಫೋನ್ ಇದೆ. ಕೆಲವರಲ್ಲಿ 2-3 ಮೊಬೈಲ್ ಸಂಪರ್ಕಗಳೂ ಇವೆ. ಮೊಬೈಲ್ ಇಲ್ಲದವರು ಅ್ಲ್ಲಲೊಬ್ಬರು ಇಲ್ಲೊಬ್ಬರು ಕಾಣಬಹುದು. ಹಾಗಾಗಿಯೇ ಮೊಬೈಲ್ ಫೋನ್ ಸೇವೆ ಒದಗಿಸುವ ಕಂಪೆನಿಗಳ ಸಂಪರ್ಕ ಜಾಲಕ್ಕೆ ಹೊಸದಾಗಿ ಸೇರ್ಪಡೆ ಆಗುವವರ ಪ್ರಮಾಣದ ಏರುಮುಖ ನಡೆ ತುಸು ನಿದಾನಗತಿಯಲ್ಲಿದೆ.

ಮೇ ತಿಂಗಳಲ್ಲಿ ದೇಶದಲ್ಲಿ ಹೊಸ `ಜಿಎಸ್ಎಂ~ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿ ಕೇವಲ ಶೇ 1.08ರಷ್ಟು ಹೆಚ್ಚಳವಾಗಿದೆ. ಅಂದರೆ ದೇಶಾದ್ಯಂತ 72.10 ಲಕ್ಷ ಮಂದಿಯಷ್ಟೇ ಹೊಸದಾಗಿ `ಜಿಎಸ್ಎಂ~ ಕುಟುಂಬ ಸೇರಿದ್ದಾರೆ!

ಏಪ್ರಿಲ್ನಲ್ಲಿ 67.06 ಕೋಟಿಯಷ್ಟಿದ್ದ ಜಿಎಸ್ಎಂ ಚಂದಾದಾರರ ಸಂಖ್ಯೆ ಮೇ ತಿಂಗಳಲ್ಲಿ 67.90 ಕೋಟಿ ಹೆಚ್ಚಿದೆ.
22 ವೃತ್ತಗಳ ಲೈಸೆನ್ಸ್ ರದ್ದಾಗಿದ್ದರೂ `ಯುನಿನಾರ್~ ಪ್ರಗತಿಗೆ ತೊಡಕಾಗಿಲ್ಲ. ಅದರ ಸಂಪರ್ಕಕ್ಕೆ ಹೊಸದಾಗಿ 15 ಲಕ್ಷ ಮಂದಿ ಸೇರಿದ್ದು, ಒಟ್ಟು ಗ್ರಾಹಕರ ಸಂಖ್ಯೆ 4.50 ಕೋಟಿಗೆ ಹೆಚ್ಚಿದೆ.

`ಐಡಿಯ~ 18 ಲಕ್ಷ ಹೊಸ ಸಂಪರ್ಕಗಳೊಂದಿಗೆ ಚಂದಾದಾರರನ್ನು 11.60 ಕೋಟಿಗೆ ಹೆಚ್ಚಿಸಿಕೊಂಡಿದೆ. ವೊಡಾಫೋನ್ 12 ಲಕ್ಷ ಹೊಸ ಗ್ರಾಹಕರನ್ನು ಪಡೆದು, ಸಾಮರ್ಥ್ಯವನ್ನು 15.20 ಕೋಟಿಗೆ ಹೆಚ್ಚಿಸಿಕೊಂಡಿದೆ. ಏರ್ಟೆಲ್ 18 ಲಕ್ಷ ಹೊಸ ಸಂಪರ್ಕ ಸಾಧಿಸಿದ್ದರೆ, ಏರ್ಸೆಲ್ಗೆ 8 ಲಕ್ಷದಷ್ಟು ನೂತನ ಚಂದಾದಾರರು ಸಿಕ್ಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.