ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ‘ಜಿಡಿಪಿ’ ಪ್ರಗತಿ ಶೇ4.7ಕ್ಕೆ ಕುಸಿತ ಕಂಡಿದೆ. ಮೂಲಸೌಕರ್ಯ ವಲಯದ ಪ್ರಗತಿಯೂ ಜನವರಿಯಲ್ಲಿ ಶೇ 1.6ಕ್ಕೆ ಇಳಿದಿದೆ. ಈ ಸಂಗತಿ ಈ ವಾರ ಷೇರುಪೇಟೆ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಮತ್ತು ಮಹೀಂದ್ರಾ ಕಂಪೆನಿಗಳ ವಾಹನ ಮಾರಾಟ ಫೆಬ್ರುವರಿಯಲ್ಲಿ ಕುಸಿತ ಕಂಡಿದೆ. ಇದರಿಂದ ವಾಹನ ಉದ್ಯಮ ವಲಯದ ಷೇರು ಮೌಲ್ಯ ಈ ವಾರ ಇಳಿಕೆ ಕಾಣಬಹದು ಎಂದು ಬೊನಾಂಜಾ ಪೋರ್ಟ್ಪೊಲಿಯೊ ಸಂಸ್ಥೆ ಹೇಳಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐ) ಚಟುವಟಿಕೆಯಿಂದ ಕಳೆದ ವಾರದಲ್ಲಿ ಸೂಚ್ಯಂಕ ಒಟ್ಟಾರೆ 419 ಅಂಶಗಳಷ್ಟು ಏರಿಕೆ ಕಂಡಿದೆ. 2013ರ ನವೆಂಬರ್ 29ರ ನಂತರ ದಾಖಲಾಗಿರುವ ಗರಿಷ್ಠ ಮಟ್ಟ ಇದಾಗಿದೆ. ಹಣಕಾಸು ಸಚಿವಾಲಯ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ.5.24 ಲಕ್ಷ ಕೋಟಿಯಷ್ಟು ವಿತ್ತೀಯ ಕೊರತೆ ಅಂದಾಜು ಮಾಡಿದೆ. ಆದರೆ, ಹಣಕಾಸು ವರ್ಷದ ಮೊದಲ 10 ತಿಂಗಳಲ್ಲೇ ಈ ಗಡಿ ದಾಟಲಾಗಿದೆ. ಚಾಲ್ತಿ ಖಾತೆ ಕೊರತೆಯೂ (ಸಿಎಡಿ) ಹೆಚ್ಚಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಜಿಡಿಪಿ ಪ್ರಗತಿ ಮತ್ತು ವಿತ್ತೀಯ ಕೊರತೆ ಅಂಕಿ ಅಂಶಗಳು ಈ ವಾರ ಷೇರುಪೇಟೆ ವಹಿವಾಟಿನ ಗತಿ ನಿರ್ಧರಿಸಲಿವೆ’ ಎಂದು ರೆಲಿಗೇರ್ ಸೆಕ್ಯುರಿಟೀಸ್ನ ರಿಟೇಲ್ ವಿಭಾಗದ ಮುಖ್ಯಸ್ಥ ಜಯಂತ್ ಮಂಗಳೀಕ್ ಅಭಿಪ್ರಾಯಪಟ್ಟಿದ್ದಾರೆ.

‘ಬಿಎಸ್ಇ’ ಈ ವಾರ 20,850 ಅಂಶಗಳಿಂದ 21,500 ಅಂಶಗಳ ನಡುವೆ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ‘ನಿಫ್ಟಿ’ 6,150 ರಿಂದ 6350 ಅಂಶಗಳ ನಡುವೆ ವಹಿವಾಟು ನಡೆಸಬಹುದು ಎಂದು ವೆರಾಸಿಟಿ ಬ್ರೊಕಿಂಗ್ ಸಂಸ್ಥೆಯ ಜಿಗ್ನೇಶ್ ಚೌಧರಿ ಹೇಳಿದ್ದಾರೆ.

ಎಫ್ಐಐ ಹೂಡಿಕೆ ಹೆಚ್ಚಳ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಫೆಬ್ರುವರಿಯಲ್ಲಿ ಭಾರತೀಯ ಷೇರುಪೇಟೆಗಳಲ್ಲಿ ಒಟ್ಟು ರೂ.11,337 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.