ರಾಮನಗರ: ರಾಮನಗರ ಜಿಲ್ಲಾ ವ್ಯಾಪ್ತಿಯ 18 ವರ್ಷದ ಒಳಗಿನ ಕಾನೂನು ಸಂಘರ್ಷದಲ್ಲಿರುವ ಮಕ್ಕಳ ಸಂಬಂಧಿತ ದೂರುಗಳ ಪರಿಹಾರಕ್ಕಾಗಿ ಸರ್ಕಾರವು ರಾಮನಗರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಮ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಾಲ ನ್ಯಾಯ ಮಂಡಳಿಯನ್ನು ರಚಿಸಿರುತ್ತದೆ.

ಸಮಾಜ ಕಾರ್ಯಕರ್ತರಾದ ಪಿ.ಷಣ್ಮುಗ ಸುಂದರಂ ಹಾಗೂ ಶ್ರಿಮತಿ ಗಂಗರತ್ನಮ್ಮ ಇವರು ಮಂಡಲಿಯ ಸದಸ್ಯರಾಗಿರುತ್ತಾರೆ. 18 ವರ್ಷದ ಒಳಗಿನ ಕಾನೂನು ಸಂಘರ್ಷದಲ್ಲಿ ಮಕ್ಕಳ ಸಂಬಂಧಿತ ದೂರುಗಳಿದ್ದಲ್ಲಿ ಬಾಲ ನ್ಯಾಯ ಮಂಡಲಿಗೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತಾ.ಪಂ ಸಭೆ
ಮಾಗಡಿ: ತಾಲ್ಲೂಕು ಪಂಚಾಯಿತಿ ವಸತಿ ಯೋಜನೆಗಳ ಸಭೆಯನ್ನು ಅ.10 ರಂದು ಬೆಳಿಗ್ಗೆ11 ಗಂಟೆಗೆ ತಾ.ಪಂ. ಸಭಾಂಗಣದಲ್ಲಿ ಕರೆಯಲಾಗಿದೆ.

ಶಾಸಕ ಎಚ್.ಸಿ.ಬಾಲಕೃಷ್ಣ ಅಧ್ಯಕ್ಷತೆವಹಿಸಲಿದ್ದಾರೆ. ಜಿ.ಪಂ. ಮತ್ತು ತಾ.ಪಂ. ಸದಸ್ಯರು ಹಾಗೂ ಗ್ರಾ.ಪಂ ಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸುವಂತೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.