ಯಳಂದೂರು: ಮಹಿಳೆಯರು ಉಚಿತ ಕಾನೂನು ಸೇವಾ ವ್ಯವಸ್ಥೆಯನ್ನು ಸದುಪಯೋಗ ಮಾಡಿಕೊಳ್ಳಬೇಕು~ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ಜೆಎಂಎಫ್ಸಿ ಗಂಗಾಧರ ಚನ್ನಬಸಪ್ಪ ಹಡಪದ ಮಹಿಳೆಯರಿಗೆ ಕರೆ ನೀಡಿದರು.

ಗುರುವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಯಳಂದೂರು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೆಣ್ಣಿನ ಶೋಷಣೆ ತಡೆಗಟ್ಟಲು ನ್ಯಾಯ ವ್ಯವಸ್ಥೆ ಪ್ರಧಾನ ಅಸ್ತ್ರ. ಈ ಸಂಬಂಧ ಸಾಕಷ್ಟು ಕಾನೂನು ಗಳಿವೆ. ಇದರ ಅರಿವು ಮೂಡಿಸಬೇಕಾದ ಕೆಲಸವೂ ಆಗುತ್ತಿದೆ. ಆದರೂ ಶೋಷಣೆ ಹೆಚ್ಚಾಗುತ್ತಿದೆ. ಮಹಿಳೆಗೆ ಸಮಾಜದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ತಿಳಿಸಿದರು.

ಸಿಡಿಪಿಒ ಜಯರಾಂ ಮಾತನಾಡಿ, ತಾಲ್ಲೂಕಿನಲ್ಲಿ 400 ಕ್ಕೂ ಹೆಚ್ಚು ಮಹಿಳಾ ಸಂಘಟನೆಗಳಿವೆ. ಇವು ಹೆಣ್ಣಿಗೆ ಆರ್ಥಿಕ ಶಕ್ತಿ ತುಂಬುವ ಜತೆಗೆ ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮದೆಡೆಗೆ ಕೊಂಡೊ ಯ್ಯುವ ಅನಿವಾರ್ಯತೆ ಹೆಚ್ಚಾಗಿದೆ ಎಂದರು.

ಈ ಭಾಗದಲ್ಲಿ ಇನ್ನೂ ಕೂಡ ಬಾಲ್ಯ ವಿವಾಹ ಪದ್ಧತಿ ಇದೆ. ಇದನ್ನು ತೊಲಗಿಸಬೇಕು. ಇದಕ್ಕಾಗಿ ಸಾಂತ್ವನ ಮಹಿಳಾ ಸಹಾಯವಾಣಿಯ ಸಹಕಾರ ಪಡೆದುಕೊಳ್ಳಬೇಕು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಮಹಿಳಾ ಸಂಘಗಳು ಕೆಲಸ ಮಾಡಬೇಕು ಎಂದರು.

ಸರ್ಕಾರಿ ಅಭಿಯೋಜಕಿ ಕೃಷ್ಣವೇಣಿ, ಉಪನ್ಯಾಸಕರಾದ ಎಸ್. ಪ್ರಮೋದ್, ಸಿ. ಮಹಾದೇವಯ್ಯ, ದಿಲ್ಶಾದ್ ಬೇಗಂ, ಉಪ ಪ್ರಾಂಶುಪಾಲೆ ಎಂ. ಚಂದ್ರಮ್ಮ, ನವೀನ್ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಕಾಲೇಜಿನ ವಿದ್ಯಾರ್ಥಿಯರು ಹಾಜರಿದ್ದರು.

ಮಹಿಳೆಯರಿಗೆ ಕಾನೂನು ಅರಿವಿನ ಕೊರತೆ: ಮಲ್ಲಪ್ಪ

ಕೊಳ್ಳೇಗಾಲ: ಮಹಿಳೆಯರಿಗಾಗಿ ಸರ್ಕಾರ ಸಾಕಷ್ಟು ಕಾರ್ಯಕ್ರಮ ರೂಪಿಸಿದೆ. ಆದರೆ, ಈ ಕಾರ್ಯಕ್ರಮದ ಬಗ್ಗೆ ಮಹಿಳೆಯರಿಗೆ ಅರಿವಿಲ್ಲದ ಕಾರಣ ಯಶಸ್ಸು ಕಂಡಿಲ್ಲ ಎಂದು ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶ ಕೆ.ಎಚ್.ಮಲ್ಲಪ್ಪ ನುಡಿದರು.

ಪಟ್ಟಣದ ರೋಟರಿ ಭವನದಲ್ಲಿ ರೋಟರಿ ಸಂಸ್ಥೆ, ರೋಟರಿ ಮಿಡ್-ಟೌನ್, ಇನ್ನರ್ವ್ಹೀಲ್, ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಶಿಕ್ಷಣ ಮತ್ತು ಕಾನೂನು ಅರಿವು ಪಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಸಮಾನ ಸ್ಥಾನಮಾನ ಗಳಿಸಲು ಸಾಧ್ಯ ಎಂದು ತಿಳಿಸಿದರು.

ರೋಟರಿ ಸಂಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜಾನಪದ ಗೀತೆ ಸ್ಪರ್ಧೆಯಲ್ಲಿ ಜಯಗಳಿಸಿದ ಸತ್ತೇಗಾಲ, ಮಧುವನಹಳ್ಳಿ, ತೇರಂಬಳ್ಳಿ ಹಾಗೂ ಕುಂತೂರು ಮೋಳೆ ತಂಡಗಳಿಗೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಎಂ. ಕಲಾಲ ಬಹುಮಾನ ವಿತರಿಸಿ ಮಾತನಾಡಿ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಎಂ. ಶೈನಿ ಮಾತನಾಡಿದರು. ರೋಟರಿ ಸಂಸ್ಥೆ ಅಧ್ಯಕ್ಷ ಎಂ.ನಂಜುಂಡಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ರೋಟರಿ ಮಿಡ್-ಟೌನ್ ಅಧ್ಯಕ್ಷ ಕಿರಣ್ಕುಮಾರ್, ಇನ್ನರ್ವ್ಹೀಲ್ ಅಧ್ಯಕ್ಷೆ ಶೈಲಜಾ, ಸರ್ಕಾರಿ ವಕೀಲರಾದ ನಾಗೇಶ್, ನಾಜಿಮಾಬೇಗಂ, ಕೆ. ಪುಟ್ಟರಸಶೆಟ್ಟಿ, ಟಿ.ಸಿ.ವೀರಭದ್ರಯ್ಯ, ಎಸ್.ನಾಗರಾಜು, ವಸಂತ ಚಂದ್ರಮ್ಮ, ಪುಟ್ಟಕೆಂಪಮ್ಮ, ಸ್ಟೆಲ್ಲಾಕುಮಾರಿ, ಸುಭದ್ರ, ಪುಟ್ಟಗೌರಿ, ನಿರ್ಮಲ ಇತರರು ಇದ್ದರು.
ಮಹಿಳೆ ಎಲ್ಲ ರಂಗದಲ್ಲೂ ಮುಂಚೂಣಿ: ಮಂಜುನಾಥ್

ಗುಂಡ್ಲುಪೇಟೆ: ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂದು ತಹಶೀಲ್ದಾರ್ ಜಿ.ಎನ್. ಮಂಜುನಾಥ್ ಗುರುವಾರ ಹೇಳಿದರು.

ಪಟ್ಟಣದ ಗುರುಭವನದಲ್ಲಿ ವರ್ಲ್ಡ್ ವಿಷನ್ ಸಂಸ್ಥೆ ಹಮ್ಮಿ ಕೊಂಡಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಮುಂತಾದ ಅನಿಷ್ಟ ಪದ್ಧತಿಗಳನ್ನು ತೊಡೆದು ಹಾಕಬೇಕು. ಮಹಿಳೆಯೊಬ್ಬಳು ವಿದ್ಯಾವಂತಳಾದರೆ ಇಡೀ ಕುಟುಂಬವೇ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ ಎಂದರು.
ಪುರಸಭಾಧ್ಯಕ್ಷೆ ರಾಧಮ್ಮ, ವರ್ಲ್ಡ್ ವಿಷನ್ ಸಂಸ್ಥೆಯ ವ್ಯವಸ್ಥಾಪಕ ಪ್ರಭಾಕರ್, ಪುಂಡಲೀಕ, ಜಿಲ್ಲಾ ಮಹಿಳಾ ಸಂಘದ ಕಾರ್ಯದರ್ಶಿ ಸವಿತಾ ಸಜನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.