ಚಾಮರಾಜನಗರ: ಜಿಲ್ಲೆಗೆ ಅಂಟಿರುವ ಕಳಂಕದ ಕಪ್ಪು ಪಟ್ಟಿ ತೊಡೆದುಹಾಕಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೋಮವಾರ ತಿಳಿಸಿದರು.

ನಗರಕ್ಕೆ ಮೊದಲನೇ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಗಮಿಸಿದ ಅವರು ಚಾಮರಾಜೇಶ್ವರ ದೇವಸ್ಥಾನದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಜಿಲ್ಲೆಯಲ್ಲಿ ಆಗಬೇಕಾಗಿರುವ ಅಗತ್ಯ ಕಾಮಗಾರಿ ಮತ್ತು ಅರ್ಧಕ್ಕೆ ನಿಂತ ಕೆಲಸವನ್ನು ತುರ್ತು ಗತಿಯಲ್ಲಿ ಮಾಡುವುದಕ್ಕೆ ಒತ್ತು ನೀಡಲಾಗುವುದು ಎಂದರು.

ಬರಗಾಲ ವ್ಯಾಪಕವಾಗಿರುವುದರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಪಕ್ಷಾತೀತವಾಗಿ ಜಿಲ್ಲೆಗೆ ಆಗಬೇಕಾಗಿರುವ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಮಳೆ ಜಾಸ್ತಿ ಬಂದು ಕೆರೆ ಕಟ್ಟೆ ತುಂಬಿದರೆ ರಾಜ್ಯದ ಅಭಿವೃದ್ಧಿಯಲ್ಲಿ ಜಿಲ್ಲೆಯನ್ನು ಮುಂಚೂಣಿಯಲ್ಲಿ ತೆಗೆದುಕೊಂಡು ಹೋಗುತ್ತೆನೆ ಎಂದು ತಿಳಿಸಿದರು.

ಸಿಎಂ ಬಂದೇ ಬರುತ್ತಾರೆ!
ರಾಜ್ಯದಲ್ಲಿ ಮಂತ್ರಿಗಳು ಹಾಗೂ ಮುಖ್ಯಮಂತ್ರಿ ಒಂದೇ ನಾಣ್ಯದ ಎರಡು ಮುಖ. ಆದ್ದರಿಂದ ಮುಖ್ಯಮಂತ್ರಿ ಜಿಲ್ಲೆಗೆ ಬಂದೇ ಬರುತ್ತಾರೆ. ನೀರಿಲ್ಲದೆ ಜಾನುವಾರುಗಳಿಗೆ ಆಗುವ ನೋವು, ಗುಳೆ ಹೋಗುವ ತೊಂದರೆ ನಿವಾರಣೆಗೆ ಮಳೆ ಅವಶ್ಯವಾಗಿದೆ. ಈ ಜಿಲ್ಲೆಗೆ ಎಲ್ಲರೂ ಬರುವ ಕಾಲ ಕೂಡಿ ಬಂದಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ, ವಿಧಾನಪರಿಷ್ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ, ಶಾಸಕ ಜಿ.ಎನ್.ನಂಜುಂಡಸ್ವಾಮಿ, ಚೂಡಾ ಅಧ್ಯಕ್ಷ ಬಾಲಸುಬ್ರಹ್ಮಣ್ಯ, ನಗರಸಭಾ ಸದಸ್ಯ ಗಣೇಶ್ ದೀಕ್ಷಿತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.