ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ (ಜಿ-ಕೆಟಗಿರಿ) ನಿವೇಶನ ಪಡೆದ ರಾಜ್ಯದ ಕಾನೂನು ಸಚಿವ ಸುರೇಶ್ಕುಮಾರ್ ರಾಜೀನಾಮೆ ಕೊಡಬೇಕಾಗಿ ಬಂದ ಸಂದರ್ಭ ಮತ್ತು ರಾಜೀನಾಮೆ ವಿಷಯದಲ್ಲಿ ಮುಖ್ಯವಾಗಿ ಪ್ರತಿಪಕ್ಷಗಳ ಪ್ರಮುಖರ ಹೇಳಿಕೆಗಳನ್ನು ಗಮನಿಸಿದಾಗ ಈ ರಾಜ್ಯದಲ್ಲಿ ಜನಪ್ರತಿನಿಧಿಗಳು ಎನಿಸಿಕೊಂಡವರು ಎಂಥ ದುರದೃಷ್ಟಕರ ಪ್ರಸಂಗಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆನ್ನುವುದು ಸ್ಪಷ್ಟವಾಗುತ್ತದೆ.

ವಿವೇಚನಾ ಕೋಟಾದ ಅಡಿಯಲ್ಲಿ ನಿವೇಶನ ಪಡೆದಿರಬಹುದಾದ ಪ್ರತಿಪಕ್ಷಗಳವರೂ ಹಾಗೆ ಪಡೆಯುವ ವೇಳೆ, ಎಂದರೆ ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗ, ಅದರೊಡನೆ ಸಲ್ಲಿಸಿದ ಪ್ರಮಾಣ ಪತ್ರದ ಸತ್ಯಾಸತ್ಯತೆಯ ಬಗೆಗೆ ಈಗ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯಬೇಕು.

ಸುರೇಶ್ಕುಮಾರ್ ಪ್ರಕರಣದಲ್ಲಿ ಕಾನೂನಿನ ಸೂಕ್ಷಾಂಶಗಳು ಇರುವಂತಿವೆ; ತಾಂತ್ರಿಕ ಲೋಪಗಳಾಗಿದ್ದಿರಲೂಬಹುದು. ಒಂದು ವೇಳೆ ಪ್ರಕರಣ ನ್ಯಾಯಾಲಯದ ಮುಂದೆ ಬಂದರೆ ಈ ಎಲ್ಲವೂ ಅಲ್ಲಿ ವಾದ-ಪ್ರತಿವಾದಗಳಲ್ಲಿ ಕಾಣಿಸಿಕೊಳ್ಳುತ್ತವೆ; ಇದು ಬೇರೆ ವಿಷಯ. ಆದರೆ ನಮಗೆ, ಸಾರ್ವಜನಿಕರಿಗೆ, ತಿಳಿಯಬೇಕಾಗಿರುವುದು ಜಿ-ಕೆಟಗಿರಿಯಲ್ಲಿ ನಿವೇಶನ ಪಡೆದಿರುವ 165 ಶಾಸಕರು, ಮಂತ್ರಿಗಳು ಮತ್ತಿತರ ಗಣ್ಯವ್ಯಕ್ತಿಗಳು ನಿವೇಶನವನ್ನು ನ್ಯಾಯಯುತವಾಗಿಯೇ ಪಡೆದರು ಮತ್ತು ಹಾಗೆ ಪಡೆದ ಮೇಲಷ್ಟೆ ಅವರು ನಿವೇಶನದಂಥ ಸ್ಥಿರಾಸ್ತಿಯ ಒಡೆಯರಾದುದು ಪಾಪ, ಎನ್ನುವುದು. ಒಬ್ಬರ ವಿಷಯದಲ್ಲಿ ಈಗ ಹರಿಹಾಯ್ದಿರುವವರು ಇತರರದ್ದನ್ನೂ ಬಹಿರಂಗಗೊಳಿಸಬೇಕು.
-ಸಾಮಗ ದತ್ತಾತ್ರಿ, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.