ಖ್ಯಾತನಾಮರ ದಂಡು ವೇದಿಕೆ ಮೇಲೆ ವಿರಾಜಮಾನ ಆಗಿತ್ತು. ಯೋಗರಾಜ್ ಭಟ್, ಶಶಾಂಕ್, ಜಯಂತ ಕಾಯ್ಕಿಣಿ, ರಮ್ಯಾ, ಯಶ್ ಜೊತೆಗೆ ಚಿತ್ರತಂಡದ ಪ್ರಮುಖರು.

ಅವರೆಲ್ಲರೂ ಮಾತಿಗೆ ಇಳಿದರೆ ಅದರ ಕಥೆಯೇ ಬೇರೆ. ಆದರೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದವರ ಕಣ್ಣು ಇದ್ದದ್ದು ಅವರೆಲ್ಲರ ಮಧ್ಯೆ ಕುಳಿತ ನವ ನಿರ್ಮಾಪಕಿ ಮೇಲೆ. ಇದನ್ನು ಅರಿತಿದ್ದ ಮಾತಿನ ಮಲ್ಲರೆಲ್ಲ ಕೆಲವೇ ಸಾಲುಗಳಲ್ಲಿ ತಮ್ಮ ಮಾತು ಮುಗಿಸಿದರು. ಮೈಕನ್ನು ನಿರ್ಮಾಪಕಿಗೆ ನೀಡುವ ಆತುರ ಅವರದು.

ಮಾತನಾಡುವ ಹಂಬಲ ನವ ನಿರ್ಮಾಪಕಿಯಲ್ಲೂ ಇತ್ತು. ನಟಿ ಆಗಿದ್ದಾಗಲೇ ತೆರೆಮರೆಗೆ ಸರಿದಿದ್ದ ರಾಧಿಕಾ ಕುಮಾರಸ್ವಾಮಿ ಸುಮಾರು ನಾಲ್ಕು ವರ್ಷಗಳ ಬಳಿಕ ನಿರ್ಮಾಪಕಿಯ ಪೋಷಾಕು ಧರಿಸಿ ಮತ್ತೆ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಮೊದಲ ಬಾರಿಗೆ ಪತ್ರಿಕಾಮಿತ್ರರಿಗೆ ಎದುರಾದರು. ತಮ್ಮ ಚೊಚ್ಚಿಲ ನಿರ್ಮಾಣದ `ಲಕ್ಕಿ~ ಚಿತ್ರದ ಹಾಡುಗಳ ಧ್ವನಿಸುರುಳಿ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಅವರಲ್ಲಿ ಮಾತುಗಳನ್ನು ಹಂಚಿಕೊಳ್ಳುವ ತುಡಿತವಿತ್ತು.

ರಾಧಿಕಾ ಅವರ ಆರಂಭದ ಮಾತುಗಳು ನೆನಪುಗಳನ್ನು ತುಸು ಕೆದಕಿದವು. ಚಿತ್ರೋದ್ಯಮದಿಂದ ದೂರವಿದ್ದ ದಿನಗಳಲ್ಲಿ ತಾವು ಸಂಪರ್ಕವಿರಿಸಿಕೊಂಡಿದ್ದು ನಟಿ ರಮ್ಯಾ ಜೊತೆ ಮಾತ್ರ ಎಂಬ ಸತ್ಯವನ್ನು ಹೊರಗಿಟ್ಟರು. ಮುದ್ದಾದ ಯಶ್ ಮತ್ತು ರಮ್ಯಾ ತೆರೆಯ ಮೇಲೆ ಇನ್ನಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ ಎಂಬುದು ಅವರ ಮೆಚ್ಚುಗೆಯ ಮಾತು.

ರಮ್ಯಾ ಚಿತ್ರಕ್ಕೆ ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಅನುಮಾನವಿತ್ತು. ಆದರೆ ಕಥೆ ಕೇಳಿದ ಕೂಡಲೇ ಒಪ್ಪಿಗೆ ನೀಡಿದರು ಎಂಬ ಖುಷಿ ಅವರದು. ಇದು ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ಒಟ್ಟಿಗೆ ಕುಳಿತು ನೋಡುವಂತಹ ಮನರಂಜನಾತ್ಮಕ ಚಿತ್ರ ಎಂದೂ ಅವರು ಹೇಳಿಕೊಂಡರು.

ಅಂದಹಾಗೆ `ಲಕ್ಕಿ~ ನಾಯಿಯ ಕಥೆಯುಳ್ಳ ಚಿತ್ರ. ಸಾಹಿತಿ ಗೌಸ್ಪೀರ್ಗೆ ಈ ಚಿತ್ರದ ಕಥೆ ಬರೆಯಲು ಸ್ಫೂರ್ತಿ ನೀಡಿದ್ದು ರಮ್ಯಾರ ಮುದ್ದಿನ ನಾಯಿ ಬ್ರಾಂಡಿ ಅಂತೆ. ಪ್ರೇಮಿಗೆ ಕಾಟ ಕೊಡುವ ನಾಯಿ ಸೈನ್ಯದ ಕಲ್ಪನೆ ಇಟ್ಟುಕೊಂಡು ಭಟ್ಟರು ಚಿತ್ರಕ್ಕೊಂದು ಹಾಡು ಹೊಸೆದಿದ್ದಾರೆ.

ಚಿತ್ರೀಕರಣದಲ್ಲಿ ಒಂದೇ ಸನ್ನಿವೇಶವನ್ನು ಹತ್ತಾರು ರೀತಿ ಅಭಿನಯಿಸಿ ತೋರಿಸಿ ಸುದೀಪ್ರಂತೆಯೇ ಯಶ್ ತುಂಬಾ ಸ್ಕೋಪ್ ತೆಗೆದುಕೊಳ್ಳುತ್ತಾನೆ ಎಂದು ರಮ್ಯಾ ಕಿಚಾಯಿಸಿದರು. ಇದು ಹೊಗಳಿಕೆಯೋ ಅಥವಾ ಬೈದದ್ದೋ ಗೊತ್ತಾಗಲಿಲ್ಲ ಎಂದ ಯಶ್, `ನಾನು ರಮ್ಯಾ ಥರ ನ್ಯಾಚುರಲ್ ಆಗಿ ನಟಿಸುವ ಛಾತಿ ಹೊಂದಿಲ್ಲ~ ಎಂದು ಮರು ಬಾಣ ಬಿಟ್ಟರು.

ಚಿತ್ರದಲ್ಲಿ ಜೂಜೂ ಎಂಬ ನಾಯಿ ನಟಿಸಿದೆಯಂತೆ. ಚಿತ್ರೀಕರಣದ ವೇಳೆ ಅದು ಕೊಟ್ಟ ಕಾಟಗಳನ್ನು ರಮ್ಯಾ ಮೆಲುಕು ಹಾಕಿದರು.

ವೃತ್ತಿಯಲ್ಲಿ ದಂತವೈದ್ಯರಾದ ಡಾ. ಸೂರಿ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಶಶಾಂಕ್, ಗೌಸ್ ಪೀರ್ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸ್ವರಗಳನ್ನು ಹೆಣೆದಿದ್ದಾರೆ. ಹಾಡುಗಳ ಸಿ.ಡಿಯನ್ನು ಬಿಡುಗಡೆ ಮಾಡಿದ್ದು ರಾಧಿಕಾ ಪುತ್ರಿ ಶಮಿಕಾ ಕುಮಾರಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.