ಬುಧವಾರ, ಏಪ್ರಿಲ್ 14, 2021
32 °C

ಜೂನಿಯರ್ ವಿಶ್ವಕಪ್ ಕ್ರಿಕೆಟ್: ಕ್ವಾರ್ಟರ್ ಫೈನಲ್‌ಗೆ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೌನ್ಸ್‌ವಿಲ್, ಆಸ್ಟ್ರೇಲಿಯಾ (ಪಿಟಿಐ): ಮಧ್ಯಮ ವೇಗಿ ರವಿಕಾಂತ್ ಸಿಂಗ್ (21ಕ್ಕೆ 5) ತೋರಿದ ಸಮರ್ಥ ಬೌಲಿಂಗ್ ನೆರವಿನಿಂದ ಭಾರತ ತಂಡ 19 ವರ್ಷ ವಯಸ್ಸಿನೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪಪುವಾ ನ್ಯೂಗಿನಿ ತಂಡವನ್ನು 107 ರನ್‌ಗಳಿಂದ ಮಣಿಸಿತು.ಈ ಗೆಲುವಿನ ಮೂಲಕ ಭಾರತ `ಸಿ~ ಗುಂಪಿನಲ್ಲಿ ಒಟ್ಟು ನಾಲ್ಕು ಪಾಯಿಂಟ್ ಕಲೆಹಾಕಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಸೋಮವಾರ ನಡೆಯುವ ಎಂಟರಘಟ್ಟದ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಜೊತೆ ಪೈಪೋಟಿ ನಡೆಸಲಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತ 45.1 ಓವರ್‌ಗಳಲ್ಲಿ 204 ರನ್ ಗಳಿಸಿತು. ಎದುರಾಳಿ ತಂಡ 31.5 ಓವರ್‌ಗಳಲ್ಲಿ 97 ರನ್‌ಗಳಿಗೆ ಆಲೌಟಾಯಿತು. ರವಿಕಾಂತ್ ಸಿಂಗ್ ಎದುರಾಳಿ ತಂಡದ ಪತನಕ್ಕೆ ಕಾರಣರಾದರು. ಬಾಬಾ ಅಪರಾಜಿತ್ ಮತ್ತು ಕಮಲ್ ಪಸ್ಸಿ ತಲಾ ಎರಡು ವಿಕೆಟ್ ಪಡೆದರು.ಮೊದಲು ಬ್ಯಾಟ್ ಮಾಡಿದ ಭಾರತ ಉತ್ತಮ ಮೊತ್ತ ಪೇರಿಸಲು ವಿಫಲವಾಗಿತ್ತು. ಪ್ರಶಾಂತ್ ಚೋಪ್ರಾ (58) ಮತ್ತು  ವಿಜಯ್ ಜೋಲ್ (72) ಮಾತ್ರ ಎದುರಾಳಿ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು.

ಸಮಿತ್ ಪಟೇಲ್ 30 ರನ್‌ಗಳನ್ನು ಕಲೆಹಾಕಿದರು. ಇತರ ಯಾರೂ ಕ್ರೀಸ್ ಬಳಿ ಹೆಚ್ಚುಹೊತ್ತು ನಿಲ್ಲಲಿಲ್ಲ. 32 ರನ್‌ಗಳಿಗೆ ಐದು ವಿಕೆಟ್ ಪಡೆದ ಚಾಡ್ ಸೋಪೆರ್ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.ಸಂಕ್ಷಿಪ್ತ ಸ್ಕೋರ್: ಭಾರತ: 45.1 ಓವರ್‌ಗಳಲ್ಲಿ 204 (ಪ್ರಶಾಂತ್ ಚೋಪ್ರಾ 58, ವಿಜಯ್ ಜೋಲ್ 72, ಸಮಿತ್ ಪಟೇಲ್ 30, ಚಾಡ್ ಸೋಪೆರ್ 32ಕ್ಕೆ 5, ಟೊವಾ ಟಾಮ್ 26ಕ್ಕೆ 2). ಪಪುವಾ ನ್ಯೂಗಿನಿ: 31.5 ಓವರ್‌ಗಳಲ್ಲಿ 97 (ಕ್ರಿಸ್ಟೋಫರ್ ಕೆಂಟ್ 27, ಚಾರ್ಲ್ಸ್ ಅಮಿನಿ 28, ರವಿಕಾಂತ್ ಸಿಂಗ್ 21ಕ್ಕೆ 5, ಬಾಬಾ ಅಪರಾಜಿತ್ 16ಕ್ಕೆ 2, ಕಮಲ್ ಪಸ್ಸಿ 18ಕ್ಕೆ 2). ಫಲಿತಾಂಶ: ಭಾರತಕ್ಕೆ 107 ರನ್ ಗೆಲುವು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.