ಶನಿವಾರ, ಫೆಬ್ರವರಿ 27, 2021
19 °C
ಎಂಬಿಬಿಎಸ್‌ಗೆ ಅನುಮತಿಗಿಂತ ಹೆಚ್ಚು ಸೇರ್ಪಡೆ

ಜೆಎಸ್‌ಎಸ್‌ ಕಾಲೇಜಿಗೆ ₹5 ಕೋಟಿ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆಎಸ್‌ಎಸ್‌ ಕಾಲೇಜಿಗೆ ₹5 ಕೋಟಿ ದಂಡ

ನವದೆಹಲಿ: ಮಂಜೂರಾದ ಸೀಟುಗಳಿಗಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶ ನೀಡಿದ  ಮೈಸೂರಿನ ಜೆಎಸ್ಎಸ್ ವೈದ್ಯಕೀಯ ಕಾಲೇಜಿಗೆ ಸುಪ್ರೀಂ ಕೋರ್ಟ್ ₹5  ಕೋಟಿ  ದಂಡ ವಿಧಿಸಿದೆ.ನ್ಯಾಯಮೂರ್ತಿಗಳಾದ ಮದನ್‌ ಬಿ. ಲೋಕೂರ್ ಮತ್ತು ಆರ್.ಕೆ. ಅಗರ್‌ವಾಲ್ ಅವರ ಪೀಠ ಈ ಅದೇಶ ನೀಡಿದೆ. ಆಡಳಿತ ಮಂಡಳಿಯ ಈ ಕ್ರಮ ‘ಅತ್ಯಂತ ದುರದೃಷ್ಟಕರ’ ಎಂದು ಹೇಳಿದೆ. ಆಲ್ಲದೆ, ದಂಡದ ಮೊತ್ತವನ್ನು ನಾಲ್ಕು ವಾರಗಳ ಒಳಗೆ ಠೇವಣಿ ಇಡುವಂತೆ ಸೂಚನೆ ನೀಡಿದೆ.‘2012ರಲ್ಲಿ ಈ ನ್ಯಾಯಾಲಯ ನೀಡಿದ  ಆದೇಶಗಳನ್ನು ಕಾಲೇಜು ಪಾಲಿಸಿಲ್ಲ. ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸ ಮುಂದುವರಿಸಲು ಆವಕಾಶ ನೀಡಿದೆ. ಈ ಕಾಲೇಜಿಗೆ ಮತ್ತು ಹೀಗೆ ನಿಯಮ ಉಲ್ಲಂಘನೆ ಮಾಡುವ ಇತರ ಕಾಲೇಜುಗಳಿಗೆ ಎಚ್ಚರಿಕೆ ನೀಡುವುದಕ್ಕಾಗಿ ಜೆಎಸ್‌ಎಸ್‌ ಕಾಲೇಜಿಗೆ ₹5 ಕೋಟಿ ದಂಡ ವಿಧಿಸುವುದೇ ಸೂಕ್ತ’ ಎಂದು ನ್ಯಾಯಪೀಠ ಹೇಳಿದೆ.ಈ ಕಾಲೇಜಿನಲ್ಲಿ ಪ್ರವೇಶ ಪಡೆದು ನಾಲ್ಕೂವರೆ ವರ್ಷದ ಎಂಬಿಬಿಎಸ್ ಕೋರ್ಸ್‌ ಪೂರ್ಣಗೊಳಿಸದಂತಹ ವಿದ್ಯಾರ್ಥಿಗಳು ಮತ್ತು ಇದೇ ಜೂನ್ ನಲ್ಲಿ ಕೋರ್ಸ್ ಪೂರ್ಣಗೊಳಿಸುವಂತಹ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಬಹುದು ಎಂದು ನ್ಯಾಯಾಲಯ ಹೇಳಿದೆ.ಆಲ್ಲದೆ, ಜೆಎಸ್ಎಸ್ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ 2016-17 ನೇ ಸಾಲಿನಲ್ಲಿ ಮಂಜೂರು ಮಾಡಲಾದಂತಹ 200 ಸೀಟುಗಳ ಪೈಕಿ ಕೇವಲ 150 ಸೀಟುಗಳನ್ನು ಮಾತ್ರ ಭರ್ತಿ ಮಾಡಬೇಕು ಎಂದು ಸೂಚನೆ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.