ಗುರುವಾರ , ಮೇ 6, 2021
32 °C

ಜೆಡಿಎಸ್‌ಯುವ ಚೇತನ: 10ರಿಂದ ಮಧು ಪ್ರವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು `ಯುವ ಚೇತನ~ ಪ್ರವಾಸ ಕಾರ್ಯಕ್ರಮದ ಅಂಗವಾಗಿ ಇದೇ 10ರಿಂದ 15ರವರೆಗೆ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಯುವ ಘಟಕದ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದಾರೆ.10ರಂದು ಮಂಡ್ಯ, ಚಾಮರಾಜನಗರ, 11ರಂದು ಮೈಸೂರು, ಕೊಡಗು, 12ರಂದು ಹಾಸನ, 13ರಂದು ತುಮಕೂರು, ಚಿತ್ರದುರ್ಗ, 14ರಂದು ಶಿವಮೊಗ್ಗ, 15ರಂದು ಬೆಂಗಳೂರು ನಗರದಲ್ಲಿ ಸಮಾವೇಶ ನಡೆಯಲಿದೆ.ಜೆಡಿಎಸ್‌ನ ಸಂಘಟನೆಗಾಗಿ ಈ ತಿಂಗಳಲ್ಲಿ `ನವಶಕ್ತಿಯ ಸಂಚಲನ, ದಾವಣಗೆರೆಯಲ್ಲಿ ಮಿಲನ~ ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಿ ಯುವ ಘಟಕದ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಕಾರ್ಯಾಧ್ಯಕ್ಷ ಬಿ.ಎಚ್.ಚಂದ್ರಶೇಖರ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.