ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮೂಲಸೌಲಭ್ಯ ಕಲ್ಪಿಸುವ ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಅಭಿವೃದ್ಧಿ ಯೋಜನೆ (ಜೆನರ್ಮ್) ಜಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಅಂಶವನ್ನು ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ (ಸಿಎಜಿ) ಉಲ್ಲೇಖಿಸಲಾಗಿದೆ.

2005-12ರ ಅವಧಿಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ತಪ್ಪುಗಳು ಬೆಳಕಿಗೆ ಬಂದಿವೆ. ಯೋಜನೆ ಜಾರಿ ಮಾಡುವಾಗ ಕಡ್ಡಾಯವಾಗಿ ಪಾಲಿಸಬೇಕಿದ್ದ ಕೆಲವು ಸುಧಾರಣಾ ಕ್ರಮಗಳನ್ನು ಪಾಲಿಸಿಲ್ಲ ಎಂದೂ ಉಲ್ಲೇಖಿಸಲಾಗಿದೆ.

ನಿರ್ದಿಷ್ಟ ಉದ್ದೇಶಕ್ಕೆ ಬಳಸಬೇಕಾಗಿದ್ದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿರುವುದು, ಶಾಸನಬದ್ಧ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದನ್ನೂ ಪತ್ತೆಹಚ್ಚಲಾಗಿದೆ. ಹಣಕಾಸು ನಿರ್ವಹಣೆ ಸರಿ ಇಲ್ಲ ಎಂದೂ ವರದಿಯಲ್ಲಿ ಹೇಳಲಾಗಿದೆ.

ಅಕ್ರಮ: ಮಳೆ ನೀರು ಚರಂಡಿ ಉತ್ತಮಪಡಿಸುವ ಯೋಜನೆಗಳಲ್ಲಿ ಅಕ್ರಮ ನಡೆದಿರುವುದನ್ನು ಸಿ.ಎ.ಜಿ ವರದಿ ಬೊಟ್ಟು ಮಾಡಿ ತೋರಿಸಿದೆ. ಮಳೆ ನೀರಿನ ಚರಂಡಿಗೆ ಸಂಬಂಧಿಸಿದ 4 ಯೋಜನೆಗಳಿಗೆ ಪ್ರಸ್ತಾವನೆಯನ್ನು ರಾಜ್ಯ ಮಟ್ಟದ ಸಮಿತಿಯು ಕೇಂದ್ರ ಮಂಜೂರಾತಿ ಸಮಿತಿಗೆ ಕಳುಹಿಸಿಕೊಟ್ಟಿತ್ತು. ಇವಕ್ಕೆ 2006ರಲ್ಲಿ ಅನುಮತಿ ದೊರೆಯಿತು. ನಾಲ್ಕು ಯೋಜನೆಗಳನ್ನು 15 ಪ್ಯಾಕೇಜ್ಗಳಾಗಿ ವಿಭಾಗ ಮಾಡಲಾಗಿತ್ತು.

ಪ್ರತಿಯೊಂದು ಪ್ಯಾಕೆಜ್ಗೆ ಪ್ರತ್ಯೇಕ ಟೆಂಡರ್ ಕರೆಯಲಾಯಿತು. ಆದರೆ ಟೆಂಡರ್ನಲ್ಲಿ ಹೇಳಲಾದ ಕಾಮಗಾರಿಗಳು ಆ ಸಂದರ್ಭದಲ್ಲಿ ಪ್ರಗತಿಯಲ್ಲಿ ಇದ್ದವು ಎಂಬ ಕುತೂಹಲದ ಸಂಗತಿ ಸಿಎಜಿ ವರದಿಯಲ್ಲಿ ದಾಖಲಾಗಿದೆ. 15 ಪ್ಯಾಕೇಜುಗಳ ಪೈಕಿ ಮೂರು ಪ್ಯಾಕೇಜ್ಗಳಲ್ಲಿ (ಕೋರಮಂಗಲ ಪ್ಯಾಕೇಜ್ 2 ಮತ್ತು 3, ಚಲ್ಲಘಟ್ಟ ಪ್ಯಾಕೇಜ್ 1) ಕಾರ್ಯನಿರ್ವಾಹಕ ಎಂಜಿನಿಯರ್ಗಳು ಆಡಳಿತಾತ್ಮಕ ಒಪ್ಪಿಗೆ ಪಡೆಯುವ ಮುನ್ನವೇ ಕಾಮಗಾರಿ ಆದೇಶ ನೀಡಿದ್ದರು ಎಂಬುದನ್ನು ಸಿಎಜಿ ಪತ್ತೆ ಮಾಡಿದೆ.

ನಮೂನೆ ನೀಡುವಲ್ಲಿ ಅಕ್ರಮ: ಕರ್ನಾಟಕ ಪಾರದರ್ಶಕ ಕಾಯ್ದೆಗೆ ತಂದಿರುವ ತಿದ್ದುಪಡಿಯ ಅನ್ವಯ, ಟೆಂಡರ್ ಸಲ್ಲಿಕೆಗೆ ಕೊನೆಯ ದಿನಾಂಕದವರೆಗೂ ಟೆಂಡರ್ ನಮೂನೆಗಳನ್ನು ಪಡೆಯುವುದಕ್ಕೆ ಅವಕಾಶ ಇದೆ. ಆದರೆ ಚರಂಡಿಗಳಿಗೆ ಸಂಬಂಧಿಸಿದ ಟೆಂಡರ್ ಸಲ್ಲಿಸಲು ನಿಗದಿ ಮಾಡಿದ್ದ ಕೊನೆಯ ದಿನಾಂಕಕ್ಕಿಂತ 15 ದಿನಗಳ ಮೊದಲೇ, ಟೆಂಡರ್ ನಮೂನೆ ನೀಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ನಾಲ್ಕು ಯೋಜನೆಗಳ ಎಲ್ಲ 15 ಪ್ಯಾಕೇಜ್ಗಳಿಗೆ ಸರಿಸುಮಾರು 2 ಅಥವಾ 3 ಟೆಂಡರ್ಗಳು ಮಾತ್ರ ಬರುವಂತೆ ಆಯಿತು ಎಂದು ಸಿಎಜಿ ಕಿಡಿಕಾರಿದೆ.

ಹೆಬ್ಬಾಳ ಮೂರನೆಯ ಪ್ಯಾಕೇಜನ್ನು ತಾಂತ್ರಿಕವಾಗಿ ಅರ್ಹರಲ್ಲದವರಿಗೆ ನೀಡಲಾಯಿತು. ಕೆಲವು ಚರಂಡಿಗಳ ಸುತ್ತಲಿನ ಪ್ರದೇಶಗಳು ಮಳೆಗಾಲದ ಸಂದರ್ಭದಲ್ಲಿ ನೀರಿನಿಂದ ಆವೃತ್ತವಾಗಿದ್ದವು ಎಂಬ ಕಾರಣಕ್ಕೆ, ಒಂಬತ್ತು ಕಾಮಗಾರಿಗಳನ್ನು `ತುರ್ತು' ಎಂದು ಪರಿಗಣಿಸಲಾಯಿತು. ಬಿಬಿಎಂಪಿ ಕೋರಿಕೆಯ ಮೇರೆಗೆ ಸರ್ಕಾರ, ಈ ಕಾಮಗಾರಿಗಳಿಗೆ ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಿತು.

ಬಿಬಿಎಂಪಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಮುನ್ನವೇ, ಗುತ್ತಿಗೆದಾರರು ಈ ಕಾಮಗಾರಿಗಳನ್ನು ತಮಗೇ ನೀಡುವಂತೆ ಕೋರಿಕೆ ಸಲ್ಲಿಸಿದ್ದರು. ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳ ಒಪ್ಪಿಗೆ ದೊರೆಯುವ ಮುನ್ನವೇ, ಕಾರ್ಯನಿರ್ವಾಹಕ ಎಂಜಿನಿಯರ್ಗಳು ಗುತ್ತಿಗೆದಾರರಿಗೆ ಒಪ್ಪಿಗೆ ಪತ್ರ ನೀಡಿದ್ದರು ಎಂದು ಬಿಬಿಎಂಪಿಯಲ್ಲಿನ ಅಕ್ರಮ ಕುರಿತು ಸಿಎಜಿ ಚಾಟಿ ಬೀಸಿದೆ.

ದರ ಸಂಧಾನ: ಹದಿನೈದು ಪ್ಯಾಕೇಜ್ಗಳ ಪೈಕಿ ಎಂಟರಲ್ಲಿ ಮುಖ್ಯ ಎಂಜಿನಿಯರ್ಗಳು ಗುತ್ತಿಗೆದಾರರ ಜೊತೆ ದರ ಸಂಧಾನ ನಡೆಸಿದ್ದಾರೆ. ಟೆಂಡರ್ನಲ್ಲಿ ಗುತ್ತಿಗೆದಾರರ ಘೋಷಿಸಿದ ದರ ಹಾಗೂ ನಂತರದ ದರ ನಡುವೆ ಶೇಕಡ 580ರಷ್ಟು ವ್ಯತ್ಯಾಸ ಕಂಡುಬಂದಿದೆ. ಇದರಿಂದಾಗಿ ಕಾಮಗಾರಿಯ ಮೊತ್ತದಲ್ಲಿ 13.90 ಕೋಟಿ ರೂಪಾಯಿ ಹೆಚ್ಚಳ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೋರಮಂಗಲದ ಎರಡನೆಯ ಪ್ಯಾಕೇಜ್ನಲ್ಲಿ ಭೂಮಿ ಅಗೆಯಲು ಪ್ರತಿ ಘನ ಮೀಟರಿಗೆ ಅಂದಾಜು 40 ರೂಪಾಯಿ ನಿಗದಿ ಮಾಡಲಾಗಿತ್ತು. ಆದರೆ ಗುತ್ತಿಗೆದಾರರು 49 ರೂಪಾಯಿ ನಮೂದಿಸಿದ್ದರು. ದರ ಸಂಧಾನದ ನಂತರ, ಪ್ರತಿ ಘನ ಮೀಟರಿಗೆ 190 ರೂಪಾಯಿ ನಿಗದಿ ಮಾಡಲಾಯಿತು. ಅಂದರೆ ಘೋಷಿತ ದರಕ್ಕಿಂತ ಶೇ 288ರಷ್ಟು ಹೆಚ್ಚಿನ ಮೊತ್ತ ಪಾವತಿಸಲು ಒಪ್ಪಿಕೊಳ್ಳಲಾಯಿತು. ಈ ಕಾಮಗಾರಿಗೆ 2.26 ಕೋಟಿ ರೂಪಾಯಿ ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾದ ಸಂದರ್ಭ ಎದುರಾಯಿತು ಎಂದು ಸಿಎಜಿ ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.