ಶನಿವಾರ, ಜೂನ್ 19, 2021
23 °C
ಅಂತರ ವಿವಿ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿ

ಜೈನ್‌ ತಂಡಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೈನ್‌ ವಿಶ್ವವಿದ್ಯಾನಿಲಯ ತಂಡದವರು ಭುವನೇಶ್ವರದಲ್ಲಿ ನಡೆದ ‘ಕೆಪಿಎಲ್‌-2014’ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಟ್ವೆಂಟಿ-20 ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು.ಕೆಐಐಟಿ ವಿವಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಜೈನ್‌ ತಂಡ 53 ರನ್‌ಗಳಿಂದ ಆಂಧ್ರ ವಿವಿ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಜೈನ್‌ ತಂಡ ಸಮರ್ಥ್‌ (68) ಗಳಿಸಿದ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್‌ ಪೇರಿಸಿತು. ಚಿರಂಜೀವಿ ಅವರು 38 ರನ್‌ ಗಳಿಸಿದರು.ಆಂಧ್ರ ತಂಡ 19.1 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟಾಯಿತು. ಸಿ.ಎ. ಕಾರ್ತಿಕ್‌ (16ಕ್ಕೆ 3) ಮತ್ತು ಸಮರ್ಥ್‌ (20ಕ್ಕೆ 2) ವಿಜೇತ ತಂಡದ ಪರ ಪ್ರಭಾವಿ ಬೌಲಿಂಗ್‌ ಪ್ರದರ್ಶನ ನೀಡಿದರು. ಜೈನ್‌ ತಂಡ ₨ 2 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು. ಸಮರ್ಥ್‌ ಅವರು ಫೈನಲ್‌ನಲ್ಲಿ ‘ಪಂದ್ಯಶ್ರೇಷ್ಠ’ ಎನಿಸಿಕೊಂಡರಲ್ಲದೆ, ‘ಸರಣಿ ಶ್ರೇಷ್ಠ’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.ಸಂಕ್ಷಿಪ್ತ ಸ್ಕೋರ್‌: ಜೈನ್‌ ವಿವಿ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 (ಸಮರ್ಥ್‌ 68, ಚಿರಂಜೀವಿ 38) ಆಂಧ್ರ ವಿವಿ: 19.1 ಓವರ್‌ಗಳಲ್ಲಿ 109 (ಸಿ.ಎ. ಕಾರ್ತಿಕ್‌ 16ಕ್ಕೆ 3, ಸಮರ್ಥ್‌ 20ಕ್ಕೆ 2)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.