ಸೋಮವಾರ, ಮೇ 23, 2022
27 °C

ಜ್ಯೋತಿಷ್ಯ ವಾಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮಾ ಬೆಳಗಾವಿ: ಜನನ 10-5-1988, ಸಮಯ 7-12 ರಾತ್ರಿ.

ಪ್ರಶ್ನೆ: ಡಿಎಡ್ ಮಾಡಿದ್ದೇನೆ. ಸರಕಾರಿ ಉದ್ಯೋಗ, ಆರೋಗ್ಯ, ಪ್ರೇಮ ವಿವಾಹದ ಬಗ್ಗೆ ತಿಳಿಸಿ.

ಉತ್ತರ: ಇವರದು ವೃಶ್ಚಿಕ ಲಗ್ನ, ಶತಭಿಷ ನಕ್ಷತ್ರ, ಕುಂಭರಾಶಿ. ಇವರ ಲಗ್ನವು ಪುಷ್ಕರನವಾಂಶದಲ್ಲಿದ್ದು, ದಗ್ಧರಾಶಿಯಾಗಿ, ಇಲ್ಲಿ ಗುಳಿಕ ಸ್ಥಿತರಿದ್ದಾರೆ. ಈ ಸ್ಥಾನವನ್ನು ಅಷ್ಟಮಾಧಿಪತಿ ಬುಧ ವೀಕ್ಷಿಸುತ್ತಾರೆ. ಲಗ್ನಾಧಿಪತಿ ಕುಜರು ದಗ್ಧರಾಶ್ಯಾಧಿಪರಾಗಿ ಚಥುರ್ತದಲ್ಲಿ ಉಚ್ಛರಾಗಿದ್ದು ಸ್ವನಕ್ಷತ್ರ ಸ್ಥಿತರಿದ್ದಾರೆ. ಇವರಿಗೆ ಯಾವ ಶುಭ ಸಂಬಂಧವೂ ಇಲ್ಲ.ಇದರಿಂದ ಲಗ್ನವು ಪೀಡಿತವಾಗಿದೆ.  ಇವರ ಉದ್ಯೋಗ ಸೂಚಕ ಅಂಶ ಕುಂಡಲಿಯ ಲಗ್ನವು ಕರ್ಕಾಟಕವಾಗಿದ್ದು ಭಾಗ್ಯಾಂಶದಲ್ಲಿದೆ. ಇಲ್ಲಿ ಭಾಗ್ಯಾಧಿಪತಿ ಚಂದ್ರ ಮತ್ತು ಶುಕ್ರ ಸ್ಥಿತರಿದ್ದಾರೆ. ಸರಕಾರಿ ಉದ್ಯೋಗ ಕಾರಕ ರವಿ ಷಷ್ಟದಲ್ಲಿದ್ದಾರೆ. ದಶಮಾಧಿಪತಿ ಕುಜರು ವ್ಯಯದಲ್ಲಿದ್ದಾರೆ. ಹೆಚ್ಚಿನ ಗ್ರಹರು ಶುಭಾಶುಭರಾಗಿದ್ದು ಸರಕಾರಿ ಉದ್ಯೋಗ ಸಿಗಬಹುದಾದರು ಹೆಚ್ಚಿನ ಪ್ರಯತ್ನ, ಖರ್ಚು ವೆಚ್ಚಗಳು ಸೂಚಿತವಾಗುತ್ತವೆ.ಇವರ ಆರೋಗ್ಯ ಸೂಚಕ ಅಂಶಕುಂಡಲಿಯ ಲಗ್ನವು ತುಲಾ ಆಗಿದ್ದು ವ್ಯಯಾಂಶದಲಿದ್ಲೆ. ಲಗ್ನಾಧಿಪತಿ ಶುಕ್ರರು ಸಪ್ತಮ ಸ್ಥಿತರಿದ್ದರೂ, ಪಾಪ ಕರ್ತರಿಗೆ ಒಳಗಾಗಿದ್ದಾರೆ. ಆರೊಗ್ಯಕಾರಕ ರವಿ, ರಾಹು ಮತ್ತು ಕೇತು ಒಡನೆ ವ್ಯಯಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. ಇವು ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಿದೆ.ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ಕರ್ಕಾಟಕವಾಗಿದ್ದು ಭಾಗ್ಯಾಂಶದಲ್ಲಿದೆ. ಲಗ್ನಾಧಿಪತಿ ಚಂದ್ರರು ಅಷ್ಟಮಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ದುಃಸ್ಥಾನ ಸ್ಥಿತರಿದ್ದಾರೆ. ಇವು ಅಶುಭಕರವಾಗಿದ್ದು ಇವರ ಪ್ರೇಮಪ್ರಕರಣದಲ್ಲಿ ಯಶಸ್ಸು ಸಿಗುವುದು ಕಷ್ಟಕರ. ಅಲ್ಲದೇ ದಾಂಪತ್ಯ ಜೀವನವೂ ಅಷ್ಟೇನೂ ಸುಗಮ ವಾಗಿರಲಾರದು. ಹಿರಿಯರ ಒಪ್ಪಿಗೆಯಂತೆ ನಡೆದರೆ, ಮದುವೆ ಆಗುವ ಸಾಧ್ಯತೆ ಇದೆ.ಪರಿಹಾರ: ಕನಕ ಪುಷ್ಯರಾಗ ಧರಿಸಿ. ಸೂರ್ಯನಮಸ್ಕಾರ ಮಾಡಿ. ದೇವೀಮಹಾತ್ಮೆ ಓದಿ. ದುರ್ಗಾ ತ್ರಿಶತಿ ಪಠಿಸಿ.ರವೀಂದ್ರರಾವ್, ರಾಯಚೂರು: ಮಗಳ ಜನನ 11-3-1987, ಸಮಯ 2-55 ರಾತ್ರಿ.

ಪ್ರಶ್ನೆ: ಬಿಇ ಓದಿದ್ದಾಳೆ. ಮದುವೆ ಯಾವಾಗ? ತಿಳಿಸಿ.


ಉತ್ತರ: ಇವರದು ಧನುರ್ ಲಗ್ನ, ಪುನರ್ವಸು ನಕ್ಷತ್ರ, ಕರ್ಕಾಟಕ ರಾಶಿ. ಇವರ ಲಗ್ನವು ದಗ್ಧರಾಶಿಯಾಗಿದ್ದು     ಇಲ್ಲಿ ಯಾವ ಗ್ರಹರೂ ಇಲ್ಲ. ಯಾವ ಶುಭಸಂಬಂಧವೂ ಇಲ್ಲ. ಲಗ್ನಾಧಿಪತಿ ಗುರು ಪುಷ್ಕರ ನವಾಂಶದಲಿ ್ಲಸ್ವಕ್ಷೇತ್ರದಲ್ಲಿದ್ದರೂ ರಾಹು ಗ್ರಸ್ತರಾಗಿ ದಗ್ಧರಾಶಿಯಲ್ಲಿ ತೃತೀಯ ಸ್ಥಿತರಿದ್ದಾರೆ.ಅಲ್ಲದೇ ಪಾಪ ಕರ್ತರಿಗೆ ಒಳಗಾಗಿದ್ದಾರೆ. ಇವರನ್ನು ಪಾಪಿ ಕೇತು ವೀಕ್ಷಿಸುತ್ತಾರೆ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ಕಳತ್ರ ಸೂಚಕ ಸಪ್ತಮವು ಮಿಥುನರಾಶಿಯಾಗಿದ್ದು ಇಲ್ಲಿ ಅಷ್ಟಮಾಧಿಪತಿ ಚಂದ್ರರು ಸ್ಥಿತರಿದ್ದಾರೆ. ಯಾವ ಶುಭಸಂಬಂಧವೂ ಇಲ್ಲ. ಸಪ್ತಮಾಧಿಪತಿ ಬುಧರು ವಕ್ರೀ ಆಗಿ ವೈರಿ ಕುಜ ನಕ್ಷತ್ರದಲ್ಲಿ ಕುಟುಂಬಸ್ಥಾನ ಸ್ಥಿತರಿದ್ದಾರೆ. ಯಾವ ಶುಭಸಂಬಂಧವೂ ಇಲ್ಲ. ಕಳರಕಾರ ಶುಕ್ರರು ಪುಷ್ಕರ ನವಾಂಶದಲ್ಲಿ ಅಷ್ಟಮಾಧಿಪತಿ ಚಂದ್ರ ನಕ್ಷತ್ರದಲ್ಲಿ ಕುಟುಂಬಸ್ಥಾನ ಸ್ಥಿತರಿದ್ದು ಪಾಪಿ ಕೇತು ಮತ್ತು ಅವಯೋಗಿ ಶನಿ ವೀಕ್ಷಿತರಾಗಿದ್ದಾರೆ. ಇವು ಇವರ ಮದುವೆ ನಿಧಾನ ವಾಗಲು ಕಾರಣ ವಾಗಿದೆ.ಇವರ ದಾಂಪತ್ಯ ಸೂಚಕ ನವಾಂಶ ಕುಂಡಲಿಯ ಲಗ್ನವು ವೃಶ್ಚಿಕವಾಗಿದ್ದು ವ್ಯಯಾಂಶದಲ್ಲಿದೆ. ಇಲ್ಲಿ ಜನ್ಮ ಸಪ್ತಮಾಧಿಪತಿ ಬುಧರು ಸ್ಥಿತರಿದ್ದು ರವಿ ಮತ್ತು ಕಾರಕ ಶುಕ್ರರು ಸಪ್ತಮಸ್ಥಿತರಿದ್ದು ಇವರನ್ನು ವೀಕ್ಷಿಸುತ್ತಾರೆ. ಹೆಚ್ಚಿನ ಗ್ರಹರು ಶುಭ ಸ್ಥಿತರಿದ್ದು ಇವರು ಹೊಂದಾಣಿಕೆಗೆ ಸಿದ್ಧರಾದರೆ ಇವರ ದಾಂಪತ್ಯ ಜೀವನ ಉತ್ತಮ ವಾಗಿರುವುದು.ಇವರಿಗೆ ಈಗ ಬುಧ ದೆಶೆ ಶುಕ್ರ ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ ತೃತೀಯ ಶನಿ, ಭಾಗ್ಯ ಗುರು ಇದ್ದಾರೆ. ಇದರಿಂದ ಪ್ರಯತ್ನಿಸಿದರೆ ಈಗ ಮದುವೆ ನಡೆಯಲು ಸಕಾಲ.ಪರಿಹಾರ: ಮಾಣಿಕ್ಯ ಧರಿಸಿ. ಲಲಿತ ತ್ರಿಶತಿ ಪಠಿಸಿ. ಗಣಪತಿ ಹೋಮ ಮಾಡಿಸಿ. ಸಾಯಿಬಾಬಾರನ್ನು ಪೂಜಿಸಿ.ಹೆಸರು ಬೇಡ, ತುಮಕೂರು: ಜನನ 23-3-1948, ಸಮಯ 9-45 ಬೆಳಿಗ್ಗೆ.

ಪ್ರಶ್ನೆ:
ವ್ಯಾಪಾರ ಚೆನ್ನಾಗಿಲ್ಲ. ಸಾಲಸೋಲಗಳು, ಪರಿಹಾರ ತಿಳಿಸಿ.

ಉತ್ತರ: ಇವರದು ವೃಷಭಲಗ್ನ, ಮಖಾ ನಕ್ಷತ್ರ ಸಿಂಹರಾಶಿ. ಇವರ ಲಗ್ನವು ದಗ್ಧರಾಶಿಯಾಗಿದ್ದು, ಲಗ್ನಾಧಿಪತಿ ಶುಕ್ರರು ಭಾವದಲಿ ್ಲಲಗ್ನದಲಿದ್ಲ್ದು, ರಾಹು ಪೀಡಿತರಾಗಿದ್ದಾರೆ. ಇವರನ್ನು ಪಾಪಿ ಕೇತು ಮತ್ತು ವಕ್ರೀ  ಶನಿ ವೀಕ್ಷಿಸುತ್ತಾರೆ. ಬೇರಾವ ಶುಭ ಸಂಬಂಧವೂ ಇಲ್ಲ. ಇದರಿಂದ ಲಗ್ನ ಮತ್ತು ಲಗ್ನಾಧಿಪರು ಪೀಡಿತರಾಗಿದ್ದಾರೆ.ಇವರ ವ್ಯಾಪಾರ ಸೂಚಕ ಸಪ್ತಮವು ವೃಶ್ಚಿಕ ರಾಶಿಯಾಗಿದ್ದು ಇಲ್ಲಿ ಪಾಪಿ ಕೇತು ಸ್ಥಿತರಿದ್ದಾರೆ. ಇವರ ಉದ್ಯೋಗ ಸೂಚಕ ದಶಮವು ಕುಂಭರಾಶಿಯಾಗಿದ್ದು ಇಲ್ಲಿ ಧನಾಧಿಪತಿ ಬುಧರು ರಾಹು ನಕ್ಷತ್ರ ಸ್ಥಿತರಿದ್ದಾರೆ. ಇವರನ್ನು ತೃತೀಯಾಧಿಪತಿ ಚಂದ್ರರು ದಗ್ಧರಾಶಿಯಿಂದ ವೀಕ್ಷಿಸುತ್ತಾರೆ. ಅಲ್ಲದೇ ಪಾಪಿ ಕೇತು ಋಣಸ್ಥಾನದಿಂದ, ವ್ಯಯಾಧಿಪತಿ  ವಕ್ರೀ ಕುಜರು ಸುಖಸ್ಥಾನದಿಂದ ವೀಕ್ಷಿಸುತ್ತಾರೆ. ದಶಮಾಧಿಪತಿ ಶನಿ ವಕ್ರೀ ಆಗಿ ವೈರಿ ಕ್ಷೇತ್ರದಲ್ಲಿ ಕುಜರೊಡನೆ ಸುಖಸ್ಥಾನ ಸ್ಥಿತರಿದ್ದಾರೆ.ಉದ್ಯೋಗ ಸೂಚಕ ದಶಾಂಶ ಕುಂಡಲಿಯ  ಲಗ್ನವು ಕುಂಭವಾಗಿದ್ದು ಕರ್ಮಾಂಶದಲ್ಲಿದೆ. ಲಗ್ನದಲ್ಲಿ ರವಿ ಸ್ಥಿತರಿದ್ದು, ಕುಜ ವೀಕ್ಷಿತರಾಗಿದ್ದಾರೆ. ಧನಲಾಭಾಧಿಪತಿ ಗುರು ನೀಚರಾಗಿ ವ್ಯಯಸ್ಥಿತರಿದ್ದಾರೆ. ಹೆಚ್ಚಿನ ಗ್ರಹರು ಶುಭಸ್ಥಿತರಿದ್ದಾರೆ. ಇವು ಶುಭಾಶುಭಕರವಾಗಿದೆ.ಇವರ ಭಾಗ್ಯ ಸೂಚಕ ತ್ರಿಂಶಾಂಶ ಕುಂಡಲಿಯ ಲಗ್ನವು ಕನ್ಯಾ ಆಗಿದ್ದು ಪುಣ್ಯಾಂಶದಲ್ಲಿದೆ. ಈ ಸ್ಥಾನದಲ್ಲಿ  ್ಲವ್ಯಯಾಧಿಪತಿ ರವಿ ಸ್ಥಿತರಿದ್ದಾರೆ. ಲಗ್ನಾಧಿಪತಿ ಬುಧರು ವೈರಿ ಚಂದ್ರರೊಡನೆ ಅಷ್ಟಮಾಂಶದಲ್ಲಿದ್ದು, ಪಾಪಕರ್ತರಿಗೆ ಒಳಗಾಗಿದ್ದಾರೆ. ಇವರನ್ನು ಪಾಪಿ ಕೇತು, ರಾಹು ಮತ್ತು ಧನ, ಭಾಗ್ಯಾಧಿಪತಿ ಶುಕ್ರರು ವೀಕ್ಷಿಸುತ್ತಾರೆ. ಇವು ಇವರ ಸಮಸ್ಯೆಗಳಿಗೆ ಕಾರಣವಾಗಿದೆ.ಇವರಿಗೆ ಈಗ ಅಷ್ಟಮಾಧಿಪತಿ ಗುರು ದಶಾ ಗುರು ಭುಕ್ತಿ ನಡೆಯುತ್ತಿದ್ದು ಗೋಚಾರದಲ್ಲಿ  ಸಾಡೆಸಾತಿ ಅಷ್ಟಮಗುರು ಇದ್ದಾರೆ. ಇವೂ ಶುಭಕರವಲ್ಲ. ಮುಂದೆ 2012 ರಲ್ಲಿ ಸಾಡೆಸಾತಿ ಮುಗಿದು ಶನಿ ಭುಕ್ತಿ ಬರುವಾಗ ಇವರ ಸಮಸ್ಯೆಗಳು ನಿಧಾನವಾಗಿ ಪರಿಹಾರ ಗೊಳ್ಳುವವು.ಪರಿಹಾರ: ನೀಲಮಣಿ ಧರಿಸಿ. ಕಾಳಿಕಾಮಾತೆಯನ್ನು ಪೂಜಿಸಿ. ಮನೆದೇವರ ಹರಕೆ ತೀರಿಸಿ. ಆದಿತ್ಯ ಹೃದಯ ಪಠಿಸಿ. ಹುರುಳಿದಾನ ಮಾಡಿ.ಹೆಸರು ಬೇಡ ಧಾರವಾಡ: ಮನೆಯ ನಕ್ಷೆ ಕಳಿಸಿದ್ದೇನೆ. ಬದಲಾವಣೆ ಮಾಡಲು ಇಚ್ಛಿಸಿದ್ದು ಅದರ ವಿವರ ನಮೂದಿಸಿದ್ದೇನೆ. ವಾಸ್ತು ದೋಷವಿದ್ದರೆ ತಿಳಿಸಿ.

ಉತ್ತರ: ಇವರ ಮನೆಯ ಪಾಯ ಆಯತಾಕಾರವಾಗಿಲ್ಲ. ಎಲ್ಲ ದಿಕ್ಕುಗಳಲ್ಲೂ ಕಡಿತಗೊಂಡಿದೆ. ಇದು ತೀರಾ ಅಶುಭಕರ. ಮನೆಗೆ ಕಂಪೌಂಡ ಇದ್ದರೂ ಖಾಲಿಜಾಗ ಸುತ್ತಲೂ ಎಷ್ಟಿದೆ ತಿಳಿಸಿಲ್ಲ. ಇದು ಪೂರ್ವ ಮತ್ತು ಉತ್ತರಕ್ಕೆ ಹೆಚ್ಚು ಇರಬೇಕು. ಇವರು ಸ್ನಾನ ಮತ್ತು ಶೌಚಾಲಯ ಕಟ್ಟಲು ಇಚ್ಛಿಸಿರುವ ಸ್ಥಳವು ಈಶಾನ್ಯವಾಗಿದ್ದು, ಇದು ದೇವ ಮೂಲೆಯಾಗಿದೆ.  ಇದು ತೀರಾ  ಅಶುಭಕರ. ಇವರು  ಬಾಯಲರ್ ಇಡಲು ಇಚ್ಛಿಸಿದ ಸ್ಥಳ ನೈರುತ್ಯವಾಗಿದ್ದು, ಇಲ್ಲಿ ಅಗ್ನಿ ಇರುವುದರಿಂದ ಸಂಪತ್ತು ನಾಶವಾಗುತ್ತದೆ. ಸಾಕಷ್ಟು ವಾಸ್ತು ದೋಷವಿದೆ. ಅದ್ದರಿಂದ ಸೂಕ್ತ ವಾಸ್ತು ತಜ್ಞರನ್ನು ಸಂಪರ್ಕಿಸಿ ನಿಮ್ಮ ಮನೆಯನ್ನು ವಾಸ್ತು ಪ್ರಕಾರ ಸರಿ ಪಡಿಸಿ ಕೊಳ್ಳುವುದು ಕ್ಷೇಮಕರ. ರಾಜು, ಮೈಸೂರು: ಮನೆಯಲ್ಲಿ ಅಶಾಂತಿ, ಕಲಹ, ಸಾಲಸೋಲ, ಮನೆಯ ನಕ್ಷೆ ಕಳಿಸಿದ್ದೇನೆ. ದೋಷವಿದ್ದರೆ ತಿಳಿಸಿ.

ಉತ್ತರ: ಇವರ ನಕ್ಷೆಯಂತೆ ಮನೆಯ ಸುತ್ತ ಉತ್ತರ ಮತ್ತು ಪಶ್ಚಿಮಕ್ಕೆ ಖಾಲಿ ಜಾಗವಿಲ್ಲ. ಈ ದೋಷನಿವಾರಣೆಗೆ ಮನೆಯ ಉತ್ತರ ಗೋಡೆಗೆ ವಾಸ್ತು ಯಂತ್ರ, ಮತ್ಸ್ಯಯಂತ್ರ, ಪೂಜಿಸಿ ಸ್ಥಾಪಿಸಿ. ಮನೆಯ ಪಾಯ ಈಶಾನ್ಯದಲ್ಲಿ ಕಡಿತಗೊಂಡಿದೆ. ಇದು ಯಜಮಾನರಿಗೆ ಆರ್ಥಿಕ ಮುಗ್ಗಟು ಮತ್ತು ಅಶಾಂತಿ ತರುತ್ತದೆ. ಪಾಯವನ್ನು ಆಯತಾಕಾರಗೊಳಿಸಿ ಮನೆಗೆ ಸೇರಿಸಿ. ಶೌಚಾಲಯ ಮನೆಯ ಹೊರಗೆ ನೈರುತ್ಯದಲ್ಲಿದೆ. ಇದೂ ಅಶುಭಕರ. ಇದನ್ನು ಪಶ್ಚಿಮಕ್ಕೆ ನಿರ್ಮಿಸಿಕೊಳ್ಳಿ. ಮನೆಗೆ 7 ಬಾಗಿಲು ಮತ್ತು 5 ಕಿಡಕಿ ತೋರಿಸಿದ್ದೀರಿ. ಇದು ಅಶುಭಕರ. ಕಿಡಕಿ ಕೂಡ ಸಮಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಿ. ಉಳಿದಂತೆ ಇವರು  ಹೆಚ್ಚಿನ ವಿವರ ತೋರಿಸಿಲ್ಲವಾಗಿ ವಾಸ್ತು ದೋಷ ಇರುವಂತೆ ಅನಿಸುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.