ಜಕಾರ್ತ(ಎಎಫ್‌ಪಿ): ಇಂಡೋನೇಷ್ಯಾದ ಸುಮಾತ್ರಾದ ಶಿನಾಬುಂಗ್ ಪರ್ವತದಲ್ಲಿ ಭಾರೀ ಜ್ವಾಲಮುಖಿ ಸಂಭವಿಸಬಹುದೆಂಬ ಭೀತಿಯಿಂದ ಸುಮಾರು ಮೂರು ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ.

ಶಿನಾಬುಂಗ್ ಪರ್ವತದಲ್ಲಿ ಜ್ವಾಲಾಮುಖಿ ಹೊಗೆ ಕಾಣಿಸಿಕೊಂಡಿದ್ದು, ದೊಡ್ಡ ಪ್ರಮಾಣದ ಜ್ವಾಲಾಮುಖಿ ಸಂಭವಿಸಬಹುದೆಂದು ಸ್ಥಳೀಯ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ವಕ್ತಾರರು ತಿಳಿಸಿದ್ದಾರೆ.

ಶಿನಾಬುಂಗ್ ಪರ್ವತದ ಸುತ್ತಮುತ್ತಲಿನ ನಾಲ್ಕು ಗ್ರಾಮಗಳ 2,730 ಜನರನ್ನು ಸೈನಿಕರು ಮತ್ತು ಪೊಲೀಸರು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದ್ದಾರೆ. ಗ್ರಾಮಸ್ಥರಿಗೆ 13 ಕಿ.ಮೀ ದೂರದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಕೇಂದ್ರ ಜಾವಾ ಪ್ರದೇಶದಲ್ಲಿ 2010ರಲ್ಲಿ ಸಂಭವಿಸಿದ್ದ ನಿರಂತರ ಜ್ವಾಲಮುಖಿಯಿಂದ 350 ಜನರು ಸಾವನ್ನಪ್ಪಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.