ಮಂಗಳವಾರ, ಮೇ 18, 2021
22 °C

ಟಂಟಂ ಉರುಳಿ ನಾಲ್ವರಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ಪಟ್ಟಣದಿಂದ ಹಿರೇಮುರಾಳಗೆ ಹೋಗುತ್ತಿದ್ದ ಟಂಟಂ ವಾಹನ ಸರೂರ ಕ್ರಾಸ್ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಹಾಗೂ ಐವರು ಪ್ರಯಾಣಿಕರಿಗೆ ತೀವ್ರ ಗಾಯಗಳಾದ ಘಟನೆ ಬುಧವಾರ ಸಂಭವಿಸಿದೆ.ವಾಹನದ ಚಾಲಕ ಹಿರೇಮುರಾಳ ಗ್ರಾಮದ ಪ್ರಕಾಶ ಮೇಟಿ ತೀವ್ರವಾಗಿ ಗಾಯಗೊಂಡಿದ್ದು, ಬಾಗಲಕೋಟೆ ಆಸ್ಪತ್ರೆಗೆ ಸೇರಿಸಲಾಗಿದೆ.ಉಳಿದಂತೆ ಭೀಮಪ್ಪ ವಡ್ಡರ, ಪವಾಡೆಪ್ಪ ವಾಲೀಕಾರ, ಮುದ್ದೇಬಿಹಾಳದ ಯಮನವ್ವ ಮಾದರ ಗಾಯಗೊಂಡಿದ್ದಾರೆ. ವೈದ್ಯಾಧಿಕಾರಿ ಡಾ.ಓಂಕಾರ ಮತ್ತು ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿದರು. ಘಟನಾ ಸ್ಥಳಕ್ಕೆ ಪಿಎಸ್‌ಐ ಅಂಬಿಗೇರ ಭೇಟಿ ನೀಡಿದ್ದರು. ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.