ಶುಕ್ರವಾರ, ಮೇ 14, 2021
25 °C

ಟಟ್ರಾ ವಿವಾದ: ನಿವೃತ್ತ ಸೇನಾಅಧಿಕಾರಿಗಳ ನಿವಾಸದಲ್ಲಿ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಟಟ್ರಾ ಟ್ರಕ್ ಪೂರೈಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಇಬ್ಬರು ನಿವೃತ್ತ ಸೇನಾ ಅಧಿಕಾರಿಗಳು ಹಾಗೂ ವೆಕ್ಟ್ರಾ ಅಧಿಕಾರಿಯ ನಿವಾಸದಲ್ಲಿ ಶೋಧ ನಡೆಸಿತು.ದೆಹಲಿಯ ವಸಂತ್ ಕುಂಜ್‌ನಲ್ಲಿನ ನಿವೃತ್ತ ಬ್ರಿಗೇಡಿಯರ್ ಪಿ.ಸಿ.ದಾಸ್, ನೋಯಿಡಾದಲ್ಲಿರುವ ಕರ್ನಲ್ ಅನಿಲ್ ದತ್ತ ಮತ್ತು ವೆಕ್ಟ್ರಾ ಉದ್ಯೋಗಿ ಅನಿಲ್ ಮಾನಸರಮಣಿ ಅವರ ನಿವಾಸಗಳನ್ನು ಶೋಧಿಸಿದ ಅಧಿಕಾರಿಗಳ ತಂಡ, ಪ್ರಮುಖ ದಾಖಲೆಗಳನ್ನು ವಶಪಡಿಸಿ ಕೊಂಡಿತು. ಈ ಮಧ್ಯೆ ಸಿಬಿಐ, ಬಿಇಎಂಎಲ್ ಅಧ್ಯಕ್ಷ ನಟರಾಜನ್ ಹಾಗೂ ವೆಕ್ಟ್ರಾ ಅಧ್ಯಕ್ಷ ರವೀಂದ್ರ ರಿಶಿ ಅವರನ್ನು ಬುಧವಾರವೂ ವಿಚಾರಣೆಗೆ ಒಳಪಡಿಸಿತು. ಇವರಿಬ್ಬರಿಂದ  ಪ್ರಮುಖ ದಾಖಲೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಸಿಬಿಐ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.