ಭಾನುವಾರ, ಮೇ 16, 2021
28 °C

ಟಾಟಾ ಪವರ್ 4ನೇ ಪವನ ವಿದ್ಯುತ್ ಘಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಗದಗ ಜಿಲ್ಲೆಯಲ್ಲಿ `ಪರಿಶುದ್ಧ ಇಂಧನ ಅಭಿವೃದ್ಧಿ ವ್ಯವಸ್ಥೆ'ಯಡಿ 50.4 ಮೆಗಾವಾಟ್ ಪವನ ವಿದ್ಯುತ್ ಘಟಕ ಆರಂಭಿಸಿದ್ದು, ಕಂಪೆನಿ ಒಟ್ಟು 397 ಮೆಗಾವಾಟ್ ಪವನ ವಿದ್ಯುತ್, 28 ಮೆಗಾವಾಟ್ ಸೌರವಿದ್ಯುತ್ ಘಟಕ ಸ್ಥಾಪಿಸಿದಂತಾಗಿದೆ ಎಂದು ಟಾಟಾ ಪವರ್ ತಿಳಿಸಿದೆ.ಪರಿಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಕಂಪೆನಿ ಆದ್ಯತೆ ನೀಡುತ್ತಿದೆ. ಪರಿಶುದ್ಧ ಇಂಧನ ವಿಭಾಗದಲ್ಲಿ ಗದಗ ಜಿಲ್ಲೆಯದು ಸಂಸ್ಥೆಯ 4ನೇ ಘಟಕ. ವಿಶ್ವಸಂಸ್ಥೆಯ `ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೆಟ್ ಚೇಂಜ್' ಕಾರ್ಯಕ್ರಮದಡಿ ಈ ಘಟಕ ಸ್ಥಾಪಿಸಲಾಗಿದೆ ಎಂದು ಟಾಟಾ ಪವರ್ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಸರ್ದಾನ ಹೇಳಿದ್ದಾರೆ.ಮಹಾರಾಷ್ಟ್ರದ ಖಾಂಡ್ಕೆ, ಗುಜರಾತ್‌ನ ಸಾಮನಾದಲ್ಲಿ ತಲಾ 50.4 ಮೆಗಾವಾಟ್ ಪವನ ವಿದ್ಯುತ್, ಗುಜರಾತ್‌ನ ಮಿಥಾಪುರದಲ್ಲಿ 25 ಮೆಗಾವಾಟ್ ಸೌರ ವಿದ್ಯುತ್ ಘಟಕ ಇವೆ ಎಂದು ಪ್ರಕಟಣೆಯಲ್ಲಿ ಅವರು ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.