ನವದೆಹಲಿ (ಪಿಟಿಐ): `ಕೇಂದ್ರದ ಯುಪಿಎ ಸರ್ಕಾರ ದುರ್ಬಲವಾಗಿರುವ ಕಾರಣ ದೇಶದ ರಾಜಕೀಯ ವಲಯದಲ್ಲಿ ಕ್ಷೋಭೆಯ ವಾತಾವರಣ ಸೃಷ್ಟಿಯಾಗಿದೆ, ಯಾವುದೇ ಸಂದರ್ಭದಲ್ಲಿ ಲೋಕಸಭೆಗೆ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆ ಇದೆ~ ಎಂದು ಯುಪಿಎ ಜತೆ ಬಹಿರಂಗ ಸಂಘರ್ಷಕ್ಕೆ ಇಳಿದಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗುರುವಾರ ತೇಪೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಬುಧವಾರ ಬಹಿರಂಗವಾಗಿ ಟೀಕೆಗಳ ಸುರಿಮಳೆಗರೆದಿದ್ದ ಟಿಎಂಸಿ ಸಂಸದ ಹಾಗೂ ರೈಲ್ವೆ ಸಚಿವ ದಿನೇಶ್ ತ್ರಿವೇದಿ, ಗುರುವಾರ ಅದಕ್ಕೆ ವ್ಯತಿರಿಕ್ತವಾದ ಸಮಜಾಯಿಷಿ ನೀಡಿದ್ದಾರೆ. ಮಧ್ಯಂತರ ಚುನಾವಣೆ ಬೇಕು ಎಂದಿದ್ದ ಅವರು ಇದೀಗ, `ದೇಶಕ್ಕೆ ಚುನಾವಣೆಗಳು ಅನಗತ್ಯ ಹೊರೆ~ ಎಂದು ಉಲ್ಟಾ ಹೊಡೆದಿದ್ದಾರೆ.

`ಆರ್ಥಿಕ ತಜ್ಞರಾಗಿರುವ ಮನಮೋಹನ್ ಸಿಂಗ್ ಅವರಿಗಿಂತ ಉತ್ತಮ ಪ್ರಧಾನಿ ಸಿಗಲು ಸಾಧ್ಯವಿಲ್ಲ. ಅವರ ನೀತಿಗಳಿಂದಾಗಿಯೇ ಆರ್ಥಿಕ ಹಿಂಜರಿತದಂತಹ ಸಂದರ್ಭದಲ್ಲೂ ದೇಶ ಉತ್ತಮ ಆರ್ಥಿಕ ಬೆಳವಣಿಗೆ ಕಂಡಿದೆ~ ಎಂದು ಪ್ರಧಾನಿಯನ್ನು ಪ್ರಶಂಸಿಸಿದ್ದಾರೆ.

`ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿ ದೇಶದ ರಾಜಕೀಯ ಸ್ಥಿತಿಯನ್ನು ವಿಶ್ಲೇಷಿಸಿದ್ದೇನೆ. ಇದರಿಂದ ಪಕ್ಷಕ್ಕೂ ಮತ್ತು ಯುಪಿಎ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಒಬ್ಬ ವ್ಯಕ್ತಿಯಾಗಿ ವಿಚಾರಗಳನ್ನು ತಿಳಿಸುವ, ರಾಜಕೀಯ ಪರಿಸ್ಥಿತಿ ವಿಶ್ಲೇಷಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ನನಗೂ ಇದೆ. ನನ್ನ ಹೇಳಿಕೆಗೂ ನಾನು ಈಗಲೂ ಬದ್ಧ~ ಎಂದು ತ್ರಿವೇದಿ ಹೇಳಿದ್ದಾರೆ.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು `ಯುಪಿಎ ಎಂಬ ಹಡಗನ್ನು ಮುಳುಗಿಸುವ ಅಥವಾ ಅದಕ್ಕೆ ರಂಧ್ರ ಕೊರೆಯುವಂತಹ ವ್ಯಕ್ತಿಯಲ್ಲ~ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣಾ ಫಲಿತಾಂಶದ ನಂತರ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ತ್ರಿವೇದಿ, `ಈ ಫಲಿತಾಂಶದಿಂದ ಕೇವಲ ಸಮಾಜವಾದಿ ಪಕ್ಷಕ್ಕೆ ಮಾತ್ರವಲ್ಲ ಟಿಎಂಸಿಗೂ ಸಂತೋಷವಾಗಿದೆ. ಬಿಜೆಪಿ ಕೂಡ ಮಧ್ಯಂತರ ಚುನಾವಣೆ ಬಯಸುತ್ತದೆ~ ಎಂದಿದ್ದರು.

`ಸಮಾಜವಾದಿ ಪಕ್ಷದಂತೆ ಟಿಎಂಸಿ ಕೂಡ ಲೋಕಸಭೆಗೆ ಮಧ್ಯಂತರ ಚುನಾವಣೆ ಎದುರು ನೋಡುತ್ತಿದೆ.
ಎರಡು ವರ್ಷಗಳ ನಂತರ ನಡೆಯುವ ಚುನಾವಣೆ ಈಗಲೇ ನಡೆದಲ್ಲಿ ಉಭಯ ಪಕ್ಷಗಳಿಗೂ ಲೋಕಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಅವಕಾಶವಿದೆ~ ಎಂದಿದ್ದರು. ಆ ನಂತರ ಕೇಂದ್ರ ಬಜೆಟ್ ಸಂದರ್ಭದಲ್ಲಿ ಈ ರೀತಿಯ ವ್ಯತಿರಿಕ್ತ ಹೇಳಿಕೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮಮತಾ ಅವರ ಆಪ್ತ ವಲಯ ಅಸಮಾಧಾನ ವ್ಯಕ್ತಪಡಿಸಿತ್ತು.

ಮಮತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ಕೋಲ್ಕತ್ತದಲ್ಲಿ ನಡೆಯಲಿರುವ ಟಿಎಂಸಿ ಸಂಸದೀಯ ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚಿಸುವ ಸಾಧ್ಯತೆ ಇದೆ. `ಕೇಂದ್ರ ಯುಪಿಎ ಸರ್ಕಾರ ಸುಭದ್ರವಾಗಿದ್ದು ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಲಿದೆ. ಪೂರ್ವ ನಿಗದಿಯಂತೆ 2014ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ತನ್ನ ಎಲ್ಲ ಮಿತ್ರ ಪಕ್ಷಗಳೊಂದಿಗೆ ಕಾಂಗ್ರೆಸ್ ಉತ್ತಮ ಸಂಬಂಧ ಹೊಂದಿದೆ.

ಮಧ್ಯಂತರ ಚುನಾವಣೆಯ ಭಯ ಬೇಡ~ ಎಂದು ಕಾಂಗ್ರೆಸ್ ನಾಯಕರಾದ ಜಯಂತಿ ನಟರಾಜನ್ ಮತ್ತು ರಾಜೀವ್ ಶುಕ್ಲ ಅವರು ತ್ರಿವೇದಿ ಅವರಿಗೆ ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.