ನರಗುಂದ: ಪಟ್ಟಣದ `ದಿ ನರಗುಂದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ~ದ ಚುನಾವಣೆ ಕಳೆದ ಮಾರ್ಚ್ 19ರಂದು ನಡೆದಿತ್ತು.

ಆದರೆ, ಹೈಕೋರ್ಟ್ ಆದೇಶದ ಪ್ರಕಾರ ಟಿಎಪಿಸಿಎಂಎಸ್ ಚುನಾವಣೆ ಫಲಿತಾಂಶ ಪ್ರಕಟವಾಗಿರಲಿಲ್ಲ. ಕಳೆದ ಮಂಗಳವಾರ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರಿಂದ ಶುಕ್ರವಾರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಟಿಎಪಿಸಿಎಂಎಸ್ನ ಎಲ್ಲ 9 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗಿವೆ.

ಇದರಿಂದ ಕಳೆದ ಹಲವಾರು ವರ್ಷಗಳಿಂದ ಟಿಎಪಿಸಿಎಂಎಸ್ನ ಆಡಳಿತ ಚುಕ್ಕಾಣೆ ಹಿಡಿದಿದ್ದ ಕಾಂಗ್ರೆಸ್ ಬೆಂಬಲಿಗರಿಗೆ ಮುಖ ಭಂಗವಾದಂತಾ ಗಿದ್ದು ಪಟ್ಟಣದಲ್ಲಿ ಬಿಜೆಪಿ ಕಾರ್ಯ ಕರ್ತರು ವಿಜಯೋತ್ಸವ ಆಚರಿಸಿದರು.

ಬೆಳಿಗ್ಗೆ 11ಕ್ಕೆ ಆರಂಭವಾದ ಮತ ಎಣಿಕೆ ಮೊದಲು ಬ ವರ್ಗದ ಷೇರುದಾರರ ಕ್ಷೇತ್ರದ 2 ಸ್ಥಾನಗಳಿಗೆ ನಡೆಯಿತು. ಅದರಲ್ಲಿ ಬಿಜೆಪಿ ಬೆಂಬಲಿತ ಎಂ.ಬಿ.ಜ್ಞಾನೋಪಂತ 736, ಹಾಗೂ ಶಂಕ್ರಗೌಡ ಯಲ್ಲಪ್ಪಗೌಡ್ರ 739 ಮತಗಳನ್ನು ಪಡೆದು ಆಯ್ಕೆಯಾದರು. ಆದರೆ ಕಾಂಗ್ರೆಸ್ ಬೆಂಬಲಿತ ವೆಂಕನಗೌಡ ಪಾಟೀಲ 503, ಶರಣಪ್ಪ ಕಲ್ಲಾಪೂರ 508 ಮತ ಪಡೆದು ಪರಾಭವ ಗೊಂಡರು.

ಚಲಾವಣೆಯಾದ 1286 ಮತಗಳಲ್ಲಿ 12 ಮತಗಳು ತಿರಸ್ಕೃತ ಗೊಂಡವು. ತಾಲ್ಲೂಕಿನ 20 ವ್ಯವ ಸಾಯ ಸೇವಾ ಸಹಕಾರಿ ಸಂಘಗಳಿಂದ ನಡೆದ ಚುನಾವಣೆಯಲ್ಲಿ ಅ ವರ್ಗದ 7 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾದವು.

ಬಿಜೆಪಿ ಬೆಂಬಲಿತ ಎಫ್.ಆರ್ ಪಾಟೀಲ, ಎ.ಎಂ ಹುಡೇದ, ತಿಪ್ಪಣ್ಣ ಕಲಹಾಳ, ರುದ್ರಗೌಡ ಆಡೂರು, ಸಿ.ಎಸ್.ಪಾಟೀಲ, ಎನ್.ಕೆ.ಸೋಮಾ ಪುರ, ಎಂ.ಎಂ.ಮುಳ್ಳೂರು 20 ಮತಗಳಲ್ಲಿ ತಲಾ 11 ಮತ ಪಡೆದು ಆಯ್ಕೆಯಾದರು. ಕಾಂಗ್ರೆಸ್ ಬೆಂಬಲಿತ ದೇಸಾಯಿಗೌಡ ಪಾಟೀಲ, ನಿಂಗಪ್ಪ ಭೂಮಣ್ಣವರ, ಬಿ.ಟಿ ವಾಗಾತಿ, ಎಂ.ಎಚ್ ತಿಮ್ಮನಗೌಡ್ರ, ವಿಠ್ಠಲಗೌಡ ಕರಬಸನಗೌಡ್ರ, ಸಿದ್ದನಗೌಡ ಪಾಟೀಲ, ಸುಭಾಸಗೌಡ ಪಾಟೀಲ ತಲಾ 9 ಮತ ಪಡೆದು ಪರಾಭವಗೊಂಡರು.
ಆದರೆ, ಬಿಜೆಪಿ ಬೆಂಬಲಿತ ನಿಂಗಣ್ಣ ಗಾಡಿಯವರು ಯಾವುದೇ ಮತ ಪಡೆಯಲಿಲ್ಲ. ಒಟ್ಟಾರೆ ಹಲವು ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಗರ ಪಾಲಾಗಿದ್ದ ಆಡಳಿತ ಪ್ರಥಮ ಬಾರಿಗೆ ಬಿಜೆಪಿ ಬೆಂಬಲಿತರ ಪಾಲಾಗುವ ಮೂಲಕ ಹೊಸ ಅಲೆ ಎಬ್ಬಿಸಿದ್ದು ಶಾಸಕ ಸಿ.ಸಿ.ಪಾಟೀಲ ಸೇರಿದಂತೆ ಹಲವು ಮುಖಂಡರಲ್ಲಿ ಹರ್ಷ ಮೂಡಿಸಿದೆ.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಎಂ.ಎಸ್ ಪಾಟೀಲ, ತಾ.ಪಂ ಅಧ್ಯಕ್ಷ ಬಿ.ಎಸ್ ಪಾಟೀಲ, ಎಂ.ಜಿ ಪಾಟೀಲ, ಚಂದ್ರಗೌಡ ಪಾಟೀಲ, ಬಸವರಾಜ ಹುಲಕುಂದ, ಶಿರಹಟ್ಟಿ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.
ಚುನಾವಣಾಧಿಕಾರಿ ಎಸ್.ಎಂ ಉಳ್ಳೇಗಡ್ಡಿ, ಇಕ್ಬಾಲ್ ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.