ಭಾನುವಾರ, ಏಪ್ರಿಲ್ 18, 2021
32 °C

ಟಿಬೆಟನ್ನರ ಪ್ರಧಾನಿ ಆಯ್ಕೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮಶಾಲಾ (ಹಿಮಾಚಲ ಪ್ರದೇಶ) (ಐಎಎನ್‌ಎಸ್): ಟಿಬೆಟ್‌ನಿಂದ ಹೊರಗಿದ್ದು ‘ತ್ರಿಶಂಕು ಸರ್ಕಾರ’ ನಡೆಸುತ್ತಿರುವ ದೇಶಭ್ರಷ್ಟ ಟಿಬೆಟನ್ನರು ಭಾನುವಾರ ತಮ್ಮ ‘ಹೊಸ ಪ್ರಧಾನಿ’ಯ (ಕಲೊನ್ ತ್ರಿಪಾ) ಆಯ್ಕೆಗೆ ಮತ ಚಲಾಯಿಸಲಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾಗುವ ವ್ಯಕ್ತಿ ದಲೈಲಾಮ ಅವರ ಉತ್ತರಾಧಿಕಾರಿಯಾಗಲಿದ್ದಾರೆ.ಗಡೀಪಾರು ಸ್ಥಿತಿಯಲ್ಲಿರುವ ಈ ಜನರು ಈಗ ಹೊಸ ಆಡಳಿತದ ನಿರೀಕ್ಷೆಯಲ್ಲಿದ್ದಾರೆ. ಸಮರ್ಥ, ಸುಸಂಸ್ಕೃತ, ಪಾಶ್ಚಾತ್ಯ ಶಿಕ್ಷಣ ಪಡೆದ ಯುವಕರು ನಾಯಕರಾಗಲಿ ಎಂದು ಹಾರೈಸುತ್ತಿದ್ದಾರೆ. ಲಾಬ್‌ಸಾಂಗ್ ಸಾಂಗೆ, ಟೆನ್ಜಿನ್ ನಮ್ಗಿಯಾಲ್ ಟೆತಾಂಗ್, ತಾಷಿ ನಮ್ಗಿಯಾಲ್ ವಾಂಗ್ಡಿ ಈ ಬಾರಿ ಪ್ರಧಾನಿ ಹುದ್ದೆಯ ಸ್ಪರ್ಧಾ ಕಣದಲ್ಲಿದ್ದಾರೆ.ಗಡೀಪಾರಾದ ಟಿಬೆಟನ್ನರು ಭಾರತ, ನೇಪಾಳ, ಅಮೆರಿಕ, ಯೂರೋಪ್ ದೇಶಗಳು, ಆಸ್ಟ್ರೇಲಿಯಾ ಮುಂತಾದೆಡೆ ನೆಲೆಸಿದ್ದು ಒಟ್ಟು 85,000 ಮತದಾರರಿದ್ದಾರೆ. ಒಟ್ಟು 86 ಪ್ರಾದೇಶಿಕ ಚುನಾವಣಾ ಕಚೇರಿಗಳನ್ನು ತೆರೆಯಲಾಗಿದೆ.ದಲೈಲಾಮ ಸ್ಪಷ್ಟನೆ: ರಾಜಕೀಯ ನಿವೃತ್ತಿಯ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕು ಎಂಬ ದೇಶಭ್ರಷ್ಟ ಟಿಬೆಟ್ ಸಂಸತ್ತಿನ ಕೋರಿಕೆಯನ್ನು ತಳ್ಳಿಹಾಕಿರುವ ದಲೈಲಾಮ ಅವರು, ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.