ಬುಧವಾರ, ಜೂನ್ 16, 2021
22 °C

ಟಿಸಿಎಸ್‌ ಷೇರು ಕುಸಿತ: ರೂ 15,964 ಕೋಟಿ ಸಂಪತ್ತು ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಷೇರುಪೇಟೆಯ ಬುಧವಾರದ ವಹಿವಾಟಿನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್‌) ಷೇರು ಶೇ 3.84ರಷ್ಟು ತೀವ್ರ ಕುಸಿತ ಕಂಡಿದೆ. ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ವರಮಾನ ಕುಸಿಯುವ ಸಾಧ್ಯತೆ ಇದೆ ಎಂದು ‘ಟಿಸಿಎಸ್‌’ ಮುನ್ನೋಟ ನೀಡಿದ ಹಿನ್ನೆಲೆಯಲ್ಲಿ ಷೇರು ಮೌಲ್ಯ ಕುಸಿದಿದೆ. ಇದರಿಂದ ಹೂಡಿಕೆದಾರರ ಸಂಪತ್ತು ₨15,964 ಕೋಟಿಗಳಷ್ಟು ಕರಗಿಹೋ ಗಿದೆ ಎಂದು ಷೇರುಪೇಟೆ ತಜ್ಞರು ಅಂದಾಜು ಮಾಡಿದ್ದಾರೆ.

‘ಬಿಎಸ್‌ಇ’ಯಲ್ಲಿ ದಿನದ ಕೊನೆಗೆ ಪ್ರತಿ ಷೇರು ₨2,040.95ರ ಲೆಕ್ಕದಲ್ಲಿ ವಹಿವಾಟು ನಡೆಸಿದೆ. ಆ ಮೂಲಕ ‘ಟಿಸಿಎಸ್‌’ನ ಮಾರುಕಟ್ಟೆ ಬಂಡವಾಳೀ ಕರಣ ಮೌಲ್ಯ ₨15,964 ಕೋಟಿಗ ಳಷ್ಟು ಕುಸಿತ ಕಂಡು, ₨3.99 ಲಕ್ಷ ಕೋಟಿಗೆ ಬಂದು ನಿಂತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.