ಗುರುವಾರ , ಮೇ 19, 2022
24 °C

ಟೀಮ್ ಇಂಡಿಯಾಕ್ಕೆ ದ್ರಾವಿಡ್ ಹಾರೈಕೆಯ ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಕಾವು ಏರತೊಡಗಿದೆ. ಭಾರತದ ಎಲ್ಲರ ಮನದಲ್ಲಿಯೂ ‘ನಮ್ಮ ತಂಡವೇ ಚಾಂಪಿಯನ್ ಆಗಬೇಕು’ ಎನ್ನುವ ಆಶಯ. ಇದೇ ಆಶಯದೊಂದಿಗೆ ಶುಭಹಾರೈಕೆಗಳನ್ನು ಸಂಗ್ರಹಿಸುತ್ತ ಸಾಗಿರುವ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದ ಕ್ರಿಕೆಟ್ ರಥದಲ್ಲಿ ಮಂಗಳವಾರ ರಾಹುಲ್ ದ್ರಾವಿಡ್ ಹೊಳಪಿನಿಂದ ಹೊಳೆದರು.‘ಬನ್ನಿ ನಮ್ಮೊಂದಿಗೆ ಭಾರತ ಕ್ರಿಕೆಟ್ ತಂಡದ ವಿಜಯಕ್ಕೆ ಹಾರೈಸಿ’ ಎಂದು ಭಾರತ ತಂಡದ ಅಭಿಮಾನಿ ಬಳಗವನ್ನು ಕೈಬೀಸಿ ಕರೆಯುತ್ತಿರುವ ರಥವು ಇಂದಿರಾನಗರದ ಸುತ್ತಲಿನ ಪ್ರದೇಶದಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಬೃಹತ್ ಬ್ಯಾಟ್ ಮೇಲೆ ರಾಹುಲ್ ದ್ರಾವಿಡ್ ಅವರೂ ‘ಬೆಸ್ಟ್ ವಿಷಸ್ ಟು ಟೀಮ್ ಇಂಡಿಯಾ’ ಎನ್ನುವ ಸಂದೇಶದ ಜೊತೆಗೆ ತಮ್ಮ ಹಸ್ತಾಕ್ಷರವನ್ನೂ ಮಾಡಿದರು.ದ್ರಾವಿಡ್ ಹಸ್ತಾಕ್ಷರ ಮಾಡಿ ವಾಹನದಿಂದ ಕೆಳಗೆ ಇಳಿಯುತ್ತಿದ್ದಂತೆಯೇ ತಮ್ಮ ನೆಚ್ಚಿನ ಕ್ರಿಕೆಟಿಗ ಬರೆದ ಸಂದೇಶವೇನೆಂದು ನೋಡಲು ಯುವಕ-ಯುವತಿಯರು ಆಸಕ್ತಿ ತೋರಿದ್ದು ಗಮನ ಸೆಳೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.