ಸೋಮವಾರ, ಏಪ್ರಿಲ್ 19, 2021
33 °C

ಟೆಕ್ಸಾಸ್‌ನಲ್ಲಿ ಗುಂಡಿನ ದಾಳಿ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್ (ಪಿಟಿಐ): ಟೆಕ್ಸಾಸ್ ವಿಶ್ವವಿದ್ಯಾಲಯದ ಬಳಿ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಸೇರಿದಂತೆ ಮೂವರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.ವಿಸ್ಕಾನ್ಸಿನ್‌ನ ಗುರುದ್ವಾರದಲ್ಲಿ ನಡೆದ ಗುಂಡಿನ ದಾಳಿಯ ಬೆನ್ನಹಿಂದೆಯೇ ಸೋಮವಾರ ರಾತ್ರಿ ಮತ್ತೆ ಈ ಗುಂಡಿನ ದಾಳಿ ನಡೆದಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆಯಲ್ಲದೆ, ಇದು ಕಳೆದ ಒಂದು ತಿಂಗಳಲ್ಲಿ ನಡೆದ ನಾಲ್ಕನೇ ಭೀಕರ ಗುಂಡಿನ ದಾಳಿಯಾಗಿದೆ.ಟೆಕ್ಸಾಸ್‌ನ `ಎ ಆ್ಯಂಡ್ ಎಂ~ ವಿಶ್ವವಿದ್ಯಾಲಯದ ಹತ್ತಿರದ ಮನೆಯೊಂದಕ್ಕೆ ಮನೆ ತೆರವುಗೊಳಿಸುವ ನೋಟಿಸ್ ನೀಡಲೆಂದು ಬ್ರಜೋಸ್ ಕೌಂಟಿಯ ಪೊಲೀಸ್ ಕಾನ್‌ಸ್ಟೇಬಲ್ ಬ್ರಯಾನ್ ಬಾಚ್‌ಮನ್ ತೆರಳಿದ್ದ ವೇಳೆ ಅಲ್ಲಿದ್ದ ಶಂಕಿತ ಬಂದೂಕುಧಾರಿ ಗುಂಡು ಹಾರಿಸಿದ.ಇದರಿಂದ ಕಾನ್‌ಸ್ಟೇಬಲ್ ನೆರವಿಗಾಗಿ ಪೊಲೀಸರಿಗೆ ಕರೆ ಮಾಡಿದರು. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು ಬಂದೂಕುಧಾರಿ 35ರ ಹರೆಯದ ಥಾಮಸ್ ಆಲ್ಟನ್ ಕಫಾಲ್ ವಿರುದ್ಧ ಪ್ರತಿದಾಳಿ ನಡೆಸಿದ ವೇಳೆ ಆತ ಮೃತಪಟ್ಟನು.

 

ಘಟನೆ ನಡೆದು ಸ್ವಲ್ಪ ಹೊತ್ತಿನ ಬಳಿಕ ಕಾನ್‌ಸ್ಟೇಬಲ್ ಬಾಚ್‌ಮನ್ ಗುಂಡಿನ ಗಾಯದಿಂದಾಗಿ ಆಸ್ಪತ್ರೆಯಲ್ಲಿ ಅಸುನೀಗಿದರು. 43ರ ಹರೆಯದ ಕ್ರಿಸ್ ನಾರ್ತ್‌ಕ್ಲಿಫ್ ಎಂಬುವವರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಸ್ಕಾಟ್ ಮ್ಯಾಕೊಲಮ್ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.