ಭಾನುವಾರ, ಜೂನ್ 20, 2021
20 °C

ಟೆನಿಸ್‌: ಮೇನಲ್ಲಿ ಬೆಂಗಳೂರಿಗೆ ನಡಾಲ್‌ ಕೋಚ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಅಗ್ರ ರ‍್ಯಾಂಕ್ ನ ಟೆನಿಸ್‌ ಆಟಗಾರ ಸ್ಪೇನ್‌ನ ರಫೆಲ್‌ ನಡಾಲ್ ಅವರ ಕೋಚ್‌ ಫ್ರಾನ್ಸಿಸ್‌ ರೋಯಿಗ್‌ ಮೇನಲ್ಲಿ ಉದ್ಯಾನ ನಗರಿಗೆ ಭೇಟಿ ನೀಡಲಿದ್ದಾರೆ.ಈ ಸಂದರ್ಭದಲ್ಲಿ ಅವರು ಉದಯೋನ್ಮುಖ ಆಟಗಾರರು ಹಾಗೂ ಟೆನಿಸ್‌ ಆಸಕ್ತರಿಗೆ ಕೋಚಿಂಗ್‌ ಕ್ಲಿನಿಕ್‌ ನಡೆಸಿಕೊಡ ಲಿದ್ದಾರೆ. ಅವರನ್ನು ಸ್ಪೋರ್ಟ್ಸ್‌ ಮ್ಯಾನೇಜ್‌ಮೆಂಟ್‌ ಕಂಪನಿ ‘ಬುಲ್‌ಡಾಗ್‌’ ಇಲ್ಲಿಗೆ ಆಹ್ವಾನಿಸಿದೆ.ನಡಾಲ್‌ ಅಲ್ಲದೇ, ಅಲ್ಬೆರ್ಟೊ ಕೋಸ್ತಾ, ಅಲೆಕ್ಸ್‌ ಕೊರೆಟ್ಜಾ, ಫೆಲಿಸಿಯಾನೊ ಲೋಪೆಜ್‌, ಫರ್ನಾಂಡೊ ವಾರ್ಡಸ್ಕೊ, ಮಾರ್ಸೆಲ್‌ ಗ್ರಾನೋಲರ್ಸ್‌, ಟಾಮಿ ರಾಬ್ರೆಡೊ ಅವರಿಗೆ ಸ್ಪೇನ್‌ನ ಫ್ರಾನ್ಸಿಸ್‌   ಮಾರ್ಗದರ್ಶನ ನೀಡಿದ್ದಾರೆ. ಇಲ್ಲಿ ಮೂರು ದಿನ ಅವರು ತರಬೇತಿ ಶಿಬಿರ ನಡೆಸಿಕೊಡಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.