ಗುರುವಾರ , ಜನವರಿ 23, 2020
28 °C

ಟೆನಿಸ್ ಆಟಗಾರ ಜೀವನ್‌ ಬ್ಯಾಗ್ ‘ನಾಪತ್ತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೆನೆಗಲ್‌ನಲ್ಲಿ ನಡೆಯಲಿರುವ ಟೆನಿಸ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿರುವ ಭಾರತದ ಆಟಗಾರ ಜೀವನ್ ನೆಡುಂಚೆಳಿಯನ್ ಅವರ ಬ್ಯಾಗ್ ‘ನಾಪತ್ತೆ’ಯಾದ ಘಟನೆ ನಡೆದಿದೆ.ಜೀವನ್‌ ಐಟಿಎಫ್ ಫ್ಯೂಚರ್  ಟೂರ್ನಿಯಲ್ಲಿ ಆಡಲು ಇಥಿಯೋಪಿಯನ್ ಏರ್‌ಲೈನ್ಸ್‌ನಲ್ಲಿ  ಸೆನೆಗಲ್‌ಗೆ  ಪ್ರಯಾಣಿಸಿದ್ದರು. ಆದರೆ ಅಲ್ಲಿನ ಡಾಕರ್‌ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರ ಬ್ಯಾಗ್ ಇಲ್ಲದಿರುವುದು ಅಚ್ಚರಿ ತರಿಸಿದೆ.ಏರ್‌ಲೈನ್ಸ್‌ನ ಸಿಬ್ಬಂದಿಯ  ನಿರ್ಲಕ್ಷ್ಯದಿಂದಾಗಿ ಜೀವನ್‌ ತಮ್ಮ ಉಡುಪು, ಶೂ ಹಾಗೂ ರ್‍್ಯಾಕೆಟ್‌ ಗಳನ್ನು ಕಳೆದುಕೊಂಡಿದ್ದಾರೆ. ಇನ್ನು ಎರಡು ದಿನಗಳಲ್ಲಿ ಟೂರ್ನಿ ಆರಂಭವಾಗಲಿದೆ. ಆದ್ದರಿಂದ  ಸ್ಥಳೀಯ ಮಾರುಕಟ್ಟೆಯಲ್ಲಿ ಟಿ-ಶರ್ಟ್‌, ಶೂ ಹಾಗೂ ರ್‍್ಯಾಕೆಟ್‌ಗಳನ್ನು ಕೊಂಡುಕೊಳ್ಳಬೇಕಾದ ಪರಿಸ್ಥಿತಿ ಅವರಿಗೆ ಎದುರಾಗಿದೆ. ‘ನನಗೆ ತುಂಬಾ ಬೇಸರವಾಗಿದೆ. ನಾನು ಪಂದ್ಯ ಆಡಬೇಕು ಆದರೆ ನನ್ನ ಬಳಿ ಈಗ ರ್‍್ಯಾಕೆಟ್‌ ಹಾಗೂ ಶೂ  ಇಲ್ಲ. ಇದೀಗ ಎಲ್ಲವನ್ನು ಖರೀದಿ ಸಬೇಕಾಗಿದೆ’ ಎಂದು  ಜೀವನ್ ಪ್ರತಿಕ್ರಿಯಿಸಿದ್ದಾರೆ. ಜೀವನ್ ಇಲ್ಲಿ ನಡೆಯಲಿರುವ ಐಟಿಎಫ್ ಟೂರ್ನಿಯಲ್ಲಿ ಬೋಸ್ನಿಯದ ಆಟಗಾರ ಅಲ್‌ಡಿನ್ ಸೆಟ್‌ಕಿಕ್ ಜೊತೆ ಡಬಲ್ಸ್‌ ವಿಭಾಗದಲ್ಲಿ ಆಡಲಿದ್ದಾರೆ.

ಪ್ರತಿಕ್ರಿಯಿಸಿ (+)